'ಬಾಂಬ್ʼ ಕೈಯಲ್ಲಿಡಿದು ಪೊಲೀಸ್‌ ಠಾಣೆಗೆ ಎಂಟ್ರಿ ಕೊಟ್ಟ ಯುವಕ.. ಇದರ ಹಿಂದಿನ ಸ್ಟೋರಿ ರೋಚಕ

June 13, 2021
Sunday, June 13, 2021

 


ಡಿಜಿಟಲ್‌ ಡೆಸ್ಕ್ :‌ ಮಹಾರಾಷ್ಟ್ರದ ನಾಗ್ಪುರದಲ್ಲಿ ಯುವಕನೊಬ್ಬ ಬಾಂಬ್‌ ಇರುವ ಬ್ಯಾಗ್‌ ಕೈಯಲ್ಲಿಡಿದು ನಂದನ್ ವಾನ್ ಪೊಲೀಸ್ ಠಾಣೆಯೊಳಗೆ ಒಳನುಗ್ಗಿದ್ದು, ಅಲ್ಲಿರುವ ಸಿಬ್ಬಂದಿಗಳಲ್ಲಿ ಆತಂಕ ಸೃಷ್ಟಿಸಿದ್ದಾನೆ. ಮೊದ ಮೊದಲು ಆ ಬ್ಯಾಗ್ ಕಾಲೇಜು ಬಳಿ ಸಿಕ್ಕಿತ್ತು‌ ಅಂತಾ ಹೇಳ್ತಿದ್ದ ಯುವಕ ಪೊಲೀಸರ ವಿಚಾರಣೆಯಲ್ಲಿ ರೋಚಕ ಸ್ಟೋರಿಯೊಂದನ್ನ ತೆರೆದಿಟ್ಟಿದ್ದಾನೆ.

ಅಧಿಕಾರಿಗಳು ಹೇಳುವಂತೆ, ಬಾಂಬ್‌ ಬ್ಯಾಗ್‌ ಕೈಯಲ್ಲಿಡಿದು ತಂದ ಯುವಕನ ಹೆಸ್ರು ರಾಹುಲ್ ಪಗಾಡೆ ಅಂತಾ. 25 ವರ್ಷದ ಈ ಯುವಕ ಆನ್ ಲೈನ್ ಟ್ಯುಟೋರಿಯಲ್ʼಗಳನ್ನು ನೋಡುವ ಮೂಲಕ ಪೆಟ್ರೋಲ್ ಬಾಟಲಿ ಮತ್ತು ಬ್ಯಾಟರಿ ಬಳಸಿ ಸ್ಫೋಟಕವನ್ನ ಸ್ವತಃ ಸಿದ್ಧಪಡಿಸಿದ್ದಾನೆ.

ಆದ್ರೆ, ಆತ ಯಾವುದೇ ಭಯೋತ್ಪಾದನಾ ಹಿನ್ನೆಲೆಯನ್ನ ಹೊಂದಿಲ್ಲ. ಇನ್ನು ಸ್ಫೋಟಕದಿಂದ ಯಾರಿಗೂ ಹಾನಿ ಮಾಡುವ ಉದ್ದೇಶವೂ ಆತನಿಗೆ ಇರ್ಲಿಲ್ಲ.

ರಾಹುಲ್‌ ಸಲೂನ್ʼನಲ್ಲಿ ಕೆಲಸ ಮಾಡುತ್ತಿದ್ದು, ನಗರದ ಸಾಯಿಬಾಬಾ ನಗರದ ಬಾಡಿಗೆ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಾನೆ. ಅವನ ಹೆತ್ತವರು ತೀರಿಕೊಂಡಿದ್ದು, ಅವನ ಮೂವರು ಸಹೋದರಿಯರಿಗೆ ಮದುವೆಯಾಗಿದೆ.

ಈ ರಾಹುಲ್‌ 'ಟ್ಯುಟೋರಿಯಲ್ʼಗಳನ್ನ ನೋಡಿ ಬಾಂಬ್ ತಯಾರಿಕೆಯನ್ನ ಕಲಿತಿದ್ದು, ಅದನ್ನ ಸ್ವತಃ ತಯಾರಿಸಲು ನಿರ್ಧರಿಸಿದ್ದೇನೆ. ಅದ್ರಂತೆ, ಪಟಾಕಿಗಳಿಂದ ಫ್ಲ್ಯಾಶ್ ಪೌಡರ್ ಹೊರ ತೆಗೆದರು ಮತ್ತು ತಾತ್ಕಾಲಿಕ ಬಾಂಬ್ ತಯಾರಿಸಲು ಮೊಬೈಲ್ ಬ್ಯಾಟರಿ ಮತ್ತು ಪೆಟ್ರೋಲ್ ಬಾಟಲಿಯನ್ನ ಬಳಸಿದ್ದಾನೆ. ಬ್ಯಾಟರಿಯಿಂದ ಪೆಟ್ರೋಲ್ ಬಾಟಲಿಗೆ ತಂತಿಗಳನ್ನ ಸಂಪರ್ಕಿಸಲಾಗಿದೆ' ಎಂದು ಅಧಿಕಾರಿ ಹೇಳಿದರು.

ಆದಾಗ್ಯೂ, ಆತ ಸಣ್ಣ ಬಾಂಬ್‌ ತಯಾರಿಸಲು ನಿರ್ಧರಿಸಿದ್ದು, ಸ್ಫೋಟಕ ವಸ್ತುಗಳನ್ನ ಬಳಸಿಲ್ಲ. ಇನ್ನು ತಂತಿಗಳ ಸಂಪರ್ಕ ಕಡಿತಗೊಳಿಸಿ, ಪೊಲೀಸ್ ಠಾಣೆಗೆ ಬಂದಿದ್ದು, ಶನಿವಾರ ಸಂಜೆ 5 ಗಂಟೆಗೆ ಚೀಲವನ್ನ ಪೊಲೀಸರಿಗೆ ಹಸ್ತಾಂತರಿಸಿದರು.

'ಯುವಕ ಕೆಡಿಕೆ ಕಾಲೇಜಿನ ಬಳಿ ಬಾಂಬ್ ಇರುವ ಚೀಲವನ್ನ ಬಿಟ್ಟಿರುವುದನ್ನ ಪೊಲೀಸರಿಗೆ ತಿಳಿಸಿದ್ದಾನೆ. ಆದ್ರೆ, ಪೊಲೀಸರು ಆತನ ಹೇಳಿಕೆ ಬಗ್ಗೆ ಅನುಮಾನ ಬಂದು ವಿಚಾರಣೆ ನಡೆಸಿದರು. ಅಂತಿಮವಾಗಿ, ಅವನೇ ಸ್ವತಃ ಸ್ಫೋಟಕವನ್ನ ತಯಾರಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತ್ರ ಆ ಸ್ಫೋಟಕವನ್ನ ಏನು ಮಾಡಬೇಕೆಂದು ಅರ್ಥವಾಗದ ಕಾರಣ, ಬಾಂಬ್ ನಿಷ್ಕ್ರಿಯಗೊಳಿಸುವ ಭರವಸೆಯೊಂದಿಗೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾನೆ' ಎಂದು ಅಧಿಕಾರಿ ಹೇಳಿದರು.

ರಾಹುಲ್‌ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಮುಂಬೈ ಪೊಲೀಸ್ ಕಾಯ್ದೆಯ ಸೆಕ್ಷನ್ 123ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Thanks for reading 'ಬಾಂಬ್ʼ ಕೈಯಲ್ಲಿಡಿದು ಪೊಲೀಸ್‌ ಠಾಣೆಗೆ ಎಂಟ್ರಿ ಕೊಟ್ಟ ಯುವಕ.. ಇದರ ಹಿಂದಿನ ಸ್ಟೋರಿ ರೋಚಕ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on 'ಬಾಂಬ್ʼ ಕೈಯಲ್ಲಿಡಿದು ಪೊಲೀಸ್‌ ಠಾಣೆಗೆ ಎಂಟ್ರಿ ಕೊಟ್ಟ ಯುವಕ.. ಇದರ ಹಿಂದಿನ ಸ್ಟೋರಿ ರೋಚಕ

Post a Comment