ತಾಜಾ ಸುದ್ದಿ

ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ : ಪಡಿತರ ಚೀಟಿದಾರರಿಗೆ 2,500 ರೂ. ನಗದು ಘೋಷಣೆ

  ಚೆನ್ನೈ : ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ರಾಜ್ಯದ 2.6 ಕೋಟಿ ಅಕ್ಕಿ ಪಡಿತರ ಚೀಟಿದಾರರಿಗೆ ಉಡುಗೊರೆ ಮತ್ತು 2,500 ರೂಪಾಯಿ ನಗದು ಘೋಷಿಸಿದ್ದಾರೆ. 2021ರ ಜನವರಿ 4ರಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ನಗದು ಮತ್ತು ಪೊಂಗಲ್ ಗಿಫ್ಟ್ ಬ್ಯಾಗ್ ಗಳನ್ನು ವಿತರಿಸಲಾಗುವುದು. ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಘೋಷಣೆ ಹೊರಬಿದ್ದಿದೆ. ಮದುವೆ, ಹೊಸ ಉದ್ಯಮ ಗಳನ್ನು ಆರಂಭಿಸಲು ‘ಥಾಯ್’ ತಮಿಳು ಮಾಸವನ್ನು ಜನರು ವಿಶೇಷ ಸಂದರ್ಭವೆಂದು ಪರಿಗಣಿಸುತ್ತಾರೆ. ಪೊಂಗಲ್ ಕೂಡ […]

ತಾಜಾ ಸುದ್ದಿ

ಚಾಣಕ್ಯರ ಪ್ರಕಾರ ಪುರುಷ ಯಶಸ್ವಿಯಾಗುವುದು ಈ ರೀತಿಯಿದ್ದಾಗ ಮಾತ್ರ ಸಾಧ್ಯ..

ಚಣಕನ ಮಗ ಚಾಣಕ್ಯ ಅತೀ ಬುದ್ಧಿವಂತರೆನ್ನಿಸಿಕೊಂಡವರು. ಅವರ ನೀತಿಯನ್ನು ಅನುಸರಿಸಿದವನು ಉದ್ಧಾರವಾಗೇ ಆಗುತ್ತಾನೆ ಎನ್ನಲಾಗುತ್ತದೆ. ಅಂಥ ಚಾಣಕ್ಯರು ಯಾವ ಪುರುಷ ತನ್ನ ಪತ್ನಿ ಮತ್ತು ಕುಟುಂಬದೊಂದಿಗೆ ಸಂತೋಷದಿಂದಿರುತ್ತಾನೋ, ಅವನು ಯಶಸ್ಸನ್ನು ಕಾಣುತ್ತಾನೆ ಎಂದಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಚಾಣಕ್ಯರ ಪ್ರಕಾರ ಯಾವ ವ್ಯಕ್ತಿಯ ವೈವಾಹಿಕ ಜೀವನ ಉತ್ತಮವಾಗಿರುತ್ತದೆಯೋ, ಆ ವ್ಯಕ್ತಿಗೆ ಜೀವನದಲ್ಲಿ ಯಶಸ್ಸು ಸಾಧಿಸುವುದು ಕಷ್ಟವಲ್ಲ. ಯಾಕಂದ್ರೆ ಅವನ ಮನಸ್ಸು ಸಕಾರಾತ್ಮಕ ಯೋಚನೆಗಳಿಂದ ತುಂಬಿರುತ್ತದೆ. ಹಾಗಾಗಿ ಆತ ತನ್ನ ಶ್ರಮದಿಂದ, ಒಳ್ಳೆಯತನದಿಂದ ಜೀವನದಲ್ಲಿ […]

ತಾಜಾ ಸುದ್ದಿ

ಚಿನ್ನದ ದರ ಯಾವ ನಗರದಲ್ಲಿ ಎಷ್ಟು ?

  ಬೆಂಗಳೂರು :ನೀವೇನಾದರೂ ಚಿನ್ನ ಖರೀದಿಸಲು ಯೋಚಿಸುತ್ತಿದ್ದರೆ ಇಂದು ಯಾವ ಯಾವ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಬೆಂಗಳೂರಿನಲ್ಲಿ ನಿನ್ನೆ 24 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ 49,960 ರೂ. ಇದ್ದ ಬೆಲೆ ಇಂದು 50,410ಕ್ಕೆ ಏರಿಕೆಯಾಗಿದೆ. ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಇಂದು 1 ಕೆಜಿ ಬೆಳ್ಳಿಗೆ 65,310 ರೂ. ಆಗಿದೆ. ಅಲ್ಪ ಏರಿಳಿತಗಳನ್ನು ಬಿಟ್ಟರೆ 10 ದಿನಗಳಿಂದ ಚಿನ್ನದ ಬೆಲೆಯಲ್ಲಿ ಹೆಚ್ಚೇನೂ ಬದಲಾವಣೆಯಾಗಿಲ್ಲ. ಬೆಂಗಳೂರಿನಲ್ಲಿ 24 ಕ್ಯಾರೆಟ್​ನ 10 ಗ್ರಾಂ […]

ತಾಜಾ ಸುದ್ದಿ

ಬಾವಿಗೆ ಹಾರಿ ಶಿಕ್ಷಕಿ ಆತ್ಮಹತ್ಯೆ

  ಮಂಗಳೂರು, ಡಿ.16: ನಗರದ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಬಿಕರ್ನಕಟ್ಟೆ ನಿವಾಸಿ, ಶಿಕ್ಷಕಿ ಗ್ರೆಟ್ಟಾ ಗೊನ್ಸಾಲ್ವಿಸ್ (53) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ.ಇವರು ಬಿಕರ್ನಕಟ್ಟೆ ಸೌಜನ್ಯ ಲೇನ್‌ನಲ್ಲಿರುವ ತನ್ನ ಮನೆಯ ಆವರಣದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಗ್ರೆಟ್ಟಾ ಅವರು ಪುತ್ರ ಮತ್ತು ಪುತ್ರಿಯ ಜತೆ ಬಿಕರ್ನಕಟ್ಟೆಯಲ್ಲಿ ವಾಸ್ತವ್ಯ ಮಾಡುತ್ತಿದ್ದು, ಆಕೆಯ ಪತಿ ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ನೋಡಿಕೊಳ್ಳುತ್ತಿದ್ದರು. ತಿಂಗಳಿಗೊಮ್ಮೆ ಮಂಗಳೂರಿಗೆ […]

ತಾಜಾ ಸುದ್ದಿ

‘ಹಳ್ಳಿ ಹಕ್ಕಿ’ಗೆ ಗಾಳ ಹಾಕಿತೇ ‘ಬಿಗ್ ಬಾಸ್’ : ದೊಡ್ಮನೆಗೆ ಎಂಟ್ರಿಯಾಗ್ತಾರಾ..!

  ‘ಹಳ್ಳಿ ಹಕ್ಕಿ’ಗೆ ಗಾಳ ಹಾಕಿತೇ ‘ಬಿಗ್ ಬಾಸ್’ : ದೊಡ್ಮನೆಗೆ ಎಂಟ್ರಿಯಾಗ್ತಾರಾ..! ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ 8ನೇ ಆವೃತ್ತಿ ಜನವರಿ 3ನೇ ವಾರದಿಂದ ಆರಂಭವಾಗಲಿದೆ ಎನ್ನಲಾಗ್ತಿದೆ. ಇತ್ತ ಸ್ಪರ್ಧಿಗಳ ಲಿಸ್ಟ್ ಗೆ ಸಿಕ್ಕಾಪಟ್ಟೆ ಊಹಾಪೋಹಗಳು ಹರಿದಾಡ್ತಿವೆ. ಡ್ರೋನ್ , ಪ್ರತಾಪ , ಟಿಕ್ ಟಾಕ್ ಸ್ಟಾರ್ ಗಳಾದ ಸೋನು ಗೌಡ, ಬಿಂದು ಗೌಡ , ಸುದ್ದಿವಾಹಿನಿಯ ಖ್ಯಾತ ನಿರೂಪಕಿ, ಜೊತೆಜೊತೆಯಲಿ ಧಾರಾವಾಹಿಯ ನಟ ಅನಿರುದ್ಧ, ಸರಿಗಮಪ ಹನುಮಂತ ಹೀಗೆ ಅನೇಕರ […]

ತಾಜಾ ಸುದ್ದಿ

ಸಮೀಕ್ಷೆ: ಭಾರತದಲ್ಲಿ ಅತಿಹೆಚ್ಚು ಪುರುಷರು, ಮಹಿಳೆಯರು ಮದ್ಯ ಸೇವನೆ ಮಾಡುವ ರಾಜ್ಯಗಳ ಪಟ್ಟಿ

  ಮದ್ಯದ ಗಮ್ಮತ್ತು ಯಾವ ರಾಜ್ಯದಲ್ಲಿ ಜೋರಾಗಿದೆ, ಯಾವ ರಾಜ್ಯದಲ್ಲಿ ಮಹಿಳೆಯರು, ಪುರುಷರನ್ನು ಮೀರಿಸುತ್ತಿದ್ದಾರೆ ಎನ್ನುವ ಸಮೀಕ್ಷೆಯೊಂದು ಹೊರಗೆ ಬಿದ್ದಿದೆ. ಸಮೀಕ್ಷೆಯಲ್ಲಿ ಹಲವು ಕುತೂಹಲಕಾರಿ ಅಂಶಗಳಿದ್ದು, ಕೆಲವೊಂದು ರಾಜ್ಯಗಳಲ್ಲಿ ಮಹಿಳೆಯರೇ ಪುರುಷರಿಗಿಂತ ಹೆಚ್ಚು ಮದ್ಯದ ದಾಸರಾಗಿದ್ದಾರೆ. ಸಮೀಕ್ಷೆಯಲ್ಲಿ ಗಮನಿಸಬೇಕಾದ ಅಂಶವೇನಂದರೆ, ಭಾರತದ ಒಂದು ರಾಜ್ಯದಲ್ಲಿ ಮದ್ಯಮಾರಾಟ ನಿಷೇಧಿಸಲಾಗಿದೆ. ಆದರೆ, ಆ ರಾಜ್ಯದವರೇ ಮದ್ಯವನ್ನು ಅತಿಹೆಚ್ಚು ಸೇವಿಸುತ್ತಿದ್ದಾರೆ. ಹಾಗಾದರೆ, ಅವರಿಗೆ ಮದ್ಯ ಸಿಗುತ್ತಿರುವುದು ಎಲ್ಲಿಂದ ಎನ್ನುವ ಪ್ರಶ್ನೆಗೆ ಆಯಾಯ ಸರಕಾರ ಉತ್ತರಿಸಬೇಕಿದೆ. ರಾಷ್ಟ್ರೀಯ ಕುಟುಂಬ ಕಲ್ಯಾಣ ಇಲಾಖೆಯ 2019-20ರ […]

ತಾಜಾ ಸುದ್ದಿ

ರೈತರ ಸಾಲಮನ್ನಾ ಕುರಿತಾಗಿ ಮತ್ತೊಂದು ಗುಡ್ ನ್ಯೂಸ್: 57 ಸಾವಿರ ರೈತರ ಸಾಲ ಮನ್ನಾ

  ಬೆಂಗಳೂರು: ಸಾಲಮನ್ನಾ ಪ್ರಯೋಜನ ಪಡೆಯಲು ಕಾಯುತ್ತಿದ್ದ 57 ಸಾವಿರ ರೈತರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಘೋಷಿಸಿದ್ದ ಸಾಲಮನ್ನಾ ಅರ್ಹತೆಗಾಗಿ 57 ಸಾವಿರ ರೈತರು ಕಾಯುತ್ತಿದ್ದರು. ಕಳೆದ ಎರಡು ವರ್ಷದಲ್ಲಿ ಮೂರು ಸಲ ದಾಖಲಾತಿ ಪರಿಶೀಲನೆಯ ನಂತರ 57 ಸಾವಿರ ರೈತರ ಸಾಲ ಮನ್ನಾ ಪ್ರಯೋಜನಕ್ಕೆ ಅರ್ಹತೆ ಪಡೆದುಕೊಂಡಿದ್ದರು. ಇವರೆಲ್ಲ ಸಹಕಾರಿ ಸಂಘಗಳಲ್ಲಿ ಪಡೆದುಕೊಂಡಿದ್ದ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಹೇಳಲಾಗಿದೆ. 57 ಸಾವಿರ ರೈತರ ಸಾಲಮನ್ನಾ ಮಾಡಲು ಹಣಕಾಸು ಇಲಾಖೆಗೆ 295.15 […]

ತಾಜಾ ಸುದ್ದಿ

ಇಂದಿನಿಂದಲೇ ಶಾಲಾಕಾಲೇಜುಗಳನ್ನು ಆರಂಭಿಸುವಂತೆ ಹೊರಟ್ಟಿ ಒತ್ತಾಯ

  ಬೆಂಗಳೂರು,ಡಿ.16- ಶಾಲಾಕಾಲೇಜುಗಳನ್ನು ಮುಚ್ಚಿರುವುದರಿಂದ ಬಾಲ್ಯ ವಿವಾಹ ಸೇರಿದಂತೆ ಅನೇಕ ದುಷ್ಪರಿಣಾಮಗಳು ಆಗುತ್ತವೆ. ಇಂದಿನಿಂದಲೇ ಶಾಲಾಕಾಲೇಜುಗಳನ್ನು ಆರಂಭ ಮಾಡಿ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಒತ್ತಾಯಿಸಿದ್ದಾರೆ. ನಗರದ ಫ್ರೀಡಂಪಾರ್ಕ್‍ನಲ್ಲಿ ನಡೆಯುತ್ತಿರುವ ಖಾಸಗಿ ಶಾಲೆಗಳ ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಮುಖ್ಯಸ್ಥರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಖಾಸಗಿ ಶಾಲೆಗಳು ಸಾಮಾಜಿಕ ಅಂತರ ಕಾಪಾಡಿಕೊಂಡು ತರಗತಿಗಳನ್ನು ನಡೆಸಿ ಎಂದು ಕರೆ ನೀಡಿದರು. ನಮ್ಮ ಊರಿನಲ್ಲಿ ಶಾಲೆ ಮುಚ್ಚಿದ್ದ ಕಾರಣಕ್ಕಾಗಿ 9ನೇ ತರಗತಿಯ ಹುಡುಗಿಗೆ ಮದುವೆ ಮಾಡಿದ್ದಾರೆ. ಬಹಳಷ್ಟು […]

ತಾಜಾ ಸುದ್ದಿ

ಮುಷ್ಕರದಿಂದ 4 ದಿನದಲ್ಲಿ ಸಾರಿಗೆ ಇಲಾಖೆಗೆ ಆದ ನಷ್ಟ ಎಷ್ಟು?

  ಬೆಂಗಳೂರು, ಡಿಸೆಂಬರ್ 15: ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿ ನಾಲ್ಕು ದಿನಗಳ ಅವಧಿ ಸಾರಿಗೆ ನೌಕರರು ಕೈಗೊಂಡಿದ್ದ ಮುಷ್ಕರದಿಂದಾಗಿ ನಾಲ್ಕು ಸಾರಿಗೆ ನಿಗಮಗಳಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಸರ್ಕಾರಿ ನೌಕರರು ಎಂದು ಪರಿಗಣಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ನಾಲ್ಕೂ ಸಾರಿಗೆ ನಿಗಮಗಳ ನೌಕರರು ಮುಷ್ಕರ ಆರಂಭಿಸಿದ್ದರು. ಇದರಿಂದ ರಾಜ್ಯಾದ್ಯಂತ ಸಾರ್ವಜನಿಕ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಸೋಮವಾರ ಸಾರಿಗೆ ಇಲಾಖೆ ಸಿಬ್ಬಂದಿ ತಮ್ಮ ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದು, ಸರ್ಕಾರಿ ಬಸ್‌ಗಳು ರಸ್ತೆಗಿಳಿದಿವೆ. ಇದೀಗ […]

ತಾಜಾ ಸುದ್ದಿ

BIG BREAKING: ಸಾರಿಗೆ ಸಿಬ್ಬಂದಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ

  ಬೆಂಗಳೂರು: ಸಾರಿಗೆ ನೌಕರರ ಬೇಡಿಕೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಮಿತಿಯನ್ನು ರಚನೆ ಮಾಡಲಾಗಿದೆ. ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಮಿತಿ ರಚಿಸಲಾಗಿದ್ದು, ಸಮಿತಿ ಅಧ್ಯಕ್ಷರಾಗಿ ಕೆಎಸ್‌ಆರ್ಟಿಸಿ ಎಂಡಿ ಅವರನ್ನು ನೇಮಕ ಮಾಡಲಾಗಿದೆ. ಸಮಿತಿಯ ಸದಸ್ಯರಾಗಿ ಬಿಎಂಟಿಸಿ, ಈಶಾನ್ಯ ಕರ್ನಾಟಕ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಎಂಡಿಗಳನ್ನು ನೇಮಕ ಮಾಡಲಾಗಿದ್ದು, ಕಾರ್ಯದರ್ಶಿಯಾಗಿ ಕೆಎಸ್‌ಆರ್ಟಿಸಿ ಸದಸ್ಯರ ನೇಮಕ ಮಾಡಲಾಗಿದೆ. ನಿಗಮದ ನೌಕರರಿಗೆ ಆರೋಗ್ಯ ಭಾಗ್ಯ ಯೋಜನೆ ಜಾರಿ, ಅಂತರ ನಿಗಮ ವರ್ಗಾವಣೆಯ ಬಗ್ಗೆ ಸಮಿತಿ ರಚನೆಗೆ ಕ್ರಮ, ನೌಕರರಿಗೆ ಕಿರುಕುಳ ತಡೆಯಲು […]