ನೀರಿಗೆ ಇದನ್ನ ಮಿಕ್ಸ್‌ ಮಾಡಿಕೊಂಡು ಕುಡಿಯಿರಿ.. ತೂಕ ಕಡಿಮೆಯಾಗೋದ್ರ ಜೊತೆಗೆ ಕಣ್ಣಿನ ದೃಷ್ಠಿಯೂ ಚುರುಕಾಗುತ್ತೆ..!

June 18, 2021
Friday, June 18, 2021

 


ನವದೆಹಲಿ : ಸ್ಥೂಲಕಾಯದಿಂದ ನೀವು ತೊಂದರೆಗೀಡಾದ್ದೀರಾ? ಹಾಘಾದ್ರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಬಹುದು. ಹೌದು, ನೀವು ನಿಯಮಿತವಾಗಿ ನೀರಿಗೆ ಸೋಂಪು ಮಿಕ್ಸ್‌ ಮಾಡಿಕೊಂಡು ಕುಡಿಯುವುದ್ರಿಂದ ಆನೇಕ ಪ್ರಯೋಜನೆಗಳು ಲಭಿಸುತ್ವೆ. ಹಾಗಾದ್ರೆ, ಎಷ್ಟು ನೀಡಿಗೆ, ಎಷ್ಟು ಸೋಂಪು ಹಾಕಬೇಕು? ಯಾವಾಗ ಕುಡಿಯಬೇಕು? ಇದ್ರಿಂದಾಗೋ ಪ್ರಯೋಜನೆಗಳ ಪಟ್ಟಿ ಇಲ್ಲಿದೆ.

ಬಹಳಷ್ಟು ಜನ ಆಹಾರವನ್ನ ಸೇವಿಸಿದ ನಂತ್ರ ಸೋಂಪು ತಿನ್ನಲು ಇಷ್ಟಪಡುತ್ತಾರೆ. ಇದರಿಂದ ಬಾಯಿಯ ವಾಸನೆ ಓಡಿಸಬಹುದು. ಇನ್ನು ಸೋಂಪು ಮೌತ್ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುವುದಲ್ಲದೆ, ಅದನ್ನ ತಿನ್ನುವುದರಿಂದ ದೇಹದ ಅನೇಕ ಸಮಸ್ಯೆಗಳು ನಿವಾರಣೆವಾಗುತ್ತವೆ.

ಸೋಂಪು ನೀರು ಕುಡಿಯುವುದರಿಂದ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುತ್ತದೆ ಮತ್ತು ಹೊಟ್ಟೆಯ ಸಮಸ್ಯೆಗಳನ್ನ ಸಹ ನಿವಾರಣೆ ಆಗುತ್ವೆ.

ಸೋಂಪಿನಲ್ಲಿ ಏನಿರುತ್ವೆ?
ಸೋಂಪು ಒಂದು ಆಯುರ್ವೇದ ಔಷಧವಾಗಿದ್ದು, ಇದು ಬಹುತೇಕ ಪ್ರತಿಯೊಂದು ಅಡುಗೆ ಮನೆಯಲ್ಲಿಯೂ ಇರುತ್ತೆ. ಕ್ಯಾಲ್ಸಿಯಂ, ಸೋಡಿಯಂ, ಕಬ್ಬಿಣ ಮತ್ತು ಪೊಟ್ಯಾಸಿಯಮ್ ನಂತಹ ಅಂಶಗಳು ಸೋಂಪಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತವೆ. ಹಾಗಾಗಿನೇ ಬೇಸಿಗೆಯಲ್ಲಿ ಅನೇಕರು ಈ ಸೋಂಪು ನೀರು ಕುಡಿಯುತ್ತಾರೆ.

ಆಯುರ್ವೇದದ ಪ್ರಕಾರ, ತೂಕ ಇಳಿಸುವಲ್ಲಿ ಪರಿಣಾಮಕಾರಿ ಎಂದು ತಿಳಿದಿರುವ ಡಾ. ಅಬ್ರಾರ್ ಮುಲ್ತಾನಿ, ಸೋಂಪುಗಳಲ್ಲಿ ನಾರಿನ ಪ್ರಮಾಣವು ತುಂಬಾ ಹೆಚ್ಚಾಗಿದೆ. ಸೋಂಪಿನಲ್ಲಿರುವ ಕ್ಯಾಲೊರಿಗಳು ನಗಣ್ಯ. ಇದರಿಂದ ತೂಕ ಕಡಿಮೆ ಮಾಡಲು ನೆರವಾಗುತ್ತದೆ. ಇದು ದೇಹದಲ್ಲಿ ಕೊಬ್ಬು ಸಂಗ್ರಹವಾಗಲು ಬಿಡುವುದಿಲ್ಲ, ಇದು ಬೊಜ್ಜು ಅಪಾಯವನ್ನ ಕಡಿಮೆ ಮಾಡುತ್ತದೆ. ಸೋಂಪು ನೀರನ್ನ ಕುಡಿಯುವುದರಿಂದ ದೇಹದಿಂದ ವಿಷಕಾರಿ ವಸ್ತುಗಳನ್ನ ಹೊರ ಹಾಕುತ್ತದೆ. ದೇಹದ ಚಯಾಪಚಯ ಕ್ರಿಯೆ ಬಲಗೊಳ್ಳುವುದು. ಉತ್ತಮ ಚಯಾಪಚಯ ಕ್ರಿಯೆಯು ತೂಕವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

ಸೋಂಪು ನೀರನ್ನು ಈ ರೀತಿ ತಯಾರಿಸಿ..!
* ರಾತ್ರಿ ಒಂದು ಲೋಟ ನೀರಿನಲ್ಲಿ 2 ಟೀ ಚಮಚ ಸೋಂಪು ಮತ್ತು ಸ್ವಲ್ಪ ಸಕ್ಕರೆಯನ್ನ ಹಾಕಿ ಕರಗಿಸಿ.
* ಈ ನೀರನ್ನು ಬೆಳಿಗ್ಗೆ ಸೋಸಿ ಕುಡಿಯಿರಿ.
* ಈ ರೀತಿ ಮಾಡುವುದರಿಂದ ಅನೇಕ ರೋಗಗಳಿಂದ ಮುಕ್ತಿ ಸಿಗುತ್ತದೆ.

ಸೋಂಪು ನೀರಿನಿಂದಾಗುವ ಇತರ ಪ್ರಯೋಜನಗಳು..!
* ಮಲಬದ್ಧತೆಯ ದೂರುಗಳನ್ನ ಹೊಂದಿರುವ ಜನರು, ಖಂಡಿತವಾಗಿಯೂ ದಿನಕ್ಕೆ ಒಮ್ಮೆ ಸೋಂಪು ನೀರನ್ನು ಕುಡಿಯಬೇಕು ಎಂದು ವೈದ್ಯರು ಹೇಳುತ್ತಾರೆ.
* ಸೋಂಪು ಕಣ್ಣಿನ ದೃಷ್ಟಿಯನ್ನ ಹೆಚ್ಚಿಸುತ್ತದೆ. ಸೋಂಪು ನೀರನ್ನ ಪ್ರತಿದಿನ ಕುಡಿದ್ರೆ, ಅದು ಕಣ್ಣುಗಳನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಅವುಗಳಲ್ಲಿ ಯಾವುದೇ ಸೋಂಕು ಇರುವುದಿಲ್ಲ.
* ಸೋಂಪು ನೀರನ್ನ ನಿಯಮಿತವಾಗಿ ಕುಡಿಯುವ ಮೂಲಕ ಅನಿಲ ಮತ್ತು ಆಮ್ಲೀಯತೆಯ ಸಮಸ್ಯೆಯನ್ನು ತೆಗೆದು ಹಾಕಲಾಗುವುದು. ಯಾವಾಗಲೂ ಅಜೀರ್ಣ ಮತ್ತು ಮಲಬದ್ಧತೆಯ ದೂರುಗಳನ್ನ ಹೊಂದಿರುವವರು ಸೋಂಪು ನೀರನ್ನ ಕುಡಿಯಬೇಕು.
* 10 ಗ್ರಾಂ ಸೋಂಪು ರಸವನ್ನ ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಎರಡರಿಂದ ಮೂರು ಬಾರಿ ತೆಗೆದುಕೊಳ್ಳುವುದರಿಂದ ಕೆಮ್ಮು ಸಹ ಗುಣವಾಗುತ್ತದೆ.

Thanks for reading ನೀರಿಗೆ ಇದನ್ನ ಮಿಕ್ಸ್‌ ಮಾಡಿಕೊಂಡು ಕುಡಿಯಿರಿ.. ತೂಕ ಕಡಿಮೆಯಾಗೋದ್ರ ಜೊತೆಗೆ ಕಣ್ಣಿನ ದೃಷ್ಠಿಯೂ ಚುರುಕಾಗುತ್ತೆ..! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ನೀರಿಗೆ ಇದನ್ನ ಮಿಕ್ಸ್‌ ಮಾಡಿಕೊಂಡು ಕುಡಿಯಿರಿ.. ತೂಕ ಕಡಿಮೆಯಾಗೋದ್ರ ಜೊತೆಗೆ ಕಣ್ಣಿನ ದೃಷ್ಠಿಯೂ ಚುರುಕಾಗುತ್ತೆ..!

Post a Comment