ಯಾವ ವಯಸ್ಸಿನಲ್ಲಿ ಎಷ್ಟು ವ್ಯಾಯಾಮ ಒಳ್ಳೆಯದು: ಮಹತ್ವದ ಮಾಹಿತಿ ನೀಡಿದ WHO

June 21, 2021
Monday, June 21, 2021

 


ಕೊರೊನಾ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಲಸಿಕೆ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರತಿ ನಿತ್ಯ ವ್ಯಾಯಾಮ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಜನರಿಗೆ ಅಗತ್ಯ ಸಲಹೆಗಳನ್ನು ನೀಡಿದೆ. ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಎಷ್ಟು ವಯಸ್ಸಿನಲ್ಲಿ ಜನರು ಎಷ್ಟು ವ್ಯಾಯಾಮ ಮಾಡಬೇಕೆಂದು ಸಲಹೆ ನೀಡಿದೆ.

ಮಕ್ಕಳಿಗೆ 5-17 ವರ್ಷವಾಗಿದ್ದರೆ ಪ್ರತಿದಿನ ಸುಮಾರು 60 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು ಎಂದು ಡಬ್ಲ್ಯುಎಚ್ ಒ ಹೇಳಿದೆ. ಪೋಷಕರು ಸಣ್ಣ ಮಕ್ಕಳಿಗೆ ಲಘು ವ್ಯಾಯಾಮ ನೀಡಬೇಕು. ಹದಿಹರೆಯದವರು ಸದೃಢವಾಗಿರಲು ಓಟವನ್ನು ಆಯ್ದುಕೊಳ್ಳಬಹುದೆಂದು ಡಬ್ಲ್ಯುಎಚ್‌ಒ ಹೇಳಿದೆ.

18-64 ವರ್ಷದ ಜನರು ವಾರಕ್ಕೆ ಸುಮಾರು 150-300 ನಿಮಿಷಗಳ ಮಧ್ಯಮ ತಾಲೀಮು ಮಾಡಬೇಕು.

ಬೆಳೆಯುತ್ತಿರುವ ವಯಸ್ಸಿನಲ್ಲಿ ಸದೃಢವಾಗಿರಲು ಇದು ಸಹಾಯ ಮಾಡುತ್ತದೆ. ವಯಸ್ಸಾದಂತೆ ಆಯಾಸ, ನಿದ್ರಾಹೀನತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾಗಿ ಪ್ರತಿದಿನ ಸರಾಸರಿ 30-40 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಪ್ರಯೋಜನಕಾರಿ.

ವಯಸ್ಸು 65 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ, ವಾರಕ್ಕೆ 150 ನಿಮಿಷಗಳ ವ್ಯಾಯಾಮ ಸಾಕೆಂದು ಡಬ್ಲ್ಯುಎಚ್‌ಒ ಹೇಳಿದೆ. ದೇಹವು ಮೊದಲಿನಂತೆಯೇ ಚುರುಕುತನವನ್ನು ಹೊಂದಿರುವುದಿಲ್ಲ. ಕಷ್ಟದ ವ್ಯಾಯಾಮದಿಂದ ದೂರವಿರುವುದು ಒಳ್ಳೆಯದು ಎಂದು ಡಬ್ಲ್ಯುಎಚ್‌ಒ ಹೇಳಿದೆ.

Thanks for reading ಯಾವ ವಯಸ್ಸಿನಲ್ಲಿ ಎಷ್ಟು ವ್ಯಾಯಾಮ ಒಳ್ಳೆಯದು: ಮಹತ್ವದ ಮಾಹಿತಿ ನೀಡಿದ WHO | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಯಾವ ವಯಸ್ಸಿನಲ್ಲಿ ಎಷ್ಟು ವ್ಯಾಯಾಮ ಒಳ್ಳೆಯದು: ಮಹತ್ವದ ಮಾಹಿತಿ ನೀಡಿದ WHO

Post a Comment