Viral Video: ಅಬ್ಬಬ್ಬಾ ಭಯವೇ ಇಲ್ವೇ ಈಕೆಗೆ? ಸರಸರನೆ ಹರಿಯುವ ವಿಷಪೂರಿತ ಸರ್ಪದೊಟ್ಟಿಗೆ ಯುವತಿಯ ಸೆಣೆಸಾಟ

June 10, 2021
Thursday, June 10, 2021


 ಹಾವು ಎದುರು ಬಂದರೆ ಆಮೇಲಿನ ಮಾತು, ಒಮ್ಮೆಲೆ ಹಾವು ಎಂಬ ಪದ ಕಿವಿಗೆ ಬಿದ್ರೂ ಸಾಕು ಭಯವಾಗುವುದು ಸಾಮಾನ್ಯ. ಅದರಲ್ಲಿಯೂ ಕಿಂಗ್​ಕೋಬ್ರಾದಂತಹ ದೈತ್ಯ ವಿಷಕಾರಿ ಹಾವು ಎದುರಿಗಿರುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಇಲ್ಲೋರ್ವ ಯುವತಿ ಹಾವಿನ ಜತೆ ಆಟವಾಡುತ್ತಿದ್ದಾಳೆ. ಅಬ್ಬಬ್ಬಾ ಹಾವು ಭಯಂಕರವಾಗಿದೆ. ಆದರೂ ಯುವತಿ ಸರ್ಪದ ಸೆಣೆಸಾಟಕ್ಕೆ ಇಳಿದಿದ್ದಾಳೆ. ನಿಜವಾಗಿಯೂ ಒಮ್ಮೆಲೆ ಮೈ ಜುಂ.. ಎನ್ನುವ ದೃಶ್ಯವಿದು.

ಯುವತಿಯ ಹೆಸರು ಶ್ವೇತಾ. ಕಪ್ಪು ಬಣ್ಣದ ಟಾಪ್​ ಮತ್ತು ರಿಪ್ಡ್​ ಜೀನ್ಸ್​ ಧರಿಸಿ ನಿಂತಿರುವುದನ್ನು ವಿಡಿಯೋದನ್ನು ನೋಡಬಹುದು. ಸ್ವಲ್ಪವೂ ಹೆದರದಂತೆ ಸ್ಟಿಕ್​ ಸಹಾಯದಿಂದ ಸರ್ಪವನ್ನು ಹಿಡಿದು ಮೇಲಕ್ಕೆತ್ತಿದ್ದಾಳೆ. ಹಾವಿನ ಬಾಲವನ್ನು ಮತ್ತೊಂದು ಕೈಯಲ್ಲಿ ಹಿಡಿದಿದ್ದಾಳೆ. ದೈತ್ಯಾಕಾರ ಹಾವು ನೋಡುತ್ತಿದ್ದಂತೆಯೇ ಭಯವಾಗುತ್ತದೆ.


ಶ್ವೇತಾಳ ಅಧಿಕೃತ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಅವಳ ಇನ್​ಸ್ಟಾಗ್ರಾಂ ಖಾತೆಯನ್ನು ನೋಡಿದರೆ ಅವಳು ಹಾವು ಹಿಡಿಯುವದರಲ್ಲಿ ಪರಿಣಿತಳು ಎಂಬುದು ತಿಳಿದು ಬರುತ್ತದೆ. ಸೋಶಿಯಲ್​ ಮಿಡಿಯಾದಲ್ಲಿ ಅವಳ ಪೋಸ್ಟ್​ಗಳನ್ನು ನೋಡಿ ಜನರು ಧಂಗಾಗಿದ್ದಾರೆ. ಕೆಲವರು ಹಾವು ಹಿಡದು ನಿಂತ ಪೋಸ್​ ನೋಡಿ ಅವಳ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು, ಇನ್ನಿತರಿಗೆ ಎಚ್ಚರಿಕೆ ನೀಡಿದ್ದಾರೆ. ಹಾವು ಹಿಡುಯುವುದು ಒಂದು ಕಲೆ. ಸಾಮಾನ್ಯ ಜನರು ಇಂತಹ ಕೆಲಸಕ್ಕೆ ಮುಂದಾಗಬೇಡಿ. ಜೀವಕ್ಕೇ ಹಾನಿಯುಂಟಾಗಬಹುದು, ಎಚ್ಚರ! ಎಂದು ಹೇಳಿದ್ದಾರೆ.

Thanks for reading Viral Video: ಅಬ್ಬಬ್ಬಾ ಭಯವೇ ಇಲ್ವೇ ಈಕೆಗೆ? ಸರಸರನೆ ಹರಿಯುವ ವಿಷಪೂರಿತ ಸರ್ಪದೊಟ್ಟಿಗೆ ಯುವತಿಯ ಸೆಣೆಸಾಟ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on Viral Video: ಅಬ್ಬಬ್ಬಾ ಭಯವೇ ಇಲ್ವೇ ಈಕೆಗೆ? ಸರಸರನೆ ಹರಿಯುವ ವಿಷಪೂರಿತ ಸರ್ಪದೊಟ್ಟಿಗೆ ಯುವತಿಯ ಸೆಣೆಸಾಟ

Post a Comment