ಮೊಬೈಲ್ ಅತಿಯಾಗಿ ಬಳಸಬಾರದು ಎಂದಿದ್ದಕ್ಕೆ ಮಗಳು ನಾಪತ್ತೆ

June 08, 2021
Tuesday, June 8, 2021


ಮಂಗಳೂರು : ಮೊಬೈಲ್ ಬಳಸಬಾರದು ಎಂದು ಪೋಷಕರು ಬುದ್ದಿ ಮಾತು ಹೇಳಿದ್ದಕ್ಕೆ ಆಕ್ರೋಶಗೊಂಡ ಯುವತಿಯೊಬ್ಬಳು ಮನೆ ಬಿಟ್ಟು ಪರಾರಿಯಾದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಪುಣಿ ಎಂಬಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಕುಕ್ಕದಕಟ್ಟೆ ಸೈಟ್ ಮನೆಯ ನಿವಾಸಿಯಾದ ದೀಕ್ಷಿತಾ ಜೂನ್ 6 ರಂದು ಕಾಣೆಯಾಗಿದ ಯುವತಿ.

ಕಾಣೆಯಾದ ಯುವತಿಗೆ 18 ವರ್ಷ ವಯಸ್ಸಾಗಿದೆ. ಆಕೆಯ ತಾಯಿ ಅತಿಯಾಗಿ ಫೋನಿನಲ್ಲಿ ಮಾತನಾಡುತ್ತಿದ್ದನ್ನು ಪ್ರಶ್ನಿಸಿದಕ್ಕೆ ಆಕ್ರೋಶಗೊಂಡು ಮನೆಯಲ್ಲಿ ಯಾವುದೇ ವಿಚಾರ ಹೇಳದೆ ನಾಪತ್ತೆಯಾಗಿದ್ದಾಳೆ.

ಬಾಲಕಿಯ ತಾಯಿ ಜೂನ್ 6 ರಂದು ಬೆಳಿಗ್ಗೆ 7.30 ಕ್ಕೆ ಮುಡಿಪು ನಗರಕ್ಕೆ ಹೋಗಿದ್ದರು ಎಂದು ಹೇಳಲಾಗಿದೆ. ಈ ಸಮಯದಲ್ಲಿ ಆಕೆ ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ. ದೀಕ್ಷಿತಾ ದುಂಡು ಮುಖ, ಗೋಧಿ ಬಣ್ಣ ಸಾಧಾರಣಾ ಮೈಕಟ್ಟು ಹೊಂದಿದ್ದಾರೆ.

ಕಾಣೆಯಾದ ಸಮಯದಲ್ಲಿ ಕಪ್ಪು ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಚೂಡಿದಾರ್ ಟಾಪ್ ಧರಿಸಿದ್ದಾಳೆ. ಕನ್ನಡ, ಮಲಯಾಳಂ, ತುಳು ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾಳೆ.

ಆಕೆಯ ತಾಯಿ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಿದ್ದರು.

ಯುವತಿಯ ಪತ್ತೆಯಾದಲ್ಲಿ ಮಂಗಳೂರು ನಗರ ನಿಯಂತ್ರಣ ಕೊಠಡಿ ಅಥವಾ ಕೊಣಾಜೆ ಪೊಲೀಸ್ ಠಾಣೆ ದೂ. ಸಂಖ್ಯೆ: 0824-2220536, 9480802350 ಹಾಗೂ 0824-2220800 ಗೆ ಸಂಪರ್ಕಿಸಬಹುದು ಎಂದು ಕೊಣಾಜೆ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಮುಖಂಡನಿಂದ ಮಹಿಳಾ ಅಧಿಕಾರಿಗೆ ನಿಂದನೆ ಆರೋಪ: ದೂರುಮುಡಿಪು: ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಹಾಗೂ ವಕೀಲ ಅಸ್ಗರ್ ಮುಡಿಪು ವಿರುದ್ಧ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಬಳಿಕ ಯುವ ವಕೀಲನಿಂದ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಲಾಗಿದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಮುಡಿಪು ಸಮೀಪದ ಇಸ್ಫೊಸಿಸ್ ಬಳಿ ಪೈಪ್‌ಲೈನ್ ಹಾಕುವ ಕಾಮಗಾರಿ ನಡೆಯುತ್ತಿದೆ. ಈ ಬಗ್ಗೆ ಮುಡಿಪು ಸಾಂಬಾರ್ ತೋಟ ನಿವಾಸಿ ವಕೀಲ ಅಸ್ಗರ್ ಅವರು ರಸ್ತೆಯ ಒಂದೇ ಬದಿಯಲ್ಲಿ ಎಲ್ಲಾ ರೀತಿಯ ಪೈಪ್‍ಲೈನ್ ಹಾಕುತ್ತಿರುವುದರಿಂದ ಸಾಂಬಾರುತೋಟ ನಿವಾಸಿಗಳಿಗೆ ತೊಂದರೆಯಾಗುತ್ತದೆ. ರಸ್ತೆ ಇದ್ದರೂ ಫುಟ್‍ಪಾತ್ ಚರಂಡಿಯನ್ನು ನಿರ್ಮಿಸದೆ ಗ್ರಾಮಸ್ಥರಿಗೆ ಸಮಸ್ಯೆಯಾಗಿದೆ. ಮಳೆಗಾಲದಲ್ಲಿ ನೀರು ನುಗ್ಗಿ ನಷ್ಟ ಸಂಭವಿಸುತ್ತಿದೆ.

ಈ ಕೂಡಲೇ ಪೈಪ್‍ಲೈನ್ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಎಂಜಿನಿಯರ್‌ ಶೋಭಾಲಕ್ಷ್ಮೀ ಅವರನ್ನು ಒತ್ತಾಯಿಸಿದ್ದರು.

ಕಾಮಗಾರಿ ನಡೆಸುತ್ತಿರುವ ಶೋಭಾಲಕ್ಷ್ಮೀ 'ಇದು ತಮ್ಮ ವ್ಯಾಪ್ತಿಗೆ ಬರುವ ಕಾಮಗಾರಿಯಲ್ಲ', ಎಂದು ಹೇಳುತ್ತಿದ್ದಂತೆ ರೊಚ್ಚಿಗೆದ್ದ ವಕೀಲ ಅಸ್ಗರ್, 'ಲಂಚ ಪಡೆದು ರಸ್ತೆಯ ಒಂದು ಭಾಗದಲ್ಲಿ ಕಾಮಗಾರಿ ನಡೆಸುತ್ತಿದ್ದೀರಾ, ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದೀರಿ. ನೀವು ಅಧಿಕಾರಿಯಾಗಿರಲು ನಾಲಾಯಕ್, ನಾಯಿಯಂತೆ ವರ್ತಿಸುತ್ತಿದ್ದೀರಿ' ಎಂದೆಲ್ಲಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಬಗ್ಗೆ ಶೋಭಾಲಕ್ಷ್ಮೀ ಅವರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಅಸ್ಗರ್‌ನನ್ನು ಠಾಣೆಗೆ ಕರೆಸಿದ ಠಾಣಾಧಿಕಾರಿಯು ಮುಚ್ಚಳಿಕೆ ಬರೆಯಿಸಿಕೊಂಡು‌ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ.


Thanks for reading ಮೊಬೈಲ್ ಅತಿಯಾಗಿ ಬಳಸಬಾರದು ಎಂದಿದ್ದಕ್ಕೆ ಮಗಳು ನಾಪತ್ತೆ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಮೊಬೈಲ್ ಅತಿಯಾಗಿ ಬಳಸಬಾರದು ಎಂದಿದ್ದಕ್ಕೆ ಮಗಳು ನಾಪತ್ತೆ

Post a Comment