ಇಲ್ಲಿದೆ ಭಾರತದಲ್ಲಿ ಅತಿ ಹೆಚ್ಚು ಸಂಬಳ ಸಿಗುವ ಉದ್ಯೋಗಗಳ ಪಟ್ಟಿ

June 10, 2021
Thursday, June 10, 2021

 


ರ್ಯಾಂಡ್​ಸ್ಟ್ಯಾಂಡ್​ ಇನ್​​ಸೈಟ್ಸ್ ಸಂಬಳ ಪ್ರವೃತ್ತಿ ವರದಿ 2019 ದೇಶದಲ್ಲಿ ಅತೀ ಹೆಚ್ಚು ಸಂಬಳವನ್ನ ಪಡೆಯುತ್ತಿರುವ ಹುದ್ದೆಗಳ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಇದರಲ್ಲಿ ಬೆಂಗಳೂರು ಮೊದಲ ಸ್ಥಾನವನ್ನ ಪಡೆದಿದೆ. ಇದಾದ ಬಳಿಕ ಮುಂಬೈ, ಹೈದರಾಬಾದ್​, ದೆಹಲಿ ಹಾಗೂ ಪುಣೆ ನಂತರದ ಸ್ಥಾನವನ್ನ ಪಡೆದುಕೊಂಡಿವೆ. ಹಾಗಾದ್ರೆ ಅತೀ ಹೆಚ್ಚು ಸಂಬಳವನ್ನ ನೀಡುವಂತಹ ಕೆಲಸ ಯಾವುದು..? ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಇದಕ್ಕೆ ಉತ್ತರ ಇಲ್ಲಿದೆ ನೋಡಿ.

1. ಇನ್​ವೆಸ್ಟ್​ಮೆಂಟ್​ ಬ್ಯಾಂಕರ್​

ಇನ್​ವೆಸ್ಟ್​ಮೆಂಟ್​ ಬ್ಯಾಂಕರ್​ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹುದ್ದೆಯಾಗಿದೆ. ಈ ಹುದ್ದೆಯಲ್ಲಿ ಇರುವವರು ಆರ್ಥಿಕ ಸ್ಥಿತಿ, ಹಣಕಾಸು ವ್ಯವಹಾರಗಳ ಬಗ್ಗೆ ಸರಿಯಾದ ಜ್ಞಾನವನ್ನ ಹೊಂದಿರಬೇಕು. ಹೂಡಿಕೆಗಳು, ಷೇರುಗಳು ಈ ಎಲ್ಲದರ ಬಗ್ಗೆ ತಮ್ಮ ಗ್ರಾಹಕರಿಗೆ ಮಾಹಿತಿಯನ್ನ ನೀಡ್ತಾರೆ.

ಕಾಮರ್ಸ್​ನಲ್ಲಿ ಪದವಿ ಪಡೆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಈ ಹುದ್ದೆಯಲ್ಲಿ ಇರುವವರೆಗೂ 12 ಲಕ್ಷ ವಾರ್ಷಿಕ ಆದಾಯವನ್ನ ಪಡೆಯಬಹುದಾಗಿದೆ. ಅಲ್ಲದೇ ಅನುಭವಿ ಉದ್ಯೋಗಿಗಳು 30 -50 ಲಕ್ಷ ರೂಪಾಯಿ ಪ್ಯಾಕೇಜ್​ ಕೂಡ ಹೊಂದಿರುತ್ತಾರೆ.

2. ವೈದ್ಯಕೀಯ ಹುದ್ದೆ

ಪ್ರಸ್ತುತ ಪರಿಸ್ಥಿತಿಯಲ್ಲಿ ವೈದ್ಯಕೀಯ ಲೋಕಕ್ಕೆ ಎಷ್ಟು ಸಿಬ್ಬಂದಿಯಿದ್ದರೂ ಸಾಲದು ಎಂಬಂತಾಗಿದೆ. ಇಂತಹ ಪರಿಸ್ಥಿತಿಯ ವೈದ್ಯಕೀಯ ಕ್ಷೇತ್ರ ಕೂಡ ಅತೀ ಹೆಚ್ಚು ಸಂಬಳ ನೀಡುವ ವಿಭಾಗದಲ್ಲಿ ಸ್ಥಾನ ಪಡೆದಿದೆ. ಡೆಂಟಿಸ್ಟ್ರಿ, ಕಾರ್ಡಿಯೋಲಜಿ, ಗೈನಕಾಲಜಿ, ನರ್ಸಿಂಗ್​, ಫಾರ್ಮಸಿ, ಹೆಲ್ತ್​ಕೇರ್​ ಅಡ್ಮಿನಿಸ್ಟ್ರೇಟರ್​ ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತೆ.

ಇದಕ್ಕಾಗಿ ನೀಟ್​​ನಂತಹ ಪರೀಕ್ಷೆಯನ್ನ ಪಾಸ್​ ಮಾಡಿ ಎಂಬಿಬಿಎಸ್​​​ ಪದವಿ ಪಡೆದಿರಬೇಕು.

ಈ ಹುದ್ದೆಗಳಲ್ಲಿ ಇರುವವರು ವರ್ಷಕ್ಕೆ 4-5 ಲಕ್ಷ ರೂಪಾಯಿ ಮೂಲ ಸಂಬಳ ಪಡೆಯಲಿದ್ದಾರೆ. ಅನುಭವ ಹೊಂದಿರುವವರು ವಾರ್ಷಿಕ 17 ಲಕ್ಷ ರೂಪಾಯಿ ಸಂಬಳ ಪಡೆಯಲಿದ್ದಾರೆ.

3. ಚಾರ್ಟೆಡ್​​ ಅಕೌಟೆಂಟ್​

ಚಾರ್ಟೆಡ್​ ಅಕೌಟೆಂಟ್​ ಹುದ್ದೆಗೆ ಮೊದಲಿನಿಂದಲೂ ಡಿಮ್ಯಾಂಡ್​ ಇದೆ. ಇದು ಟ್ಯಾಕ್ಸ್ ​ಮ್ಯಾನೇಜ್​ಮೆಂಟ್​, ಫೈನಾನ್ಶಿಯಲ್​​ ಅಕೌಂಟಿಂಗ್​​​ ಸೇರಿದಂತೆ ಹಣಕಾಸಿಗೆ ಸಂಬಂಧಪಟ್ಟ ಮಾಹಿತಿಯನ್ನ ಹೊಂದಿರಬೇಕು.

ಈ ಹುದ್ದೆಯಲ್ಲಿ ಇರುವವರು ಆರಂಭಿಕ ಸಂಬಳದ ರೂಪದಲ್ಲಿ ವಾರ್ಷಿಕ 7 ಲಕ್ಷ ರೂಪಾಯಿ ಆದಾಯ ಪಡೆಯಲಿದ್ದಾರೆ. ಅನುಭವಿ ಚಾರ್ಟಡ್​ ಅಕೌಟೆಂಟ್​​ ವಾರ್ಷಿಕ 20-24 ಲಕ್ಷ ರೂಪಾಯಿ ಆದಾಯ ಪಡೆಯಲಿದ್ದಾರೆ.

4. ಡೇಟಾ ಸೈನ್ಸ್

ಡೇಟಾ ಸೈನ್ಸ್ ಯುವ ಜನತೆಯನ್ನ ಆಕರ್ಷಿಸುವ ಕ್ಷೇತ್ರಗಳಲ್ಲಿ ಒಂದಾಗಿದೆ. ಐಟಿ, ಟೆಲಿಕಾಂ, ಫೈನಾನ್ಸ್ ಹಾಗೂ ವಿಮೆ ಕಂಪನಿಗಳಲ್ಲಿ ಡೇಟಾ ಸೈಂಟಿಸ್ಟ್​ಗಳಿಗೆ ಡಿಮ್ಯಾಂಡ್​ ಹೆಚ್ಚಿದೆ. ಈ ಹುದ್ದೆಯಲ್ಲಿ ಇರುವವರು ವಾರ್ಷಿಕ 15 ಲಕ್ಷ ಸಂಬಳ ಪಡೆಯುತ್ತಾರೆ.

5. ಬ್ಲೋಕ್​ಚೈನ್​ ಡೆವಲಪರ್

ಬ್ಲೋಕ್ ​ಚೈನ್​ ಟೆಕ್ನಾಲಜಿ ಕೂಡ ದೇಶದಲ್ಲಿ ನಿಧಾನವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದಾಗಿದೆ. ಬ್ಲೋಕ್​ ಚೈನ್​​​ ಟೆಕ್ನಾಲಜಿಗೆ ಸರ್ಕಾರದ ನೀತಿ ಆಯೋಗದಲ್ಲೂ ಮುಖ್ಯ ಸ್ಥಾನವಿದೆ. ಇಂಜಿನಿಯರಿಂಗ್​​ ಹಿನ್ನೆಲೆ ಹೊಂದಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಯಲ್ಲಿ ವಾರ್ಷಿಕ 8 ಲಕ್ಷದಿಂದ 45 ಲಕ್ಷದವರೆಗೆ ಆದಾಯ ಸಿಗಲಿದೆ.

Thanks for reading ಇಲ್ಲಿದೆ ಭಾರತದಲ್ಲಿ ಅತಿ ಹೆಚ್ಚು ಸಂಬಳ ಸಿಗುವ ಉದ್ಯೋಗಗಳ ಪಟ್ಟಿ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಇಲ್ಲಿದೆ ಭಾರತದಲ್ಲಿ ಅತಿ ಹೆಚ್ಚು ಸಂಬಳ ಸಿಗುವ ಉದ್ಯೋಗಗಳ ಪಟ್ಟಿ

Post a Comment