Health Tips: ಎಳನೀರು ಕುಡಿದು ಹಾಗೇ ಬರುವ ಅಭ್ಯಾಸ ಬಿಟ್ಟು ಬಿಡಿ; ಒಳಗಿನ ಗಂಜಿ ಸೇವಿಸಿ, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

June 08, 2021
Tuesday, June 8, 2021


 ಎಳನೀರು ನೈಸರ್ಗಿಕವಾಗಿ ಸಿಗುವ ಪಾನೀಯವಾಗಿದ್ದು, ಅನಾದಿಕಾಲದಿಂದಲೂ ಇದಕ್ಕೆ ಬೇಡಿಕೆ ಇದೆ. ಇಂದು ಎಷ್ಟೇ ತೆರನಾದ ತಂಪು ಪಾನೀಯಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಎಳನೀರು ಮಾತ್ರ ತನ್ನ ಸ್ಥಾನವನ್ನು ಕಳೆದುಕೊಂಡಿಲ್ಲ. ಬೀಸಿಲಿನ ಬೇಗೆ ಇರಲಿ, ಒತ್ತಡದ ಮನಸ್ಥಿತಿ ಇರಲಿ ಒಮ್ಮೆ ಎಳನೀರನ್ನು ಕುಡಿದರೆ ದೇಹಕ್ಕೆ ನವಚೈತನ್ಯ ದೊರೆತಂತಾಗುತ್ತದೆ. ನೈಸರ್ಗಿಕ ಕಿಣ್ವಗಳು ಹಾಗೂ ಖನಿಜಾಂಶವನ್ನು ಹೊಂದಿರುವ ಎಳನೀರಿನ ಸೇವನೆಯು ಬೇಸಿಗೆಯ ಉಷ್ಣತೆಯಿಂದ ನಮ್ಮನ್ನು ದೂರವಾಗಿಸುತ್ತದೆ. ಅನೇಕ ಬಾರಿ ಎಳನೀರನ್ನು ಮಾತ್ರ ಕುಡಿದು ಹಾಗೇ ಹೋಗುವವರಿದ್ದಾರೆ. ಅದರೆ ನೆನಪಿಡಿ ಎಳನೀರಿನ ಒಳಗಿನ ಗಂಜಿ ತಿನ್ನದೆ ಎಳನೀರು ಕುಡಿಯುವ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ.

ಎಳನೀರಿನಲ್ಲಿರುವ ಗಂಜಿ ಅಥವಾ ಒಳಗಿನ ತಿರುಳು ತೆಂಗಿನ ಎಣ್ಣೆ, ತೆಂಗಿನ ನೀರು ಮತ್ತು ತೆಂಗಿನ ಹಾಲಿನಂತೆಯೇ ಹೆಚ್ಚು ಉಪಯುಕ್ತಕಾರಿಯಾಗಿದೆ.

ಸಾಮಾನ್ಯವಾಗಿ ಎಳನೀರಿನ ಗಂಜಿಯನ್ನು ಏಕೆ ಸೇವಿಸಬೇಕು? ಅದರಿಂದ ನಮ್ಮ ಆರೋಗ್ಯಕ್ಕೆ ಯಾವ ರೀತಿಯ ಪ್ರಯೋಜನಗಳಿದೆ ಎನ್ನುವ ಪ್ರಶ್ನೆ ನಮ್ಮಲ್ಲಿ ಇರುತ್ತದೆ. ಹೀಗಾಗಿ ಎಳನೀರಿನ ಗಂಜಿಯನ್ನು ಸೇವಿಸುವುದರಿಂದ ಅಗುವ ಪ್ರಯೋಜನಗಳು ಏನು ಎನ್ನುವುದನ್ನು ಅರಿಯುವುದು ಸೂಕ್ತ

1. ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಎಳನೀರಿನ ಗಂಜಿಯ ಹೆಚ್ಚಿನ ಭಾಗವು ಕೊಬ್ಬಿನಾಂಶದಿಂದ ಕೂಡಿದೆ ನಿಜ. ಆದರೆ ಇದು ಒಳ್ಳೆಯ, ಸ್ಯಾಚುರೇಟೆಡ್ ಕೊಬ್ಬಿನಾಂಶದಿಂದ ಕೂಡಿದೆ. ಇದು ಹೃದಯಕ್ಕೆ ಅಗತ್ಯವಾದ ಕೊಲೆಸ್ಟ್ರಾಲ್ ಅನ್ನು ನೀಡುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

2. ತೂಕ ಇಳಿಸಲು ಸಹಾಯಕವಾಗಿದೆ
ಎಳನೀರಿನ ಗಂಜಿಯನ್ನು ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಗಂಜಿಯಲ್ಲಿನ ಶಕ್ತಿಯುತ ಅಂಶ ದೀರ್ಘಕಾಲದವರೆಗೆ ಇರುತ್ತದೆ. ಹೀಗಾಗಿ ಪದೇ ಪದೇ ಆಹಾರ ಸೇವಿಸುವುದರಿಂದ ನಮ್ಮನ್ನು ದೂರವಿರುಸುತ್ತದೆ. ಇನ್ನು ದೇಹಕ್ಕೆ ಪ್ರೋಟಿನ್ ನೀಡುವಲ್ಲಿಯೂ ಎಳನೀರಿನ ಗಂಜಿ ಸಹಾಯಕವಾಗಿದೆ.

3. ಜೀರ್ಣಕ್ರಿಯೆಗೆ ಸಹಕಾರಿ
ಎಳನೀರಿನ ಗಂಜಿಯೂ ನಾರಿನಾಂಶದಿಂದ ಕೂಡಿರುತ್ತದೆ. ಇದು ನಯವಾದ ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಕರುಳನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.

4. ದೇಹಕ್ಕೆ ಶಕ್ತಿ ನೀಡುತ್ತದೆ
ಎಳನೀರಿನ ಗಂಜಿಯಲ್ಲಿ ದೇಹಕ್ಕೆ ಶಕ್ತಿ ನೀಡುವ ಅಂಶಗಳು ಹೇರಳವಾಗಿದೆ. ಇದು ಖನಿಜಾಂಶವನ್ನು ಹೊಂದಿದ್ದು, ಟ್ರಿಗಲ್​ಸರೈಡ್ಸ್ (MCTs)ಅನ್ನು ಹೊಂದಿದೆ.

5. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಕೊರೊನಾದಂತಹ ಈ ಕಾಲಘಟ್ಟದಲ್ಲಿ ಎಳನೀರಿನ ಸೇವನೆ ಮತ್ತು ಎಳನೀರಿನ ಗಂಜಿಯ ಸೇವನೆ ಬಹಳ ಮುಖ್ಯ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಉತ್ಕರ್ಷಣ ನಿರೋಧಕ ಮೌಲ್ಯವನ್ನು ಹೊಂದಿದ್ದು, ಉರಿಯೂತದ ಗುಣಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ಎಳನೀರಿನ ಗಂಜಿಯನ್ನು ಹೇಗೆ ಸೇವಿಸಬೇಕು
ಎಳನೀರು ಕುಡಿದ ನಂತರದಲ್ಲಿ ಅದನ್ನು ಎರಡು ಭಾಗಗಳನ್ನಾಗಿ ಕತ್ತರಿಸಿದ ಬಳಿಕ, ಅದರಲ್ಲಿರುವ ತೆಳುವಾದ ಗಂಜಿಯನ್ನು ಸೇವಿಸಿ. ಎಳನೀರಿನ ಗಂಜಿ ಸ್ವಲ್ಪ ದಪ್ಪಗಿದ್ದರೆ, ಇದರಿಂದ ಕಡುಬು ತಯಾರಿಸಬಹುದು. ಇನ್ನು ಕೆಲವರು ಎಳನೀರಿನ ಜೊತೆ ಗಂಜಿಯನ್ನು ಮಿಶ್ರಣ ಮಾಡಿಯೂ ಸೇವಿಸುತ್ತಾರೆ. ಒಟ್ಟಾರೆ ಎಳನೀರು ಕುಡಿದ ನಂತರ ಅದನ್ನು ಬಿಸಾಡುವ ಬದಲು ಎರಡು ಭಾಗ ಮಾಡಿ ಒಳಗಿನ ಗಂಜಿ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದು ಆರೋಗ್ಯಕ್ಕೂ ಒಳ್ಳೆಯದು, ರುಚಿಯೂ ಚೆನ್ನಾಗಿರುತ್ತದೆ.


Weight loss Tips: ತೂಕವನ್ನು ಇಳಿಸಲು ದೇಹದಂಡನೆ ಮಾಡುವುದನ್ನು ಬಿಡಿ; ಈ ಸರಳ ಆಹಾರ ಪದ್ಧತಿಯನ್ನು ಅನುಸರಿಸಿ


ಚಯಾಪಚಯ ಕ್ರಿಯೆಯು (ಮೆಟಬಾಲಿಕ್) ನಾವು ಸೇವಿಸುವ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಎಂದು ಕರೆಯಲಾಗುತ್ತದೆ. ಇದು ದೈನಂದಿನ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಾಗಿರುತ್ತದೆ. ಚಯಾಪಚಯ ಪ್ರಕ್ರಿಯೆ ಹೆಚ್ಚಿದೆ ಎಂದರೆ ವ್ಯಕ್ತಿಯು ವೇಗವಾಗಿ ತೂಕ ಕಳೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾನೆ ಎಂದರ್ಥ. ತೀವ್ರವಾದ ವ್ಯಾಯಾಮ ಮಾಡುವುದರಿಂದ ಹೆಚ್ಚಿನ ಕ್ಯಾಲೊರಿಗಳನ್ನು ಮತ್ತು ದೇಹದ ಅನಗತ್ಯ ಕೊಬ್ಬನ್ನು ದೂರಮಾಡಬಹುದು. ಕ್ಯಾಲೋರಿ ಕಡಿಮೆ ಮಾಡುವ ಇನ್ನೊಂದು ಪ್ರಕ್ರಿಯೆ ಕೂಡ ಇದೆ. ಅದುವೆ ಸರಿಯಾದ ರೀತಿಯಲ್ಲಿ ಆಹಾರವನ್ನು ಸೇವಿಸುವುದು. ಈ ಆಹಾರ ಪದ್ಧತಿ ಯಾವುದು ಎನ್ನುವ ಪ್ರಶ್ನೆಗೆ ಉತ್ತರ ಹೀಗಿದೆ.

ಚಯಾಪಚಯವನ್ನು ವೇಗಗೊಳಿಸಲು ಸಹಾಯ ಮಾಡುವ ಆಹಾರದ ಪಟ್ಟಿಯನ್ನು ವಿ.ಪಿ. ರೋಹಿತ್ ಶೆಲತ್ಕರ್ ಹಂಚಿಕೊಂಡಿದ್ದಾರೆ.

ಓಟ್ಸ್
ಓಟ್ಸ್ ಆರೋಗ್ಯಕರ ಧಾನ್ಯವಾಗಿದ್ದು, ಕೊಬ್ಬಿನಾಂಶ ಕರಗಬಲ್ಲಷ್ಟು ನಾರಿನಂಶವನ್ನು ಹೊಂದಿದೆ. ಜತೆಗೆ ಹಲವಾರು ಜೀವಸತ್ವಗಳು ಮತ್ತು ಖನಿಜಗಳನ್ನು ಇದು ಒದಗಿಸುತ್ತದೆ. ಇದು ಉತ್ತಮ ಉಪಹಾರವಾಗಿದೆ. ಓಟ್ಸ್‌ ಚಯಾಪಚಯ ಕ್ರಿಯೆಯನ್ನು ಪ್ರಾರಂಭಿಸಲು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮೊಟ್ಟೆ
ಮೊಟ್ಟೆಗಳು ಅಮೈನೋ ಆಮ್ಲಗಳನ್ನು ಒಳಗೊಂಡಿರುವ ಆಹಾರವಾಗಿದ್ದು, ಬೆಳಿಗ್ಗೆ ತಿಂಡಿ ಜತೆಗೆ ಬೇಯಿಸಿದ ಮೊಟ್ಟೆಯನ್ನು ಸೇವಿಸಬಹುದು. ಈ ಅಭ್ಯಾಸವು ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಗ್ಲೂಕೋಸ್ ಮತ್ತು ಇನ್ಸುಲಿನ್ ಮಟ್ಟವನ್ನು ಸ್ಥಿರಗೊಳಿಸಲು ಮೊಟ್ಟೆಗಳು ಸಹಾಯ ಮಾಡುತ್ತವೆ. ಹೃದಯದ ಆರೋಗ್ಯದ ಮೇಲೆ ಸಕಾರಾತ್ಮಕ ಫಲಿತಾಂಶವನ್ನು ಹೊಂದಲು ಕೂಡ ಮೊಟ್ಟೆ ಸಹಕಾರಿಯಾಗಿದೆ.

ಮೊಸರು
ಮೊಸರು ಕ್ಯಾಲ್ಸಿಯಂ ಮತ್ತು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದೆ. ಇದು ಉರಿಯೂತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮೊಸರು ಕರುಳಿನ ಆರೋಗ್ಯಕ್ಕೆ ಅಗತ್ಯವಾದ ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತದೆ. ಪ್ರೋಬಯಾಟಿಕ್​ಗಳು ಕರುಳು ಮತ್ತು ಜೀರ್ಣಾಂಗವ್ಯೂಹದ ಆರೋಗ್ಯವನ್ನು ಸಮತೋಲನಗೊಳಿಸುತ್ತದೆ ಹಾಗೂ ಚಯಾಪಚಯ ಪ್ರಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬೆಳಗಿನ ಉಪಹಾರಕ್ಕಾಗಿ ಅಥವಾ ಊಟದ ಸಮಯದಲ್ಲಿ ಮೊಸರು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಶಕ್ತಿ ಸಿಗುತ್ತದೆ.

ಡ್ರೈ ಫ್ರೂಟ್ಸ್
ಡ್ರೈ ಫ್ರೂಟ್ಸ್ ಹೆಚ್ಚಿನ ಪ್ರೋಟೀನ್ ಅಂಶಗಳನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ದೇಹದಲ್ಲಿನ ಕೊಬ್ಬಿನಾಂಶವನ್ನು ವೇಗವಾಗಿ ಶಮನ ಮಾಡುತ್ತದೆ. ಆ ಮೂಲಕ ಚಯಾಪಚಯ ಪ್ರಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಡ್ರೈ ಫ್ರೂಟ್ಸ್ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಸ್ಥಿರವಾಗಿರುತ್ತದೆ. ಗಾತ್ರದಲ್ಲಿ ಸಣ್ಣದಾಗಿದ್ದರೂ, ಡ್ರೈ ಫ್ರೂಟ್ಸ್ ಸಮೃದ್ಧ ಕ್ಯಾಲೊರಿ ಹೊಂದಿರುತ್ತದೆ. ಹೀಗಾಗಿ ಮಿತವಾಗಿ ಸೇವಿಸಬೇಕು.

ಬಾಳೆಹಣ್ಣು
ಬಾಳೆಹಣ್ಣಿನ ಮೇಲೆ ಇರುವ ಸಾಮಾನ್ಯ ತಪ್ಪುಗ್ರಹಿಕೆಯೆಂದರೆ ಅವು ತೂಕ ಹೆಚ್ಚಿಸಲು ಸಹಾಯ ಮಾಡುತ್ತವೆ. ಆದರೆ ಇದು ಸಂಪೂರ್ಣ ಸುಳ್ಳು. ಬಾಳೆಹಣ್ಣಿನಲ್ಲಿ ಸುಮಾರು 100 ಕ್ಯಾಲೋರಿಗಳು ಮತ್ತು ಕಡಿಮೆ ಸಕ್ಕರೆ ಅಂಶ ಇರುತ್ತದೆ. ಬಾಳೆಹಣ್ಣು ಚಯಾಪಚಯ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ಪೊಟ್ಯಾಶಿಯಮ್ ಅಂಶವನ್ನು ಹೊಂದಿರುವುದರಿಂದ, ಜೀವಕೋಶಗಳಿಗೆ ಪೋಷಕಾಂಶಗಳನ್ನು ನೀಡುತ್ತದೆ.Thanks for reading Health Tips: ಎಳನೀರು ಕುಡಿದು ಹಾಗೇ ಬರುವ ಅಭ್ಯಾಸ ಬಿಟ್ಟು ಬಿಡಿ; ಒಳಗಿನ ಗಂಜಿ ಸೇವಿಸಿ, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on Health Tips: ಎಳನೀರು ಕುಡಿದು ಹಾಗೇ ಬರುವ ಅಭ್ಯಾಸ ಬಿಟ್ಟು ಬಿಡಿ; ಒಳಗಿನ ಗಂಜಿ ಸೇವಿಸಿ, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

Post a Comment