ಶಿವಮೊಗ್ಗ: ಕೋವಿಡ್ ನಡುವೆ ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ವೈರಸ್ ಆತಂಕ ಎದುರಾಗಿದೆ. ಮಲೆನಾಡಿನ ಗ್ರಾಮಗಳಲ್ಲಿ ಕ್ಯಾಸನೂರು ಫಾರೆಸ್ಟ್ ಡಿಸೀಸ್ ಮತ್ತೆ ವಕ್ಕರಿಸಿದೆ.
ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಕೂಡಿಗೆ ಗ್ರಾಮದ 57 ವರ್ಷದ ಮಹಿಳೆಯಲ್ಲಿ ಕೆಎಫ್ ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ದೃಢವಾಗಿದೆ.
ಜಿಲ್ಲೆಯ ಅರಣ್ಯದಂಚಿನ ಗ್ರಾಮಗಳಲ್ಲಿ ಮತ್ತೆ ಕೆಎಫ್ ಡಿ ಆತಂಕ ಹೆಚ್ಚಾಗಿದೆ. ಇತ್ತೀಚೆಗಷ್ಟೇ ಅರಳಗೋಡು ವ್ಯಾಪ್ತಿಯಲ್ಲಿ ಉಣುಗುಗಳಲ್ಲಿ ಪಾಸಿಟಿವ್ ದೃಢಪಟ್ಟಿತ್ತು. ಆರೋಗ್ಯ ಇಲಾಖೆ ಸರ್ವೇಕ್ಷಣೆ ನಡೆಸುವ ಉಣುಗುಗಳಲ್ಲಿ ಪಾಸಿಟಿವ್ ಕಂಡು ಬಂದಿತ್ತು.
Comments
Post a Comment