Indian Currency: ನಿಮ್ಮ ಬಳಿ ಈ ರೀತಿಯ 1 ರೂಪಾಯಿ ನಾಣ್ಯವಿದ್ದರೆ, ಮನೆಯಲ್ಲೇ ಕುಳಿತು 2 ಲಕ್ಷ ರೂ. ಸಂಪಾದಿಸಿ

June 10, 2021
Thursday, June 10, 2021

 


Indian Currency: ನಾವು ಏನಾದರೂ ಖರೀದಿಸುವಾಗ ಒಬ್ಬ ವ್ಯಕ್ತಿಗೆ ಅಥವಾ ಅಂಗಡಿಯವರಿಗೆ ಒಂದು ರೂಪಾಯಿ ಹಿಂದಿರುಗಿ ನೀಡಿದರೆ ಅದರ ಬೆಲೆ ಎಷ್ಟು ಎಂದು ನೀವು ಎಂದಾದರೂ ಗಮನಿಸಿದ್ದೀರಾ? ಹಲವು ಬಾರಿ ಅಯ್ಯೋ ಒಂದು ರೂಪಾಯಿ ತಾನೇ ಎಂದು ಅದನ್ನು ಪರಿಗಣಿಸುವುದೇ ಇಲ್ಲ. ಒಂದು ರೂಪಾಯಿ ನೀಡಿದರೆ ಅದರ ಮೌಲ್ಯ ಕೇವಲ ಒಂದು ರೂಪಾಯಿಯಷ್ಟೇ ಎಂದು ನಾವು ಭಾವಿಸುತ್ತೇವೆ. ವಾಸ್ತವವಾಗಿ, ಒಂದು ರೂಪಾಯಿಗೆ ಒಂದು ರೂಪಾಯಿ ಮತ್ತು ಹತ್ತು ರೂಪಾಯಿಗಳಿಗೆ ಕೇವಲ 10 ರೂಪಾಯಿ ಮೌಲ್ಯ ಎಂಬುದೂ ನಿಜ. ಆದರೆ, 100 ವರ್ಷಗಳ ನಂತರ ಈ 1 ರೂಪಾಯಿ ನಾಣ್ಯ ಮತ್ತು 10 ರೂಪಾಯಿ ನೋಟಿನ ಮೌಲ್ಯ ಎಷ್ಟಾಗಿರಬಹುದು? ಅದನ್ನು ಊಹಿಸಲು ಸಹ ಸಾಧ್ಯವಿಲ್ಲ.

ಹೌದು! ಹಣ ಹಳೆಯದಾಗುತ್ತಿದ್ದಂತೆ ಅದರ ಮೌಲ್ಯವೂ ಹೆಚ್ಚಾಗುತ್ತದೆ. ಒಂದು ರೂಪಾಯಿಗೆ ನೀವು ಸಾಕಷ್ಟು ಮೌಲ್ಯವನ್ನು ಪಡೆಯಬಹುದು.

ಈ ದಿನಗಳಲ್ಲಿ ಒಂದು ಪ್ರವೃತ್ತಿ ಪ್ರಾರಂಭವಾಗಿದೆ, ಇದರಲ್ಲಿ ನಿರ್ದಿಷ್ಟ ನಾಣ್ಯ ಅಥವಾ ನೋಟಿಗೆ ಬದಲಾಗಿ ಹೆಚ್ಚಿನ ಮೌಲ್ಯವನ್ನು ನೀಡಲಾಗುತ್ತಿದೆ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚಾಗಿ ಈ ರೀತಿಯ ಅವಕಾಶಗಳು ಸಿಗುತ್ತಿವೆ.

ಈ ವಿಶೇಷ ರೀತಿಯ ನಾಣ್ಯವು (Special Coins) ಕ್ರಿ.ಶ 1862 ರದ್ದಾಗಿದೆ. ಇದು ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲೇ ಇದ್ದ ನಾಣ್ಯ. ಈ ನಾಣ್ಯದ ಮೇಲೆ ರಾಣಿ ವಿಕ್ಟೋರಿಯಾಳ ಚಿತ್ರವಿದೆ ಮತ್ತು ಈ ನಾಣ್ಯ ಬೆಳ್ಳಿಯಿಂದ ಮಾಡಿದ್ದಾಗಿದೆ. ನಿಮ್ಮ ಬಳಿಯೂ ಈ ರೀತಿಯ ನಾಣ್ಯವಿದ್ದರೆ ಇದಕ್ಕೆ ಪ್ರತಿಯಾಗಿ ನಿಮಗೆ 2 ಲಕ್ಷ ರೂ. ಗಳಿಸುವ ಅವಕಾಶವಿದೆ. ಅಂತೆಯೇ, ಒಂದು ರೂಪಾಯಿ ಬ್ರಿಟಿಷ್ ನಾಣ್ಯಕ್ಕೆ 9 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತಿದೆ. ಈ ನಾಣ್ಯವನ್ನು ಕ್ರಿ.ಶ 1918 ರಲ್ಲಿ ಮುದ್ರಿಸಲಾಗಿದೆ. ಇದರಲ್ಲಿ ಕಿಂಗ್ ಜಾರ್ಜ್ ಪಂಚಮ್ ರ ಚಿತ್ರವನ್ನು ಮುದ್ರಿಸಲಾಗಿದೆ.

ಇದನ್ನೂ ಓದಿ - 50 Paise Coin : ನಿಮ್ಮ ಬಳಿ '50 ಪೈಸೆ ನಾಣ್ಯ' ಇದೆಯಾ? ಹಾಗಿದ್ರೆ, ಇಲ್ಲಿದೆ 'ಮಿಲಿಯನೇರ್' ಆಗುವ ಅವಕಾಶ!

ಈ ನಾಣ್ಯಗಳನ್ನು ಇ-ಕಾಮರ್ಸ್ (E-Commerce) ವೆಬ್‌ಸೈಟ್ ಕ್ವಿಕ್ರ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ ಅದರ ಬೆಲೆಯನ್ನು ಅವರು ಎಷ್ಟು ನಿಗದಿಪಡಿಸುತ್ತಾರೆ ಎಂಬುದು ಸಂಪೂರ್ಣವಾಗಿ ಮಾರಾಟಗಾರ ಮತ್ತು ಖರೀದಿದಾರರ ನಡುವಿನ ಒಪ್ಪಂದಕ್ಕೆ ಬಿಟ್ಟದ್ದು. ಆದರೆ, ಇತ್ತೀಚಿನ ದಿನಗಳಲ್ಲಿ ಈ ನಾಣ್ಯಗಳಿಗೆ ಬೇಡಿಕೆ ತುಂಬಾ ಹೆಚ್ಚಾಗಿದೆ. ಇದಕ್ಕೆ ಪ್ರತಿಯಾಗಿ ಲಕ್ಷ-ಲಕ್ಷ ರೂಪಾಯಿಗಳನ್ನು ಗಳಿಸಬಹುದು. ಈ ರೀತಿಯಾಗಿ, ನಿಮ್ಮ ಬಳಿ ಇಂತಹ 10-15 ನಾಣ್ಯಗಳು ಇದ್ದರೆ, ನೀವು ರಾತ್ರೋರಾತ್ರಿ ಮಿಲಿಯನೇರ್ ಆಗಬಹುದು.

ವೆಬ್‌ಸೈಟ್‌ಗಳಲ್ಲಿ ಹಳೆಯ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಅನೇಕ ಜನರು ಕೋಟ್ಯಾಧಿಪತಿಗಳಾಗುತ್ತಾರೆ ಎಂಬುದನ್ನು ನೀವು ಆಗಾಗ್ಗೆ ಕೇಳಿರಬಹುದು. ಏನಾದರೂ ಹಳೆಯದಾಗುತ್ತಿದ್ದಂತೆ ಅದು ವಿಶೇಷ ರೀತಿಯದ್ದಾಗಿರುವುದರಿಂದ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದರ ಬೇಡಿಕೆ ಹೆಚ್ಚಾಗುತ್ತದೆ ಮತ್ತು ಅದರಿಂದ ಹೆಚ್ಚಿನ ಹಣವನ್ನು ಗಳಿಸಬಹುದು.

ವಾಸ್ತವವಾಗಿ, ಸಮಯ ಕಳೆದಂತೆ, ಭಾರತದಲ್ಲಿ ಅನೇಕ ನಾಣ್ಯಗಳ ತಯಾರಿಕೆಯನ್ನು ನಿಲ್ಲಿಸಲಾಯಿತು. ಇದರಿಂದಾಗಿ ಅವುಗಳ ಬೆಲೆಗಳು ಅನೇಕ ಪಟ್ಟು ಹೆಚ್ಚಾದವು. ಇದರೊಂದಿಗೆ, ಭಾರತದ ಅನೇಕ ಜನರು ವಿಕ್ಟೋರಿಯಾ ರಾಣಿಯ ಚಿತ್ರದೊಂದಿಗೆ ನಾಣ್ಯಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ಅಕ್ಷಯ ತೃತೀಯರ ಶುಭ ಸಂದರ್ಭದಲ್ಲಿ ಅನೇಕ ಜನರು ಈ ನಾಣ್ಯವನ್ನು ಖರೀದಿಸುತ್ತಾರೆ.

ರಾಣಿ ವಿಕ್ಟೋರಿಯಾ ಅವರ ಚಿತ್ರವನ್ನು ಹೊಂದಿರುವ ಈ ನಾಣ್ಯವನ್ನು ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರ ಬೆಲೆಯನ್ನು 1.5 ಲಕ್ಷ ರೂ. ಕ್ರಿ.ಶ 1862 ರ ನಾಣ್ಯವು ವಿಶೇಷ ವಿಭಾಗದಲ್ಲಿ ಬರುತ್ತದೆ. ಆದ್ದರಿಂದ ನೀವು ಇದರಿಂದ ಸಾಕಷ್ಟು ಹಣವನ್ನು ಗಳಿಸಬಹುದು.

ನಿಮ್ಮ ಬಳಿಯೂ ವಿಶೇಷ ನಾಣ್ಯಗಳಿದ್ದರೆ ಅದನ್ನು ಆನ್‌ಲೈನ್ ಮಾರಾಟಕ್ಕೆ ನೋಂದಾಯಿಸುವುದು ಹೇಗೆ? ಎಂದು ತಿಳಿಯಿರಿ:-
ನಿಮ್ಮ ಬಳಿಯೂ ಈ ರೀತಿಯ ವಿಶೇಷ ನಾಣ್ಯಗಳಿದ್ದರೆ (Special Coins) ಮತ್ತು ಅದನ್ನು ಮಾರಾಟ ಮಾಡುವ ಮೂಲಕ ಹಣವನ್ನು ಗಳಿಸಲು ಬಯಸಿದರೆ, ಮೊದಲು ನೀವು ಕ್ವಿಕ್ರ್‌ನಲ್ಲಿ ಆನ್‌ಲೈನ್ ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಬೇಕು. ಅದರ ನಂತರ, ಆ ನಾಣ್ಯದ ಫೋಟೋ ಕ್ಲಿಕ್ ಮಾಡುವ ಮೂಲಕ, ನೀವು ಅದನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ನಿಮ್ಮ ಅದೃಷ್ಟವು ನಿಮಗೆ ಅನುಕೂಲಕರವಾಗಿದ್ದರೆ, ಖರೀದಿದಾರನು ನಿಮ್ಮನ್ನು ಸ್ವತಃ ಸಂಪರ್ಕಿಸುತ್ತಾನೆ. ಆ ನಾಣ್ಯವನ್ನು ನಿಮ್ಮ ಸ್ವಂತ ನಿಯಮಗಳ ಪ್ರಕಾರ ಮಾರಾಟ ಮಾಡುವ ಮೂಲಕ ನೀವು ಮನೆಯಲ್ಲಿಯೇ ಕುಳಿತು ಹಣವನ್ನು ಸಂಪಾದಿಸಬಹುದು.

ಮತ್ತೊಂದೆಡೆ, ಅದೇ ವೆಬ್‌ಸೈಟ್‌ನಲ್ಲಿ ವಿಶೇಷ ರೀತಿಯ 10 ರೂಪಾಯಿ ನೋಟಿಗೆ ಸಾಕಷ್ಟು ಬೇಡಿಕೆ ಇದೆ. ನೀವು 10 ರೂಪಾಯಿ ಮುಖಬೆಲೆಯ ಒಂದು ನೋಟಿನ ಬದಲು 45,000 ರೂ. ಗಳಿಸಬಹುದು.

Thanks for reading Indian Currency: ನಿಮ್ಮ ಬಳಿ ಈ ರೀತಿಯ 1 ರೂಪಾಯಿ ನಾಣ್ಯವಿದ್ದರೆ, ಮನೆಯಲ್ಲೇ ಕುಳಿತು 2 ಲಕ್ಷ ರೂ. ಸಂಪಾದಿಸಿ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on Indian Currency: ನಿಮ್ಮ ಬಳಿ ಈ ರೀತಿಯ 1 ರೂಪಾಯಿ ನಾಣ್ಯವಿದ್ದರೆ, ಮನೆಯಲ್ಲೇ ಕುಳಿತು 2 ಲಕ್ಷ ರೂ. ಸಂಪಾದಿಸಿ

Post a Comment