ಎಸ್‌ಎಸ್‌ಎಲ್ ಸಿ ಪ್ರಿಪರೇಟರಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ

 


ಬೆಂಗಳೂರು: ರಾಜ್ಯದ 2022ರ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿದೆ.

ಫೆ.21ರಿಂದ 26ರವರೆಗೆ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಿಪರೇಟರಿ ಪರೀಕ್ಷೆ ನಡೆಯಲಿದೆ.

ಫೆ.21ರಂದು ಪ್ರಥಮ ಭಾಷೆ, ಫೆ.22ರಂದು ಸಮಾಜ ವಿಜ್ಞಾನ, ಫೆ.23ರಂದು ದ್ವಿತೀಯ ಭಾಷೆ, ಫೆ.24ರಂದು ಗಣಿತ, ಫೆ.25ರಂದು ತೃತೀಯ ಭಾಷೆ ಮತ್ತು ಫೆ.26ರಂದು ವಿಜ್ಞಾನ ಪರೀಕ್ಷೆ ನಡೆಯಲಿದೆ.

Comments