ಆನ್ಲೈನ್ ಕ್ಲಾಸ್ ಅವಾಂತರ: ವಿದ್ಯಾರ್ಥಿನಿಯೊಂದಿಗೆ ಬೆತ್ತಲೆ ಫೋಟೋ ವಿನಿಮಯ, ಬ್ಲಾಕ್ ಮೇಲ್; ಪೋಷಕರಿಗೆ ಬಿಗ್ ಶಾಕ್

August 01, 2021


ಮಂಗಳೂರು: ಆನ್ಲೈನ್ ಕ್ಲಾಸ್ ಹಲವು ಅವಾಂತರಕ್ಕೆ ಕಾರಣವಾಗಿದೆ. ಮಕ್ಕಳಿಗೆ ಆನ್ಲೈನ್ ಕ್ಲಾಸ್ ಗಾಗಿ ಪೋಷಕರು ಸ್ಮಾರ್ಟ್ಫೋನ್ ಕೊಡಿಸಿದ್ದಾರೆ. ಆನ್ಲೈನ್ ಕ್ಲಾಸ್ ಮುಗಿದ ನಂತರ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಟ ನಡೆಸುವ ಕುತೂಹಲದಿಂದ ಅವಂತಾರ ಮಾಡಿಕೊಳ್ಳುತ್ತಿದ್ದಾರೆ.

ಮಂಗಳೂರಿನ ಪ್ರತಿಷ್ಠಿತ ಪ್ರೌಢಶಾಲೆಗಳ ಮಕ್ಕಳು ಪೊಲೀಸ್ ಠಾಣೆಗೆ ಅಲೆದಾಡುವಂತಾಗಿದೆ. 8ನೇ ತರಗತಿ ವಿದ್ಯಾರ್ಥಿನಿ ಪರಿಚಯಿಸಿಕೊಂಡ 16 ವರ್ಷದ ಬಾಲಕ ಅಶ್ಲೀಲ ಫೋಟೋ ಕಳುಹಿಸಿದ್ದಾನೆ. ವಿದ್ಯಾರ್ಥಿನಿ ಕೂಡ ಅಶ್ಲೀಲ ಮಾತುಕತೆ ನಡೆಸಿ ಮತ್ತು ಫೋಟೋ ಕಳುಹಿಸಿದ್ದಾಳೆ.

ವಿದ್ಯಾರ್ಥಿನಿಯ ಮೊಬೈಲ್ ನಲ್ಲಿರುವ ಇಮೇಲ್ ಅಕೌಂಟ್ ನಿಂದ ಬಾಲಕನಿಗೆ ಬೆತ್ತಲೆ ಫೋಟೋ ಕಳುಹಿಸಿದ್ದು, ಆಕೆಯ ತಂದೆ ಇ -ಮೇಲ್ ಲಾಗಿನ್ ಆದಾಗ ಬಾಲಕಿ ಮತ್ತು ಬಾಲಕನ ನಡುವೆ ಬೆತ್ತಲೆ ಫೋಟೋ ವಿನಿಮಯವಾಗಿರುವುದು ತಂದೆಗೆ ಗೊತ್ತಾಗಿದೆ.

ಇದರಿಂದ ಆಘಾತಕ್ಕೆ ಒಳಗಾದ ಅವರು ಮಗಳನ್ನು ವಿಚಾರಿಸಿದಾಗ ಈ ಸಂಗತಿ ಬಯಲಾಗಿ ಪೊಲೀಸರಿಗೆ ದೂರು ನೀಡಲಾಗಿದೆ ಎನ್ನಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ವಿದ್ಯಾರ್ಥಿನಿಯ ಬೆತ್ತಲೆ ಫೋಟೋ ಪಡೆದುಕೊಂಡ ಬಾಲಕ ತನ್ನ ಗೆಳೆಯನಿಗೆ ತೋರಿಸಿದ್ದಾನೆ. ಆತನೂ ಕೂಡ ಬಾಲಕಿಯೊಂದಿಗೆ ಚಾಟಿಂಗ್ ಮಾಡಿ ಬೆತ್ತಲೆ ಚಿತ್ರ ಕಳಿಸಿಕೊಡುವಂತೆ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎನ್ನಲಾಗಿದೆ. ಇಂತಹ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರತೊಡಗಿದ್ದು, ಪೊಲೀಸರು, ಶಿಕ್ಷಣ ಇಲಾಖೆ, ಪೋಷಕರು, ಶಾಲಾ ಶಿಕ್ಷಕರು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಲಾಗಿದೆ.

ಶಾಲೆಗಳ ಆರಂಭ ಕುರಿತು ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

August 01, 2021

 


ಬೆಂಗಳೂರು : ರಾಜ್ಯದಲ್ಲಿ ಖಾಸಗಿ ಶಾಲೆಗಳ ಆರಂಭ ಕುರಿತು ಎಲ್ಲ ಆಯಾಮದಲ್ಲಿಯೂ ಚರ್ಚಿಸಿ ಖಾಸಗಿ ಶಾಲಾ ಸಂಘಟನೆಗಳ ಒಕ್ಕೂಟದ ಜೊತೆಯಲ್ಲಿ ಸೌಹಾರ್ದಯುತವಾಗಿ ಚರ್ಚಿಸಿ ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆಯಿಂದ ಶಾಲೆಗಳ ಆರಂಭಕ್ಕೆ ಮುಂದಾಗಿದ್ದ ಖಾಸಗಿ ಶಾಲಾ ಸಂಘಟನೆಗಳ ಒಕ್ಕೂಟಕ್ಕೆ ಸೂಚನೆ ನೀಡಿ, ಸದ್ಯಕ್ಕೆ ಶಾಲೆ ಆರಂಭ ಬೇಡ ಎಂದು ತಿಳಿಸಲಾಗಿದೆ.

ಈ ಸಂಬಂಧ ಮುಂದುವರೆದು ಖಾಸಗಿ ಶಾಲೆಗಳ ಅಸೋಸಿಯೇಷನ್ ಜೊತೆ ಮಾತುಕತೆ ನಡೆಸಿದ್ದೇನೆ. ಮತ್ತೆ ಅವರ ಸಂಘಟನೆ ಜೊತೆ ಚರ್ಚೆ ಮಾಡುತ್ತೇನೆ ಎಂದರು.ಶಾಲೆಗಳ ಆರಂಭ ಕುರಿತು ಬೇರೆ ಬೇರೆ ರಾಜ್ಯದಲ್ಲಿರುವ ಸ್ಥಿತಿಗತಿ ಮತ್ತು ನಮ್ಮ ರಾಜ್ಯದಲ್ಲಿ ಪರಿಸ್ಥಿತಿ ಯಾವ ರೀತಿ ಇದೆ.
ಈ ಸಂಬಂಧ ಮುಂದುವರೆದು ಖಾಸಗಿ ಶಾಲೆಗಳ ಅಸೋಸಿಯೇಷನ್ ಜೊತೆ ಮಾತುಕತೆ ನಡೆಸಿದ್ದೇನೆ. ಮತ್ತೆ ಅವರ ಸಂಘಟನೆ ಜೊತೆ ಚರ್ಚೆ ಮಾಡುತ್ತೇನೆ ಎಂದರು.ಶಾಲೆಗಳ ಆರಂಭ ಕುರಿತು ಬೇರೆ ಬೇರೆ ರಾಜ್ಯದಲ್ಲಿರುವ ಸ್ಥಿತಿಗತಿ ಮತ್ತು ನಮ್ಮ ರಾಜ್ಯದಲ್ಲಿ ಪರಿಸ್ಥಿತಿ ಯಾವ ರೀತಿ ಇದೆ.