ನಿರ್ಣಾಯಕ ಹೋರಾಟಕ್ಕೆ ಅಣಿ: ಸರ್ಕಾರಿ ನೌಕರರ ವೇತನ ತಾರತಮ್ಯ; ವ್ಯತ್ಯಾಸ ಅಧ್ಯಯನಕ್ಕೆ ನಿವೃತ್ತರ ನೆರವು

July 20, 2021
Tuesday, July 20, 2021

 


ಕೇಂದ್ರ ಸರ್ಕಾರಿ ನೌಕರರ ವೇತನಕ್ಕೂ ರಾಜ್ಯ ಸರ್ಕಾರಿ ನೌಕರರ ವೇತನಕ್ಕೂ ಅಜಗಜಾಂತರ ವ್ಯತ್ಯಾಸ ಇದ್ದು, ಇದು ಬಹು ವರ್ಷದ ಚರ್ಚಾ ವಿಷಯ. ಆದರೀಗ ರಾಜ್ಯ ಸರ್ಕಾರಿ ನೌಕರರು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ನಿರ್ಣಾಯಕ ಹೋರಾಟಕ್ಕೆ ಸಜ್ಜಾಗಿದ್ದಾರೆ.

ಹೋರಾಟಕ್ಕೆ ಮುನ್ನ ಸರ್ಕಾರಕ್ಕೆ ಅರ್ಥಮಾಡಿಸಲು ವೈಜ್ಞಾನಿಕ ಅಧ್ಯಯನ ವರದಿಯನ್ನು ಸಲ್ಲಿಸಲು ರಾಜ್ಯ ಸರ್ಕಾರಿ ನೌಕರರ ಸಂಘ ನಿರ್ಧರಿಸಿದ್ದು, ಈ ಸಂಬಂಧ ತಜ್ಞರ ಸಮಿತಿ ರಚಿಸಿದೆ. ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ಪಳಗಿ ನಿವೃತ್ತರಾದ ಅಧಿಕಾರಿಗಳು ಈ ಪ್ರಯತ್ನಕ್ಕೆ ಬೆಂಬಲವಾಗಿ ನಿಲ್ಲುತ್ತಿದ್ದು, ಸಮಿತಿಯಲ್ಲಿ ಜವಾಬ್ದಾರಿ ಪಡೆದá-ಕೊಂಡಿದ್ದಾರೆ ಎಂಬುದು ವಿಶೇಷ ಸಂಗತಿ.

ಈ ತಂಡ ಕೇಂದ್ರ ಸರ್ಕಾರ ವಿವಿಧ ಹುದ್ದೆಗಳಿಗೆ ನೀಡುವ ವೇತನ, ಭತ್ಯೆ, ಸೌಲಭ್ಯಗಳು ಮತ್ತು ವಿವಿಧ ರಾಜ್ಯಗಳಲ್ಲಿ ನೀಡುವ ವೇತನ, ಭತ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕರ್ನಾಟಕದ ಸರ್ಕಾರಿ ನೌಕರರಿಗೆ ಆಗುತ್ತಿರುವ ವ್ಯತ್ಯಾಸವನ್ನು ವಿಶ್ಲೇಷಣೆ ಮಾಡಿ ವರದಿ ತಯಾರಿಸಲಿದೆ.

ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ವೇತನ ಆಯೋಗದ ಅಧ್ಯಕ್ಷರಿಗೆ ವರದಿ ಸಲ್ಲಿಸಲಾಗುತ್ತದೆ.

ಈಗ ಈ ವಿಚಾರವೇಕೆ?: ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ವೇತನ ಸರಿಸಮಾನ ನೀಡಬೇಕೆಂಬ ಬೇಡಿಕೆ ಹಲವು ವರ್ಷದ್ದು. ನಾವು ಮಾಡುವ ಕೆಲಸವನ್ನೇ ಅವರೂ ಮಾಡುವುದು ನಾವು ತಿನ್ನುವುದನ್ನೇ ಅವರೂ ತಿನ್ನುತ್ತಾರೆ. ಹಾಗಿದ್ದರೂ ವೇತನ ವ್ಯತ್ಯಾಸ ಏಕೆ ಎಂಬುದು ರಾಜ್ಯ ಸರ್ಕಾರಿ ನೌಕರರ ಪ್ರಶ್ನೆಯಾಗಿದೆ.

ಇನ್ನು 2022-23ರಲ್ಲಿ ಸರ್ಕಾರಿ ನೌಕರರ ಪೇ ಸ್ಕೇಲ್ ಬದಲಾಗಬೇಕಿದೆ. ಈ ವೇಳೆ ವೇತನ ತಾರತಮ್ಯ ಸರಿಯಾಗಬೇಕೆಂಬ ಹಠ ಸರ್ಕಾರಿ ನೌಕರರ ಸಂಘದ್ದಾಗಿದೆ. ಇದೇ ಕಾರಣಕ್ಕೆ ತಾಲೀಮು ಆರಂಭಿಸಿದೆ. ಪ್ರಸ್ತುತ ಸರ್ಕಾರಿ ನೌಕರರಿಗೆ ನೀಡುತ್ತಿರುವ ಸಂಬಳವು ಬೆಂಗಳೂರಿನಲ್ಲಿ ಮಾಸಿಕ 17,050 ರೂ. ಇದ್ದರೆ, ಗ್ರಾಮೀಣ ಭಾಗದಲ್ಲಿ 14,700 ರೂ. ಇದೆ. ಬೆಂಗಳೂರಿನಲ್ಲಿ ದೊರೆಯುವ ಗರಿಷ್ಠ ಸಂಬಳವು 1,38,500 ರೂ.ಗಳು. ಈ ಮೊತ್ತದಲ್ಲಿ ಅವರಿಗೆ ಅರ್ಹ ಇರುವ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ ಸೇರಿದೆ.

26 ರಾಜ್ಯದಲ್ಲಿ ಸಮಾನ: ದೇಶದ 26 ರಾಜ್ಯಗಳು ಕೇಂದ್ರ ನೀಡುವ ವೇತನವನ್ನೇ ತಮ್ಮ ನೌಕರರಿಗೆ ನೀಡುತ್ತಿದೆ. ಕರ್ನಾಟಕದಲ್ಲಿ ಮಾತ್ರ ಕುಂಟು ನೆಪಗಳನ್ನು ಹೇಳಿಕೊಂಡು ಮುಂದೂಡಲಾಗುತ್ತಿದೆ ಎಂಬ ಆರೋಪವಿದೆ. ವೇತನ ವ್ಯತ್ಯಾಸ ಸರಿಪಡಿಸಬೇಕೆಂದು ನ್ಯಾಯಾಲಯದಲ್ಲೂ ತೀರ್ಪಬಂದಿವೆ, ಕಾಲಕಾಲಕ್ಕೆ ತೀರ್ವನಗಳು ಆಗಿಲ್ಲ. ಈಗ ಆಗಬಹುದೆಂಬ ವಿಶ್ವಾಸವಿದೆ. ನಮ್ಮ ಬೇಡಿಕೆಗೆ ಸ್ಪಂದನೆ ಸಿಗದೇ ಹೋದರೆ ಸಮಸ್ತ ನೌಕರರು ಒಟ್ಟಾಗಿ ಹೋರಾಟಕ್ಕಿಳಿ ಯುವುದು ಖಚಿತ ಎಂದು ನೌಕರರ ಸಂಘದ ಪದಾಧಿಕಾರಿಗಳು ಹೇಳುತ್ತಿದ್ದಾರೆ.

ಸಾವಿರಾರು ವ್ಯತ್ಯಾಸ: ಕೇಂದ್ರ ಸರ್ಕಾರದ ನೌಕರರು ಮತ್ತು ರಾಜ್ಯ ಸರ್ಕಾರ ನೌಕರರ ವೇತನದಲ್ಲಿ ನೂರಿನ್ನೂರು ರೂಪಾಯಿ ವ್ಯತ್ಯಾಸವಿಲ್ಲ, ಬದಲಿಗೆ ಮಾಸಿಕ 10 ಸಾವಿರದಿಂದ 20 ಸಾವಿರ ರೂ.ನಷ್ಟು ವ್ಯತ್ಯಾಸ ಕಾಣಿಸುತ್ತಿದೆ. ಕೆಲವು ಹುದ್ದೆಗಳಲ್ಲಿ 30 ಸಾವಿರದಷ್ಟು ಅಂತವಿದೆ. ಸಣ್ಣಪುಟ್ಟ ವ್ಯತ್ಯಾಸವಿದ್ದರೆ ಸಹಿಸಿಕೊಳ್ಳಬಹುದಿತ್ತು, ಆದರೆ ಪೇ ಸ್ಕೇಲ್ ಬದಲಾದಾಗಲೆಲ್ಲ ಅಂತರ ಹೆಚ್ಚಾಗುತ್ತಲೇ ಇದೆ. ಇದನ್ನು ಸರಿಪಡಿಸಿಕೊಡಿ ಎಂಬುದು ನಮ್ಮ ಆಗ್ರಹ ಎಂದು ಸರ್ಕಾರಿ ನೌಕರರ ಸಂಘ ತಿಳಿಸಿದೆ.

ವ್ಯತ್ಯಾಸ ಯಾವ ರೀತಿ..?: ಭತ್ಯೆಗಳು, ರಿಸ್ಕ್ ಅಲೊಯನ್ಸ್, ಎಚ್​ಆರ್​ಎ.. ಹೀಗೆ ವೇತನವಲ್ಲದ ರೂಪದಲ್ಲಿ ನೀಡುವ ಸೌಲಭ್ಯಗಳಲ್ಲೂ ತಾರತಮ್ಯವಿದೆ. ನಾವೂ ಸರ್ಕಾರಿ ಕೆಲಸವನ್ನೇ ಮಾಡುವುದು, ನಮಗೂ ಕೇಂದ್ರದಲ್ಲಿ ನೀಡುವ ಭತ್ಯೆ, ಸೌಲಭ್ಯಗಳು ಸಿಗಬೇಕು ಎಂಬುದು ರಾಜ್ಯ ಸರ್ಕಾರಿ ನೌಕರರ ಸಂಘ ವಾದ. ಆರು ತಿಂಗಳಿಗೊಮ್ಮೆ ಕೇಂದ್ರ ಸರ್ಕಾರ ಡಿಎ ಘೋಷಣೆ ಮಾಡಿದರೆ ಅದಕ್ಕಿಂತ ಶೇ.004 ಕಡಿಮೆ ಡಿಎ ಘೋಷಣೆ ರಾಜ್ಯದಲ್ಲಾಗುತ್ತದೆ.

ವೇತನ ವ್ಯತ್ಯಾಸದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಎಕ್ಸ್​ಪರ್ಟ್ ಕಮಿಟಿ ರಚಿಸಿದ್ದೇವೆ. ವರದಿ ಬಂದ ಕೂಡಲೇ ಸರ್ಕಾರಕ್ಕೆ ಸಲ್ಲಿಸುತ್ತೇವೆ. ಸಮಸ್ತ ಸರ್ಕಾರಿ ನೌಕರರ ಬೇಡಿಕೆಯನ್ನು ಸರ್ಕಾರ ಪರಿಗಣಿಸಲೇಬೇಕು. ಇಲ್ಲವಾದರೆ ಹೋರಾಟ ಮಾಡುತ್ತೇವೆ, ಯಾವುದೇ ಕಾರಣಕ್ಕೂ ಕಾಂಪ್ರಮೈಸ್ ಆಗಲ್ಲ.

| ಸಿ.ಎಸ್.ಷಡಾಕ್ಷರಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ
Thanks for reading ನಿರ್ಣಾಯಕ ಹೋರಾಟಕ್ಕೆ ಅಣಿ: ಸರ್ಕಾರಿ ನೌಕರರ ವೇತನ ತಾರತಮ್ಯ; ವ್ಯತ್ಯಾಸ ಅಧ್ಯಯನಕ್ಕೆ ನಿವೃತ್ತರ ನೆರವು | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ನಿರ್ಣಾಯಕ ಹೋರಾಟಕ್ಕೆ ಅಣಿ: ಸರ್ಕಾರಿ ನೌಕರರ ವೇತನ ತಾರತಮ್ಯ; ವ್ಯತ್ಯಾಸ ಅಧ್ಯಯನಕ್ಕೆ ನಿವೃತ್ತರ ನೆರವು

Post a Comment