'ವಿದ್ಯಾರ್ಥಿ'ಗಳಿಗೆ ಸಿಹಿಸುದ್ದಿ : 'ರಾಜ್ಯ ಸರ್ಕಾರ'ದಿಂದ ವಿದ್ಯಾರ್ಥಿಗಳಿಗೆ 'ಕೆನೆಬರಿತ ಹಾಲಿನ ಪುಡಿ' ವಿತರಣೆ

June 19, 2021
Saturday, June 19, 2021

 


ಬೆಂಗಳೂರು : 2021-22ನೇ ಸಾಲಿನಲ್ಲಿ ಜೂನ್-2021 ಮತ್ತು ಜುಲೈ-2021ರ ಎರಡು ತಿಂಗಳ ಅವಧಿಗೆ ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳು ಅರ್ಧ ಕೆಜಿ ಕೆನೆಭರಿತ ಹಾಲಿನ ಪುಡಿಯನ್ನು ವಿತರಣೆ ಮಾಡಲು, ಕ್ಷೀರ ಭಾಗ್ಯ ಯೋಜನೆಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ರಾಜ್ಯದ ಶಾಲಾ ವಿದ್ಯಾರ್ಧಿಗಳಿಗೆ ಗುಡ್ ನ್ಯೂಸ್ ನೀಡಿದೆ.

ಈ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ವಿಶೇಷಾಧಿಕಾರಿ ಮತ್ತು ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್ ಆರ್ ನಾಧನ್ ನಡಾವಳಿ ಹೊರಡಿಸಿದ್ದು, 2021-22ನೇ ಸಾಲಿನಲ್ಲಿ ಕ್ಷೀರಭಾಗ್ಯ ಯೋಜನೆಯ ಫಲಾನುಭವಿ ವಿದ್ಯಾರ್ಥಿಗಳಿಗೆ ಜೂನ್ 2021 ಮತ್ತು ಜುಲೈ 2021ರ ಮಾಹೆಗಳಿಗೆ ಎರಡು ತಿಂಗಳ ಅವಧಿಗೆ ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳು ಅರ್ಧ ಕೆಜಿಯಂತೆ ಕೆನೆಭರಿತ ಹಾಲಿನ ಪುಡಿಯ ಪ್ಯಾಕೇಟ್ ಗಳನ್ನು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ ಸಂಸ್ಥೆಯಿಂದ ಖರೀದಿಸಿ, ವಿತರಣೆ ಮಾಡಲು, ರಾಷ್ಟ್ರೀಯ ಕಾರ್ಯಕ್ರಮದಡಿ ಪ್ರಾಥಮಿಕ ಶಿಕ್ಷಣಕ್ಕೆ ಪೌಷ್ಠಿಕ ಆಹಾರ ಬೆಂಬಲ(ಎಂಡಿಎಂ) ಕಾರ್ಯಕ್ರಮಕ್ಕೆ ರೂ.201773.46 ಲಕ್ಷಗಳ ವಾರ್ಷಿಕ ಅನುದಾನದಲ್ಲಿ ರೂ.16371.47 ಲಕ್ಷಗಳ ಅನುದಾನವನ್ನು ಈ ಆದೇಶದೊಂದಿಗೆ ಜಿಲ್ಲಾವಾರು ಬಿಡುಗಡೆ ಮಾಡಿ ಆದೇಶಿಸಿದೆ.

ಈ ಆದೇಶದಲ್ಲಿ ಬಿಡುಗಡೆಯಾದ ಮೊತ್ತಕ್ಕೆ ವೆಚ್ಚ ಭರಿಸಲು ಸಂಬಂಧಿಸಿದ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮತ್ತು ಮುಖ್ಯ ಲೆಕ್ಕಾಧಿಕಾರಿಗಳಿಗೆ ಅನುಮತಿ ನೀಡಲಾಗಿದೆ.

ಅನುದಾನವನ್ನು ಜಿಲ್ಲಾ ಪಂಚಾಯಿತಿ ನಿಧಿ-1ಕ್ಕೆ ಜಮಾ ಮಾಡಿಕೊಂಡು, ನಿಗದಿತ ಉದ್ದೇಶಗಳಿಗೆ ಮಾತ್ರ ಭರಿಸತಕ್ಕದ್ದು.

ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿ ಕೆನೆಭರಿತ ಹಾಲಿನ ಪುಡಿಯ ಪ್ಯಾಕೇಟ್ ಗಳನ್ನು ವಿತರಿಸುವಾಗ ಸರ್ಕಾರದಿಂದ ನಿಗದಿಪಡಿಸಲಾದ ಕೋವಿಡ್-19ರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂಬುದಾಗಿ ತಿಳಿಸಿದ್ದಾರೆ.Thanks for reading 'ವಿದ್ಯಾರ್ಥಿ'ಗಳಿಗೆ ಸಿಹಿಸುದ್ದಿ : 'ರಾಜ್ಯ ಸರ್ಕಾರ'ದಿಂದ ವಿದ್ಯಾರ್ಥಿಗಳಿಗೆ 'ಕೆನೆಬರಿತ ಹಾಲಿನ ಪುಡಿ' ವಿತರಣೆ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on 'ವಿದ್ಯಾರ್ಥಿ'ಗಳಿಗೆ ಸಿಹಿಸುದ್ದಿ : 'ರಾಜ್ಯ ಸರ್ಕಾರ'ದಿಂದ ವಿದ್ಯಾರ್ಥಿಗಳಿಗೆ 'ಕೆನೆಬರಿತ ಹಾಲಿನ ಪುಡಿ' ವಿತರಣೆ

Post a Comment