'ಪ್ರಥಮ ಪಿಯುಸಿ ವಿದ್ಯಾರ್ಥಿ'ಗಳಿಗೆ ಗುಡ್ ನ್ಯೂಸ್ : ಪ್ರಥಮ PUಗೆ ಪರೀಕ್ಷೆ ಇಲ್ಲ - ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

June 13, 2021
Sunday, June 13, 2021

 


ಕೋಲಾರ : ರಾಜ್ಯ ಸರ್ಕಾರ ಘೋಷಿಸಿದಂತೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲ. ಪ್ರಥಮ ಪಿಯುಸಿಗೆ ಪರೀಕ್ಷೆ ಕೂಡ ನಡೆಸುತ್ತಿಲ್ಲ. ಈಗ ಪ್ರಕಟಿಸಲಾಗಿರುವಂತದ್ದು ಕೇವಲ ಅಸೈನ್ಮೆಂಟ್ ಮಾತ್ರ. ಮಕ್ಕಳ ನಿರಂತರ ಕಲಿಕೆಗೆ ಪ್ರಯತ್ನವಷ್ಟೇ. ಇದು ಫಲಿತಾಂಶಕ್ಕೆ ಮಾನದಂಡವೂ ಅಲ್ಲ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತಂತೆ ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪ್ರಥಮ ಪಿಯುಗೆ ಪರೀಕ್ಷೆ ನಡೆಸುತ್ತಿಲ್ಲ. ಈಗ ತಿಳಿಸಿರೋದು ಮಕ್ಕಳು ಮನೆಯಲ್ಲೇ ಇದ್ದು, 10 ದಿನ ಪಠ್ಯಪುಸ್ತಕ ನೋಡಿಯೇ ಉತ್ತರ ಬರೆದು ಕಳುಹಿಸಬಹುದು.

ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ವೇತನಕ್ಕೆ ಪರಿಗಣನೆಗೆ ಮಾತ್ರ ಈಗ ನಡೆಸುತ್ತಿರುವಂತ ಅಸೈನ್ಮೆಂಟ್ ಎಂಬುದಾಗಿ ತಿಳಿಸಿದರು.

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಈ ಬಗ್ಗೆ ಗೊಂದಲ ಬೇಡ. ವಿನಾಕಾರಣ ಗೊಂದಲಕ್ಕೂ ಒಳಗಾಗಬಾರದು. ಬ್ರಿಡ್ಜ್ ಸೇತು ಬಂಧದ ಮಾದರಿಯಲ್ಲಿ ಮನೆಯಲ್ಲೇ ಕುಳಿತು ಕಲಿಕೆ ಮುಂದುವರಿಸಲು ಈ ಪ್ರಯತ್ನ ಅಷ್ಟೇ ಆಗಿದೆ ಎಂಬುದಾಗಿ ಸ್ಪಷ್ಟ ಪಡಿಸಿದರು.

Thanks for reading 'ಪ್ರಥಮ ಪಿಯುಸಿ ವಿದ್ಯಾರ್ಥಿ'ಗಳಿಗೆ ಗುಡ್ ನ್ಯೂಸ್ : ಪ್ರಥಮ PUಗೆ ಪರೀಕ್ಷೆ ಇಲ್ಲ - ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on 'ಪ್ರಥಮ ಪಿಯುಸಿ ವಿದ್ಯಾರ್ಥಿ'ಗಳಿಗೆ ಗುಡ್ ನ್ಯೂಸ್ : ಪ್ರಥಮ PUಗೆ ಪರೀಕ್ಷೆ ಇಲ್ಲ - ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

Post a Comment