ದ್ವಿತೀಯ ಪಿಯುಸಿ ಫಲಿತಾಂಶ 2021: ಫಲಿತಾಂಶ ನೋಡುವುದು ಹೇಗೆ? ಅಂಕಗಳ ಬಗ್ಗೆ ತಕರಾರಿದ್ದರೆ ಏನು ಮಾಡಬೇಕು?

July 20, 2021
Tuesday, July 20, 2021

 


ಬೆಂಗಳೂರು: ಕೊರೊನಾ ಕಾರಣದಿಂದ ಸ್ಥಗಿತಗೊಂಡಿರುವ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ (Second PUC Results 2021) ಇಂದು ಸಂಜೆ 4.30ಕ್ಕೆ ಪ್ರಕಟವಾಗಲಿದೆ. ಪರೀಕ್ಷೆ ಬರೆಯದೇ 6,66,497 ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದು, ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಸಿಬಿಎಸ್​ಸಿ ಮಾದರಿಯನ್ನು (CBSE Model) ಅನುಸರಿಸಿ ಅವರಿಗೆ ಅಂಕ ನೀಡಲಾಗುತ್ತಿದೆ. ಈ ಪೈಕಿ 5,90,153 ಮಂದಿ ಹೊಸ ವಿದ್ಯಾರ್ಥಿಗಳಿದ್ದರೆ 76,344 ಮಂದಿ ಮರುಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳಿದ್ದರೆ. ಫಲಿತಾಂಶ ಪಡೆಯಲು Know My Register Number ನಂಬರ್ ಹಂಚಿಕೆ ಮಾಡಲಿದ್ದು, ಎನ್​ಐಸಿ (NIC) ವೆಬ್​ಸೈಟ್​ ಮೂಲಕ ಫಲಿತಾಂಶ ವೀಕ್ಷಿಸಬಹುದಾಗಿದೆ.

ಒಂದುವೇಳೆ ಇಂದು ಪ್ರಕಟವಾಗುವ ಫಲಿತಾಂಶದ ಬಗ್ಗೆ ಯಾವುದೇ ವಿದ್ಯಾರ್ಥಿಗೆ ತಕರಾರಿದ್ದರೆ ಅವರಿಗೆ ಮರು ಪರೀಕ್ಷೆ ಬರೆಯಲು ಆಗಸ್ಟ್ ತಿಂಗಳಲ್ಲಿ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಪಿಯು ಮಂಡಳಿ ನಿರ್ದೇಶಕಿ ಸ್ನೇಹಲ್​ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಸುಮಾರು 17 ಸಾವಿರ ವಿದ್ಯಾರ್ಥಿಗಳು ಮುಂದಿನ ತಿಂಗಳು ಪರೀಕ್ಷೆ ಬರೆಯುವವರಿದ್ದಾರೆ. ಇಂದಿನ ಫಲಿತಾಂಶವನ್ನು ತಿರಸ್ಕರಿಸುವವರಿಗೂ ಅದೇ ಸಮಯದಲ್ಲಿ ಹೊಸದಾಗಿ ಪರೀಕ್ಷೆ ನೀಡಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಆದರೆ, ಒಮ್ಮೆ ಫಲಿತಾಂಶವನ್ನು ತಿರಸ್ಕರಿಸಿದ ನಂತರ ಮತ್ತೆ ಅದನ್ನು ಪಡೆಯುವುದು ಅಸಾಧ್ಯವಾಗಿದ್ದು, ಹೊಸದಾಗಿ ಪರೀಕ್ಷೆ ಬರೆದೇ ಉತ್ತೀರ್ಣರಾಗಬೇಕಿದೆ. ಹೀಗಾಗಿ ಇಂದಿನ ಫಲಿತಾಂಶವನ್ನು ಚಾಲೆಂಜ್ ಮಾಡುವ ವಿದ್ಯಾರ್ಥಿಗಳು ಆಗಸ್ಟ್ ತಿಂಗಳ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಸಿದ್ಧರಾಗಬೇಕಿದೆ. ಸಿಬಿಎಸ್‌ಇ ಮಾದರಿಯಲ್ಲಿ ಎಸ್‌ಎಸ್‌ಎಲ್‌ಸಿ, ಪಿಯು ಅಂಕ ಪರಿಗಣಿಸಿ ಫಲಿತಾಂಶ ನೀಡಲು ಸಿದ್ಧತೆ ಕೈಗೊಳ್ಳಲಾಗಿದ್ದು, ಗ್ರೇಡ್ ಬದಲು ಅಂಕಗಳ ಆಧಾರದಲ್ಲಿ ಫಲಿತಾಂಶ ಹೊರಬೀಳಲಿದೆ.

ಫಲಿತಾಂಶ ನೋಡುವುದು ಹೇಗೆ
ಫಲಿತಾಂಶ ನೀಡಲು ಪಿಯು ಬೋರ್ಡ್ ಮುಂದೆ ಸವಾಲೊಂದು ಎದುರಾಗಿದ್ದು, ನೋಂದಣಿ ಸಂಖ್ಯೆ ಇಲ್ಲದೇ ಫಲಿತಾಂಶ ನೋಡುವುದು ಹೇಗೆ ಎಂಬ ಗೊಂದಲ ಬಗೆಹರಿಸಲು ಪಿಯು ಬೋರ್ಡ್​ ಸ್ಪಷ್ಟನೆ ನೀಡಿದೆ. ಪ್ರತಿ ವರ್ಷ ಪರೀಕ್ಷೆ‌ಗೆ ಕೊಟ್ಟ ನೋಂದಣಿ ಸಂಖ್ಯೆ ಮೇಲೆ ಫಲಿತಾಂಶ ಸಿಗುತ್ತಿತ್ತು. ಈ ಬಾರಿ ಪರೀಕ್ಷೆಯಾಗದೆ ರಿಜಿಸ್ಟರ್ ‌ನಂಬರ್ ಸಿಕ್ಕಿಲ್ಲ. ಹೀಗಾಗಿ, ಫಲಿತಾಂಶ ಸಲುವಾಗಿ ವಿದ್ಯಾರ್ಥಿಗಳಿಗೆ ಹೊಸದಾಗಿ ರಿಜಿಸ್ಟರ್‌ ನಂಬರ್ ಜನರೇಟ್ ಮಾಡುವ ವ್ಯವಸ್ಥೆ ಮಾಡಲಾಗಿದೆ.

Know my number ಆಯ್ಕೆಯನ್ನು ವೆಬ್​ಸೈಟ್ ಮೂಲಕ ವಿದ್ಯಾರ್ಥಿಗಳು ಪರಿಶೀಲಿಸಬಹುದು. ವಿದ್ಯಾರ್ಥಿಗಳಿಗೆ ಎಸ್​ಎಂಸ್​ ಮೂಲಕ ತಿಳಿಸುವುದರೊಂದಿಗೆ ಆಯಾ ಕಾಲೇಜಿಗೆ ಈ ಕುರಿತು ಮಾಹಿತಿ ನೀಡಲಾಗುತ್ತದೆ. ಫಲಿತಾಂಶ ಮುನ್ನ ತಮ್ಮ ರಿಜಿಸ್ಟರ್‌ ನಂಬರನ್ನು ವಿದ್ಯಾರ್ಥಿಗಳು ಖಚಿತಪಡಿಸಿಕೊಳ್ಳಬೇಕು. ಜನರೇಟ್ ಆದ ರಿಜಿಸ್ಟರ್ ನಂಬರ್ ಅನ್ನು ಚೆಕ್‌ ಮಾಡಿ ಖಚಿತಪಡಿಸಿಕೊಳ್ಳಬೇಕು. ಆನಂತರ ವೆಬ್​ಸೈಟ್ ಮೂಲಕ ಫಲಿತಾಂಶ ಪಡೆಯಬಹುದು ಎಂದು ತಿಳಿಸಿದೆ.


ಫಲಿತಾಂಶ ನೋಡಲು:-http://karresults.nic.in/

Thanks for reading ದ್ವಿತೀಯ ಪಿಯುಸಿ ಫಲಿತಾಂಶ 2021: ಫಲಿತಾಂಶ ನೋಡುವುದು ಹೇಗೆ? ಅಂಕಗಳ ಬಗ್ಗೆ ತಕರಾರಿದ್ದರೆ ಏನು ಮಾಡಬೇಕು? | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ದ್ವಿತೀಯ ಪಿಯುಸಿ ಫಲಿತಾಂಶ 2021: ಫಲಿತಾಂಶ ನೋಡುವುದು ಹೇಗೆ? ಅಂಕಗಳ ಬಗ್ಗೆ ತಕರಾರಿದ್ದರೆ ಏನು ಮಾಡಬೇಕು?

Post a Comment