BIGG NEWS : ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ : ಹೀಗಿದೆ ರಾಜ್ಯ, ಜಿಲ್ಲೆ, ತಾಲೂಕುವಾರ ಅನುದಾನದ ಮೊತ್ತ
ಬೆಂಗಳೂರು: ರಾಜ್ಯ ಸರ್ಕಾರದಿಂದ ( Karantaka Government ) ಜನವರಿ 26, 2022ರಂದು ನಡೆಯಲಿರುವ ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಗಣರಾಜ್ಯೋತ್ಸವ (Republic Day ) ಕಾರ್ಯಕ್ರಮಕ್ಕೆ ಅನುದಾನ ಬಿಡುಗಡೆ ಮಾಡಿದೆ.
ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ನಡವಳಿಗಳನ್ನು ಹೊರಡಿಸಿದ್ದು, ಕೋವಿಡ್ ಸಾಂಕ್ರಾಮಿಕದ ( Coronavirus ) ಹಿನ್ನಲೆಯಲ್ಲಿ 2022ನೇ ವರ್ಷದ ಗಣ ರಾಜ್ಯೋತ್ಸವದ ದಿನಾಚರಣೆಯನ್ನು ( Republic Day Celebration ) ಸರಳವಾಗಿ ಆಚರಿಸೋದಕ್ಕೆ ನಿರ್ಧರಿಸಲಾಗಿದೆ.
ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ರೂ.25 ಲಕ್ಷ, ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಪ್ರತಿ ಜಿಲ್ಲೆಗೆ 1 ಲಕ್ಷ ಹಾಗೂ ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಪ್ರತಿ ತಾಲೂಕಿಗೆ 20 ಸಾವಿರಗಳ ಅನುದಾನವನ್ನು ಬಿಡುಗಡೆ ಮಾಡಲು ತೀರ್ಮಾನಿಸಿರೋದಾಗಿ ತಿಳಿಸಿದ್ದಾರೆ.
ರಾಜ್ಯ ಮಟ್ಟದ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭಕ್ಕೆ, ಬೆಂಗಳೂರು ನಗರದಲ್ಲಿ ದಿನಾಂಕ 26-01-2022ರಂದು ಏರ್ಪಡಿಸುವ ನಿಮಿತ್ತ ಬೆಂಗಳೂರು ನಗರ ಜಿಲ್ಲೆಗೆ ರೂ.25 ಲಕ್ಷಗಳನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ.
30 ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಗೆ ರೂ.1 ಲಕ್ಷದಂತೆ ಒಟ್ಟು 30 ಲಕ್ಷ ಹಾಗೂ 31 ಜಿಲ್ಲೆಗಳಲ್ಲಿನ 232 ತಾಲೂಕುಗಳಿಗೆ ಪ್ರತಿ ತಾಲೂಕಿಗೆ 20 ಸಾವಿರದಂತೆ ರೂ.46,40,000ಗಳನ್ನು ಸಂಬಂಧಪಟ್ಟಂತ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Comments
Post a Comment