7th Pay Commission: ಈ ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ತುಟ್ಟಿಭತ್ಯೆಯಲ್ಲಿ ಶೇಕಡಾ 3 ರಷ್ಟು ಹೆಚ್ಚಳ

January 02, 2022
Sunday, January 2, 2022


ಭುವನೇಶ್ವರ್:ಒಡಿಶಾ ಸರ್ಕಾರವು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು (DA) 3 ಪ್ರತಿಶತದಷ್ಟು ಹೆಚ್ಚಿಸಿದೆ.

ಹೆಚ್ಚಳದ ನಂತರ, ಸರ್ಕಾರಿ ನೌಕರರು ಹಿಂದಿನ ಶೇಕಡಾ 28 ರಷ್ಟು ಡಿಎಯಿಂದ (DA)ಈಗ 31 ಶೇಕಡಾ ಡಿಎ(DA) ಪಡೆಯುತ್ತಾರೆ.

ಈ ಹೆಚ್ಚಳವು ಜುಲೈ 1, 2021 ರಿಂದ ಜಾರಿಗೆ ಬರಲಿದೆ.ಅದೇ ರೀತಿ, ಪಿಂಚಣಿದಾರರಿಗೆ ಡಿಯರ್ನೆಸ್ ರಿಲೀಫ್(DR) ಅನ್ನು 3 ಪ್ರತಿಶತದಷ್ಟು ಹೆಚ್ಚಿಸಲಾಗಿದೆ. ಈ ನಿರ್ಧಾರದಿಂದ 7.5 ಲಕ್ಷ ಒಡಿಶಾ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ರಾಜ್ಯ ಸರ್ಕಾರವು ದುರ್ಗಾ ಪೂಜೆಯ ಸಮಯದಲ್ಲಿ 11 ಪ್ರತಿಶತದಷ್ಟು ಡಿಎಯನ್ನು ಹೆಚ್ಚಿಸಿದ್ದು ಒಟ್ಟು 28 ಪ್ರತಿಶತದಷ್ಟು ಹೆಚ್ಚಳವಾದಂತಾಗಿದೆ.ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಒಡಿಶಾ ಸರ್ಕಾರವು 7 ನೇ ವೇತನ ಆಯೋಗದ ನೌಕರರ ಬಾಕಿಯ ಶೇಕಡಾ 30 ರಷ್ಟು ಪಾವತಿಸಲು ನಿರ್ಧರಿಸಿದೆ. ಇದಕ್ಕೂ ಮೊದಲು, ಅವರು ಜನವರಿ 2016 ರಿಂದ ಆಗಸ್ಟ್ 2017 ರವರೆಗೆ ಹೆಚ್ಚಿಸಿದ ವೇತನದ 50 ಪ್ರತಿಶತವನ್ನು ಪಡೆದರು. ಇದು ರಾಜ್ಯದ 6 ಲಕ್ಷ ಸರ್ಕಾರಿ ನೌಕರರಿಗೆ ಪ್ರಯೋಜನವನ್ನು ನೀಡುತ್ತದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಮತ್ತು ಪಿಂಚಣಿದಾರರಿಗೆ ಡಿಆರ್‌ನೆಸ್ (DR) ಹೆಚ್ಚುವರಿ ಕಂತುಗಳನ್ನು ಬಿಡುಗಡೆ ಮಾಡಲು ಅನುಮೋದನೆ ನೀಡಿದೆ .

Thanks for reading 7th Pay Commission: ಈ ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ತುಟ್ಟಿಭತ್ಯೆಯಲ್ಲಿ ಶೇಕಡಾ 3 ರಷ್ಟು ಹೆಚ್ಚಳ | Tags:

Next Article
« Prev Post
Previous Article
Next Post »

Related Posts

Show comments
Hide comments

1 komentar on 7th Pay Commission: ಈ ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ತುಟ್ಟಿಭತ್ಯೆಯಲ್ಲಿ ಶೇಕಡಾ 3 ರಷ್ಟು ಹೆಚ್ಚಳ

  1. ಇದು ನಮ್ಮ ರಾಜ್ಯದ್ದು ಅಲ್ಲ ಗುರು ಯಕ್ news madtira🤦🤦🤦🤦

    ReplyDelete