ತಾಯಿಯೊಂದಿಗೆ ಜಗಳ, ಮನೆಬಿಟ್ಟು ಬಂದ ಬಾಲಕಿಗೆ ಥಳಿಸಿ ಗ್ಯಾಂಗ್ ರೇಪ್!

June 16, 2021
Wednesday, June 16, 2021


 ಲಖನೌ(ಜೂ.15): ಸಿಟ್ಟಿನಲ್ಲಿ ತೆಗೆದುಕೊಂಡು ಒಂದು ಸಣ್ಣ ನಿರ್ಧಾರ ಬಹುದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ. ಮನೆಯಲ್ಲಿ ತಾಯಿ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ 14 ವರ್ಷದ ಬಾಲಕಿ, ಮನೆಬಿಟ್ಟು ಹೊರಬಂದಿದ್ದಾಳೆ. ಪರಿಣಾಮ 6 ಕಾಮಾ ಪಿಶಾಚಿಗಳು ಬಾಲಕಿಗೆ ಥಳಿಸಿ ಗ್ಯಾಂಗ್ ರೇಪ್ ಮಾಡಿದ ಘಟನೆ ಲಖನೌದಲ್ಲಿ ನಡೆದಿದೆ. ಪೊಲೀಸರ ಕಾರ್ಯಚರಣೆಯಿಂದ ಆರೋಪಿಗಳನ್ನು ಬಂಧಿಸಲಾಗಿದೆ.

ತನ್ನ ಸಾಲ ಸೆಟಲ್ ಮಾಡಲು ಪತ್ನಿಯನ್ನೇ ಗೆಳೆಯರಿಗೆ ಬಿಟ್ಟುಕೊಟ್ಟ!.

ಇಂತೌಜ ಗ್ರಾಮದ 14ರ ಬಾಲಕಿ ತಾಯಿ ಜೊತೆಗಿನ ಮನಸ್ತಾಪದಿಂದ ಮನೆಬಿಟ್ಟು ಹೋಗುವ ನಿರ್ಧಾರ ಮಾಡಿದ್ದಾಳೆ. ಇಂತೌಜ ಗ್ರಾಮದಿಂದ ಮದಿಯೋನ್ ಗ್ರಾಮಕ್ಕೆ ಆಗಮಿಸಿದ್ದಾಳೆ. ಬಳಿ ಇ ರಿಕ್ಷಾವಾಲ ಇಕ್ರಮುದ್ದೀನ್ ಬಳಿ ರೈಲು ನಿಲ್ದಾಣಕ್ಕೆ ತೆರಳು ಮಾರ್ಗ ಕೇಳಿದ್ದಾರೆ.

ಒಬ್ಬಳೇ ಹಾಗೂ ಭಯಭೀತಗೊಂಡಿರುವ ಬಾಲಕಿ ಗಮನಿಸಿದ ರಿಕ್ಷಾವಾಲ ಇಕ್ರಮುದ್ದೀನ್ ಕಾರಣ ಕೇಳಿದ್ದಾನೆ.

ತಾನು ಕೆಲಸಕ್ಕಾಗಿ ಮುಂಬೈಗೆ ತೆರಳಬೇಕು ಇದಕ್ಕಾಗಿ ರೈಲು ನಿಲ್ದಾಣಕ್ಕೆ ತೆರಳಬೇಕಾಗಿ ಹೇಳಿದ್ದಾಳೆ. ತಕ್ಷಣವೇ ಬಾಲಕಿಗೆ ನೆರವು ನೀಡುವ ನಾಟವಾಡಿದ ಇಕ್ರಮುದ್ದೀನ್, ಕೆಲಸಕ್ಕಾಗಿ ಮುಂಬೈಗೆ ತೆರಳಬೇಕಿಲ್ಲ. ಪಕ್ಕದಲ್ಲಿನ ನಗರದಲ್ಲಿ ಕೆಲಸವಿದೆ. ನಾಳೆ ನಗರಕ್ಕೆ ತೆರಳುತ್ತಿದ್ದೇನೆ. ಕೆಲಸ ಕೊಡಿಸುವುದಾಗಿ ಹೇಳಿದ್ದಾನೆ.

ಆಸ್ಪತ್ರೆಯಲ್ಲಿ ವೈದ್ಯ​ರಿಂದ​ಲೇ ಯುವತಿ ಮೇಲೆ ಗ್ಯಾಂಗ್‌​ರೇ​ಪ್‌!.

ಬಳಿಕ ಆಕೆಯನ್ನು ಇಕ್ರಮುದ್ದೀನ್ ಯಾರು ಇಲ್ಲದ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಲೋಕದ ಪರಿಜ್ಞಾನದ ಇಲ್ಲದ 14ರ ಬಾಲಕಿ ಎಲ್ಲವನ್ನೂ ನಂಬಿದ್ದಾಳೆ. ಮನೆಗೆ ತೆರಳಿದ ಬಾಲಕಿಗೆ ಆಹಾರ ನೀಡಿದ್ದಾನೆ. ಕತ್ತಲಾಗುತ್ತಿದ್ದಂತೆ ತನ್ನ ಐವರು ಗೆಳಯರಿಗೆ ಕರೆ ಮಾಡಿ ಕರೆದಿದ್ದಾನೆ. ಬಳಿಕ ಬಾಲಕಿಗೆ ಚೆನ್ನಾಗಿ ಥಳಿಸಿ 6 ಮಂದಿ ಗ್ಯಾಂಗ್ ರೇಪ್ ಮಾಡಿದ್ದಾರೆ.

ಮರುದಿನ ಅಲ್ಲಿಂದ ಕರೆದೊಯ್ದು ಬೇರೊಂದು ಸ್ಥಳದಲ್ಲಿ ಮತ್ತೆ 6 ಮಂದಿ ಅತ್ಯಾಚಾರ ಮಾಡಿ, ಆಕೆಯನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದಾರೆ. ಇತ್ತ ಮಗಳು ಕಾಣೆಯಾದ ಕುರಿತು ಪೋಷಕರು ಇಂತೌಜ ಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತೀವ್ರ ಶೋದ ಕಾರ್ಯಚರಣೆ ಆರಂಭಗೊಂಡಾಗ ಮಾಹಿತಿ ಪಡೆದ ಪೊಲೀಸರು ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ.

ಬಾಲಕಿಯನ್ನು ಆಸ್ಪತ್ರೆ ದಾಖಲಿಸಿ ಪೊಲೀಸರಿಗೆ ಅತ್ಯಾಚಾರ ಆಗಿರುವುದು ಖಚಿತವಾಗಿದೆ. ಬಳಿಕ ಬಾಲಕಿ ಹೇಳಿದ ಮಾಹಿತಿಗಳ ಆಧಾರದಲ್ಲಿ ಪೊಲೀಸರು ಪತ್ತೆ ಕಾರ್ಯ ಆರಂಭಿಸಿದ್ದಾರೆ. ಪರಿಣಾಮ ಇಕ್ರಾಮುದ್ದೀನ್, ನಾಸೀಮ್, ಶಕೀಲ್, ನೂರ್ ಮೊಹಮ್ಮದ್, ಉತ್ತಮ ಶರ್ಮಾ ಹಾಗೂ ರಿತೇಶ್ ಯಾದವ್‌ನನ್ನು ಬಂಧಿಸಿದ್ದಾರೆ.

ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಇಕ್ರಾಮುದ್ದೀನ್ ಇದೇ ಅಸಾಹಯರಾಗಿ ರೈಲು ನಿಲ್ದಾಣಕ್ಕೆ ಆಗಮಿಸುವ, ಕೆಲಸಕ್ಕಾಗಿ ಲಖನೌ ಸೇರಿದಂತೆ ಕೆಲ ಪಟ್ಟಣಗಲ್ಲಿ ಅಲೆದಾಡುವ ಹುಡುಗಿಯರನ್ನು ಇದೇ ರೀತಿ ಅತ್ಯಾಚಾರ ಮಾಡಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

Thanks for reading ತಾಯಿಯೊಂದಿಗೆ ಜಗಳ, ಮನೆಬಿಟ್ಟು ಬಂದ ಬಾಲಕಿಗೆ ಥಳಿಸಿ ಗ್ಯಾಂಗ್ ರೇಪ್! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ತಾಯಿಯೊಂದಿಗೆ ಜಗಳ, ಮನೆಬಿಟ್ಟು ಬಂದ ಬಾಲಕಿಗೆ ಥಳಿಸಿ ಗ್ಯಾಂಗ್ ರೇಪ್!

Post a Comment