ಬೆಂಗಳೂರು: ರಾಜ್ಯದ 2022ರ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿದೆ. ಫೆ.21ರಿಂದ 26ರವರೆಗೆ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಿಪರೇಟರಿ ಪರೀಕ್ಷೆ ನಡೆಯಲಿದೆ. ಫೆ.21ರಂದು ಪ್ರಥಮ ಭಾಷೆ, ಫೆ.22ರಂದು ಸಮಾಜ ವಿಜ್ಞಾನ, ಫೆ.23ರಂದು ದ್ವಿತೀಯ ಭಾಷೆ, ಫೆ.24ರಂದು ಗಣಿತ, ಫೆ.25ರಂದು ತೃತೀಯ ಭಾಷೆ ಮತ್ತು ಫೆ.26ರಂದು ವಿಜ್ಞಾನ ಪರೀಕ್ಷೆ ನಡೆಯಲಿದೆ.
Tag: ಶಿಕ್ಷಣ ಸುದ್ದಿ
Board Exams: ಈ ರಾಜ್ಯದಲ್ಲಿ 5 ಮತ್ತು 8ನೇ ತರಗತಿಗಳಿಗೂ ಬೋರ್ಡ್ ಪರೀಕ್ಷೆ
Board Exams: ಪಂಜಾಬ್ ಮತ್ತು ರಾಜಸ್ಥಾನದ ಮಾದರಿಯಲ್ಲಿ, ಈಗ ಹರಿಯಾಣ ಕೂಡ 5 ಮತ್ತು 8 ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸುವುದಾಗಿ ಘೋಷಿಸಿದೆ. ಈ ಕುರಿತು ಅಧಿಕೃತ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಅಧಿಸೂಚನೆಯ ಪ್ರಕಾರ, 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಂತೆ, ಈಗ 5 ಮತ್ತು 8 ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ಆಯೋಜಿಸಲಾಗುತ್ತದೆ. ಹೊಸ ಆದೇಶವು ಹರಿಯಾಣ ಶಾಲಾ ಶಿಕ್ಷಣ ಮಂಡಳಿಗೆ (BSEH) ಸಂಯೋಜಿತವಾಗಿರುವ ಅದು ಖಾಸಗಿ ಅಥವಾ ಸರ್ಕಾರಿ ಎಲ್ಲಾ ಶಾಲೆಗಳಿಗೆ […]
ಜ.24 ರಿಂದ 5-9ನೇ ತರಗತಿ ಪುನಾರಂಭ
ಬೆಂಗಳೂರು: ಕೊರೊನಾ ಆತಂಕದ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಬಂದ್ ಮಾಡಿರುವ 1-9ನೇ ತರಗತಿ ಪೈಕಿ 5-9ನೇ ತರಗತಿಗಳನ್ನು ಪುನಾರಂಭಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶಾಲೆಗಳು ಮುಚ್ಚಲ್ಪಟ್ಟಿದ್ದವು. ಅವುಗಳನ್ನು ಪುನರಾರಂಭಿಸುವ ಕುರಿತು ಶುಕ್ರವಾರ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸದ್ಯಕ್ಕೆ ಬಂದ್ ಆಗಿರುವ ಜಿಲ್ಲೆಗಳಲ್ಲಿ […]