ರಾಜ್ಯದಲ್ಲಿ ಸೋಂಕಿನ ಪಾಸಿಟಿವಿಟಿ ದರ ಶೇ.6.19ಕ್ಕೆ ಇಳಿಕೆ

 


ಬೆಂಗಳೂರು: ರಾಜ್ಯದಲ್ಲಿ ಸೋಮವಾರ 6,151 ಹೊಸ ಪ್ರಕರಣ ದಾಖಲಾಗಿದ್ದು, 16,802 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಸೋಂಕಿತರ ಪಾಸಿಟಿವಿಟಿ ದರ ಶೇ.6.19ಕ್ಕೆ ಹಾಗೂ ಸಕ್ರಿಯ ಪ್ರಕರಣ 87080 ಕ್ಕೆ ಇಳಿಕೆಯಾಗಿದೆ.

ಸೋಮವಾರ 99,254 ಸ್ಲ್ಯಾಬ್ ಗಳನ್ನು ಪರೀಕ್ಷೆ ಒಳಪಡಿಸಲಾಗಿತ್ತು.ಬೆಂಗಳೂರು ನಗರ 2718, ಬೆಳಗಾವಿ 321, ಮೈಸೂರು 285, ಹಾಸನ 219, ತುಮಕೂರು 210, ಕೊಡಗು 195,ಮಂಡ್ಯ 182, ಶಿವಮೊಗ್ಗ 177, ಧಾರವಾಡ 149, ಚಿತ್ರದುರ್ಗ 161, ಬಳ್ಳಾರಿ 154, ಕೊಪ್ಪಳ 133, ಕಲಬುರಗಿ 117, ಚಾಮರಾಜನಗರ 115,ಚಿಕ್ಕಬಳ್ಳಾಪುರ 102,ಹಾವೇರಿ 102, ಉತ್ತರ ಕನ್ನಡ 106, ದಕ್ಷಿಣ ಕನ್ನಡ 90,ಬೆಂಗಳೂರು ಗ್ರಾಮಾಂತರ 70,ಉಡುಪಿ 85, ಕೋಲಾರ 77, ವಿಜಯಪುರ 73,ಬಾಗಲಕೋಟೆ 60, ಚಿಕ್ಕಮಗಳೂರು 51,ರಾಯಚೂರು 49, ದಾವಣಗೆರೆ 35, ಬೀದರ್‌ 34,ಗದಗ 31,ರಾಮನಗರ 25, ಯಾದಗಿರಿ ಜಿಲ್ಲೆಯ 25ಮಂದಿಯಲ್ಲಿ ಸೋಂಕು ದೃಢಗೊಂಡಿದೆ.

Comments