ಮನೆಯಿಂದಲೇ ಸಂಪಾದಿಸಿ 80 ಸಾವಿರ ರೂ- ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ: ಇಲ್ಲಿದೆ ವಿವರ

July 21, 2021
Wednesday, July 21, 2021

 ನವದೆಹಲಿ: ಮನೆಯಲ್ಲಿಯೇ ಕುಳಿತು ಕೈತುಂಬಾ ಸಂಪಾದನೆ ಮಾಡಬೇಕು ಎಂದು ಕನಸು ಕಾಣುತ್ತಿರುವವರಿಗೆ ರೈಲ್ವೆ ಇಲಾಖೆ ಭಾರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಮನೆಯಲ್ಲಿಯೇ ಕುಳಿತು 80 ಸಾವಿರ ರೂಪಾಯಿವರೆಗೆ ಸಂಪಾದಿಸಬಹುದಾದ ಸುದ್ದಿ ಇದು!


ರೈಲ್ವೆ ಇಲಾಖೆಯ (ಐಆರ್​ಸಿಟಿಸಿ) ಆನ್​ಲೈನ್​ ಟಿಕೆಟ್​​ ಬುಕ್ಕಿಂಗ್​ ಏಜೆಂಟ್‌ ಆಗುವ ಮೂಲಕ ಈ ಸಂಪಾದನೆ ಮಾಡಬಹುದಾಗಿದೆ. ಸದ್ಯ 55 ಪ್ರತಿಶತ ಟಿಕೆಟ್​ಗಳನ್ನು ಆನ್​ಲೈನ್​ ಮೂಲಕವೇ ಕಾಯ್ದಿರಿಸಲಾಗುತ್ತದೆ. ಹೀಗಾಗಿ ಟಿಕೆಟ್​ ಬುಕಿಂಗ್​ ಏಜೆಂಟ್​ಗಳಾಗಿ ಕಾರ್ಯ ನಿರ್ವಹಿಸುವ ಮೂಲಕ 80 ಸಾವಿರ ರೂಪಾಯಿವರೆಗೆ ಸಂಪಾದಿಸಬಹುದಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.
ಟಿಕೆಟ್​​​ ಏಜೆಂಟ್​ಗಳು ತತ್ಕಾಲ್​, ವೇಟಿಂಗ್​ ಲಿಸ್ಟ್​ನಿಂದ ಹಿಡಿದು ಆರ್​ಎಸಿವರೆಗೆ ಎಲ್ಲಾ ಟಿಕೆಟ್​ಗಳನ್ನು ಬುಕ್​ ಮಾಡಬಹುದಾಗಿದೆ.

ಪ್ರತಿ ಬುಕ್ಕಿಂಗ್​​ಗೆ ಏಜೆಂಟ್​ಗಳಿಗೆ ಕಮಿಷನ್​ ಸಿಗಲಿದೆ.ಕಮಿಷನ್‌ ಹೇಗೆ ಸಿಗುತ್ತದೆ?
1. ಒಂದು ವರ್ಷದ ಏಜೆನ್ಸಿಗೆ, ಏಜೆಂಟರಿಗೆ 3,999 ರೂ.
2. ಎರಡು ವರ್ಷದ ಏಜೆನ್ಸಿಗೆ, ಏಜೆಂಟರಿಗೆ 6,999 ರೂ.
3. ಏಜೆಂಟರು ಗರಿಷ್ಠ 100 ಟಿಕೆಟ್‌ಗಳನ್ನು ಕಾಯ್ದಿರಿಸಿದರೆ ಪ್ರತಿ ಟಿಕೆಟ್‌ಗೆ 10 ರೂ.
4. ಗರಿಷ್ಠ 101 ರಿಂದ 300 ಟಿಕೆಟ್‌ಗಳನ್ನು ಕಾಯ್ದಿರಿಸಲು ಪ್ರತಿ ಟಿಕೆಟ್‌ಗೆ 8 ರೂ.
5. ತಿಂಗಳಲ್ಲಿ 300 ಟಿಕೆಟ್‌ಗಳನ್ನು ಕಾಯ್ದಿರಿಸಲು ಪ್ರತಿ ಟಿಕೆಟ್‌ಗೆ 5 ರೂ.

ಏಜೆಂಟ್ ಆಗುವುದು ಹೇಗೆ?
1. ನೋಂದಣಿ ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಿ.

2. ಸಹಿ ಮಾಡಿದ ಅರ್ಜಿ ನಮೂನೆ ಮತ್ತು ಘೋಷಣೆ ನಮೂನೆಯೊಂದಿಗೆ ನಿಮ್ಮ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ವಾಪಸ್ ಕಳುಹಿಸಿ.

3. ನಿಮ್ಮ ದಾಖಲೆಗಳನ್ನು ಪರಿಶೀಲಿಸಿದ ನಂತರ, ರೈಲ್ವೆ ಇಲಾಖೆ ಐಡಿ ರಚಿಸಲು 1,180 ರೂ. ಶುಲ್ಕ ಪಾವತಿಸುವಂತೆ ಹೇಳುತ್ತದೆ

4. ಒಟಿಪಿ ಮತ್ತು ವಿಡಿಯೊ ಪರಿಶೀಲನೆಯ ನಂತರ ಡಿಜಿಟಲ್ ಪ್ರಮಾಣಪತ್ರವನ್ನು ನಿಮಗಾಗಿ ರಚಿಸಲಾಗುತ್ತದೆ.

5. ನೀವು ಡಿಜಿಟಲ್ ಪ್ರಮಾಣಪತ್ರವನ್ನು ಪಡೆದ ನಂತರ, ಶುಲ್ಕವನ್ನು ಜಮಾ ಮಾಡಬೇಕು.

6 ಶುಲ್ಕವನ್ನು ಸ್ವೀಕರಿಸಿದ ನಂತರ, ನಿಮ್ಮ ಐಆರ್‌ಸಿಟಿಸಿ ರುಜುವಾತುಗಳನ್ನು ನಿಮಗೆ ಇಮೇಲ್ ಮಾಡಲಾಗುತ್ತದೆ.

7. ನೀವು ಈಗ ಅಧಿಕೃತ ಏಜೆಂಟ್ ಮತ್ತು ನಿಮ್ಮ ಗ್ರಾಹಕರಿಗೆ ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಬಹುದು.

ಅಗತ್ಯವಿರುವ ದಾಖಲೆಗಳು: ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಮಾನ್ಯ ಇಮೇಲ್ ಐಡಿ, ಫೋಟೋ, ಕಚೇರಿ ವಿಳಾಸ ಪುರಾವೆ, ವಸತಿ ವಿಳಾಸ ಪುರಾವೆ, ಘೋಷಣೆ ನಮೂನೆ ಮತ್ತು ನೋಂದಣಿ ನಮೂನೆ.

ಹೆಚ್ಚಿನ ಮಾಹಿತಿಗೆ https://www.akbartravels.com/agents/irctc#top ಕ್ಲಿಕ್ ಮಾಡಿ ವೀಕ್ಷಿಸಬಹುದು.

Thanks for reading ಮನೆಯಿಂದಲೇ ಸಂಪಾದಿಸಿ 80 ಸಾವಿರ ರೂ- ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ: ಇಲ್ಲಿದೆ ವಿವರ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಮನೆಯಿಂದಲೇ ಸಂಪಾದಿಸಿ 80 ಸಾವಿರ ರೂ- ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ: ಇಲ್ಲಿದೆ ವಿವರ

Post a Comment