ಮಕ್ಕಳು ಸೋಂಕನ್ನು ಉತ್ತಮವಾಗಿ ನಿಭಾಯಿಸಬಲ್ಲ ಕಾರಣ ಮೊದಲು ಪ್ರಾಥಮಿಕ ಶಾಲೆಗಳನ್ನು ತೆರೆಯಿರಿ ICMR ನಿಂದ ಮಹತ್ವದ ಸಲಹೆ

 ನವದೆಹಲಿ: ಮಕ್ಕಳು ವೈರಲ್ ಸೋಂಕನ್ನು ಹೆಚ್ಚು ಉತ್ತಮವಾಗಿ ನಿಭಾಯಿಸಬಹುದು ಎನ್ನುವ ಕಾರಣದಿಂದ ಪ್ರಾಥಮಿಕ ಶಾಲೆಗಳನ್ನು ಮೊದಲು ತೆರೆಯಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಶಿಫಾರಸು ಮಾಡಿದೆ. ಇದಕ್ಕೆ ಸಂಬಂಧಪಟ್ಟಂತೆ ಅಂದ್ರೆ ಶಾಲೆ ತೆರೆಯುವುದಕ್ಕೆ ಸಂಬಂಧಪಟ್ಟಂಥೆ ಸಿಬ್ಬಂದಿ ಮತ್ತು ಶಿಕ್ಷಕರಿಗೆ ಲಸಿಕೆ ನೀಡಬೇಕು ಎಂದು ಐಸಿಎಂಆರ್ ಜುಲೈ 20 ರಂದು ಆರೋಗ್ಯ ಸಚಿವಾಲಯದ ಸಂಕ್ಷಿಪ್ತ ಸಭೆಯಲ್ಲಿ ಹೇಳಿದೆ.


ಮಕ್ಕಳು ವಯಸ್ಕರಿಗಿಂತ ವೈರಲ್ ಸೋಂಕುಗಳನ್ನು ಚೆನ್ನಾಗಿ ನಿಭಾಯಿಸಬಲ್ಲರು ಎಂದು ನಮಗೆ ಸ್ಪಷ್ಟವಾಗಿ ತಿಳಿದಿದೆ.

ಆಂಟಿಬಾಡಿ ಎಕ್ಸ್ ಪೋಶರ್ ಕೂಡ ವಯಸ್ಕರಂತೆ ಮಕ್ಕಳಲ್ಲಿ ಹೋಲುತ್ತದೆ. ಕೆಲವು ಸ್ಕ್ಯಾಂಡಿನೇವಿಯನ್ ದೇಶಗಳು ತಮ್ಮ ಪ್ರಾಥಮಿಕ ಶಾಲೆಗಳನ್ನು ಯಾವುದೇ ಕೋವಿಡ್ ಅಲೆಗಳಲ್ಲಿ ಮುಚ್ಚಲಿಲ್ಲ', ಎಂದು ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಹೇಳಿದರು.

ಇದೇ ವೇಳೆ ಐಸಿಎಂಆರ್ ನ ನಾಲ್ಕನೇ ರಾಷ್ಟ್ರೀಯ ಸೆರೋಸಮೀಕ್ಷೆಯನ್ನು ಸಹ ಬಿಡುಗಡೆ ಮಾಡಲಾಯಿತು ಸುಮಾರು 40 ಕೋಟಿ ಜನರು ಇನ್ನೂ ಕೋವಿಡ್-19 ಸೋಂಕಿಗೆ ತುತ್ತಾಗಿದ್ದಾರೆ ಎಂದು ತೋರಿಸಿದೆ, ಆದರೆ ಆರು ವರ್ಷಕ್ಕಿಂತ ಮೇಲ್ಪಟ್ಟಂತೆ ನಮ್ಮ ದೇಶದ ಜನಸಂಖ್ಯೆಯ ಮೂರನೇ ಎರಡರಷ್ಟು ಜನರು ಸಾರ್ಸ್-ಕೋವಿ-2 ಪ್ರತಿಕಾಯಗಳನ್ನು ಹೊಂದಿದ್ದಾರೆ ಅಂತ ತಿಳಿಸಿದೆ. ಸಂಶೋಧನೆಗಳು ಭರವಸೆಯ ಕಿರಣವಿದೆ ಎಂದು ತೋರಿಸುತ್ತವೆ, ಆದರೆ ಸಂತೃಪ್ತಿಗೆ ಅವಕಾಶವಿಲ್ಲ ಮತ್ತು ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸಬೇಕಾಗಿದೆ ಎಂದು ಸರ್ಕಾರ ಹೇಳಿದೆ.ಇತ್ತೀಚಿನ ರಾಷ್ಟ್ರೀಯ ಸೆರೋಸಮೀಕ್ಷೆಯಲ್ಲಿ 6 ವರ್ಷಕ್ಕಿಂತ ಮೇಲ್ಪಟ್ಟ ಭಾರತದ ಜನಸಂಖ್ಯೆಯ ಮೂರನೇ ಎರಡರಷ್ಟು ಅಥವಾ ಶೇಕಡಾ 67.6 ರಷ್ಟು ಜನರು ಸಾರ್ಸ್-ಕೋವಿ-2 ಪ್ರತಿಕಾಯಗಳನ್ನು ಹೊಂದಿರುವುದು ಕಂಡುಬಂದಿದೆ ಎಂದು ಹೇಳಿದರು.

Comments