BIG NEWS: ಆಗಸ್ಟ್ ಮೊದಲ ವಾರದಿಂದ ಶಾಲೆ ಆರಂಭ

July 22, 2021
Thursday, July 22, 2021

 


ಬೆಂಗಳೂರು: ಶಾಲೆಗಳನ್ನು ಆರಂಭಿಸಲು ಮುಂದಾದರೆ ಮೊದಲಿಗೆ ಪ್ರಾಥಮಿಕ ಹಂತದ ಶಾಲೆಗಳನ್ನು ಆರಂಭಿಸುವುದು ಉತ್ತಮ ಎಂದು ಐಸಿಎಂಆರ್ ಸಲಹೆ ನೀಡಿದೆ.

ರಾಜ್ಯದಲ್ಲಿ ಆಗಸ್ಟ್ ಮೊದಲ ವಾರದಿಂದ ಶಾಲೆ, ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಚಿಂತಿಸಿದೆ. ಹಂತ ಹಂತವಾಗಿ ಶಾಲೆ-ಕಾಲೇಜುಗಳನ್ನು ಆರಂಭಿಸಲಾಗುವುದು ಎಂದು ಹೇಳಲಾಗಿದೆ.

ಮೊದಲಿಗೆ 10, 12 ನೇ ತರಗತಿ, ನಂತರ 8,9 ಮತ್ತು 11 ನೇ ತರಗತಿಗಳನ್ನು ಆರಂಭಿಸಲಾಗುವುದು. ಬಳಿಕ 5, 6, 7 ನೇ ತರಗತಿ ಮಕ್ಕಳಿಗೆ ವಿದ್ಯಾಗಮ ಆರಂಭಿಸುವ ಸಾಧ್ಯತೆ ಇದೆ. 5, 6, 7 ನೇ ತರಗತಿಗೆ ಮಕ್ಕಳಿಗೆ ಮೊದಲಿಗೆ ಶಾಲೆ ಆವರಣದಲ್ಲಿ ವಿದ್ಯಾಗಮ ತರಗತಿಗಳನ್ನು ಆರಂಭಿಸಲಾಗುವುದು. ನಂತರ ಒಂದರಿಂದ ನಾಲ್ಕನೇ ತರಗತಿ ಮಕ್ಕಳಿಗೆ ಶಾಲೆ ಆವರಣದಲ್ಲಿ ವಿದ್ಯಾಗಮ ಆರಂಭಿಸಲಾಗುತ್ತದೆ. ಹೀಗೆ ಹಂತ ಹಂತವಾಗಿ ಶಾಲೆಗಳನ್ನು ಆರಂಭಿಸಲಾಗುವುದು ಎನ್ನಲಾಗಿದೆ.

Thanks for reading BIG NEWS: ಆಗಸ್ಟ್ ಮೊದಲ ವಾರದಿಂದ ಶಾಲೆ ಆರಂಭ | Tags:

Latest
Previous Article
Next Post »

Related Posts

Show comments
Hide comments

0 komentar on BIG NEWS: ಆಗಸ್ಟ್ ಮೊದಲ ವಾರದಿಂದ ಶಾಲೆ ಆರಂಭ

Post a Comment