ಬೆಂಗಳೂರು: ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ವೀಕೆಂಡ್ ಕರ್ಪ್ಯೂ ಹಾಗೂ ನೈಟ್ ಕರ್ಪ್ಯೂ ಜಾರಿಗೊಳಿಸಲಾಗಿದೆ. ಸರ್ಕಾರ ಜಾರಿಗೊಳಿಸಿದ್ದಂತ ವೀಕೆಂಡ್ ಕರ್ಪ್ಯೂ ಬಗ್ಗೆ ಅನೇಕರು ಆಕ್ಷೇಪ ವ್ಯಕ್ತ ಪಡಿಸಿದ್ದರು.ಈ ಎಲ್ಲಾ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜನಾಕ್ರೋಶಕ್ಕೆ ಮಣಿದಿದೆ.
ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಕೊರೋನಾ ನಿಯಂತ್ರಣ ಸಭೆಯನ್ನು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಸಲಾಗುತ್ತಿದೆ. ಈ ಸಭೆಯಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು, ಸಚಿವ ಆರ್ ಅಶೋಕ್, ಡಾ.ಕೆ.ಸುಧಾಕರ್, ಅರಗ ಜ್ಞಾನೇಂದ್ರ ಸೇರಿದಂತೆ ವಿವಿಧ ತಜ್ಞರು ಭಾಗವಹಿಸಿದ್ದಾರೆ.
ರಾಜ್ಯದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರೋ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆ ಇದೆ. ಜೊತೆಗೆ 3ನೇ ಅಲೆಯ ತೀವ್ರತೆ ಅಷ್ಟೇನು ಹೆಚ್ಚಾಗಿಲ್ಲ. ಒಂದು ವೇಳೆ ಹೆಚ್ಚಾದ್ರೆ, 3ನೇ ಅಲೆಯ ತೀವ್ರತೆ ವ್ಯಾಪಕವಾದ್ರೇ ಮತ್ತೆ ಕಠಿಣ ನಿಯಮಗಳನ್ನು ಜಾರಿಗೆ ತರಬಹುದು.ಹೀಗಾಗಿ ವೀಕೆಂಡ್ ಕರ್ಪ್ಯೂ ರದ್ದು ಪಡಿಸುವಂತೆ ಸಚಿವರು ಸೇರಿದಂತೆ, ತಜ್ಞರು ಸಿಎಂ ಸಲಹೆ ಮಾಡಿದರು.
ಸಚಿವರು, ತಜ್ಞರ ಸಲಹೆಗೆ ಸಹಮತ ವ್ಯಕ್ತ ಪಡಿಸಿದಂತ ಸಿಎಂ ಬಸವರಾಜ ಬೊಮ್ಮಾಯಿಯವರು ಇಂದು ರಾತ್ರಿಯಿಂದ ಜಾರಿಗೊಳ್ಳ ಬೇಕಿದ್ದಂತ ವೀಕೆಂಡ್ ಕರ್ಪ್ಯೂವನ್ನು ರದ್ದುಗೊಳಿಸೋ ನಿರ್ಧಾರವನ್ನು ಕೈಗೊಂಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಇಂದಿನ ಸಿಎಂ ಸಭೆಯ ಮಹತ್ವದ ನಿರ್ಧಾರವನ್ನು ಸಿಎಂ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಲಿದ್ದಾರೆ.
Comments
Post a Comment