ತಲೆ ಮೇಲೆ ಪಾತ್ರೆ ಹೊತ್ತು ನೀರಿನಲ್ಲೇ ಬೈಕ್ ಓಡಿಸಿದ ಮಹಿಳೆ! ಜೈ ಎನ್ನುತ್ತಿದ್ದಾರೆ ನೆಟ್ಟಿಗರು

June 16, 2021
Wednesday, June 16, 2021

 


ಬೆಂಗಳೂರು: ನಾರಿಶಕ್ತಿಯ ಬಗ್ಗೆ ಅನೇಕರು ಮಾತನಾಡುತ್ತಾರೆ. ಹೆಣ್ಣಿನಿಂದ ಸಾಧ್ಯವಾಗದ್ದು ಏನೂ ಇಲ್ಲ ಎನ್ನುವ ಮಾತಿದೆ. ಅನೇಕ ಕಟ್ಟುಪಾಡಿನಿಂದ ಹೊರಬಂದಿರುವ ಹೆಣ್ಣು ಇಂದು ಸೈಕಲ್​ನಿಂದ ಹಿಡಿದು ವಿಮಾನದವರೆಗೂ ಎಲ್ಲವನ್ನೂ ಚಲಾಯಿಸಬಲ್ಲಷ್ಟು ಸಬಲಳಾಗಿದ್ದಾಳೆ. ಅದೇ ರೀತಿ ಇಲ್ಲೊಬ್ಬಳು ಹೆಣ್ಣು ಮಗಳು ತಲೆ ಮೇಲೆ ಪಾತ್ರೆಯ ಟಬ್ ಇಟ್ಟುಕೊಂಡೇ ನೀರಿನಲ್ಲಿ ಬೈಕ್ ಓಡಿಸಿದ್ದು, ಆಕೆಯ ವಿಡಿಯೋ ಸಕತ್ ವೈರಲ್ ಆಗಿದೆ.

ಇಂತದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಹಿಳೆಯೊಬ್ಬಳು ನೀರಿರುವ ಪ್ರದೇಶದಲ್ಲಿ ಪಾತ್ರೆ ತೊಳೆದು ಅದನ್ನು ಟಬ್ ಒಂದರಲ್ಲಿ ಹಾಕಿಕೊಂಡು, ಟಬ್​ ಅನ್ನು ತಲೆ ಮೇಲೆ ಹೊತ್ತು ಬೈಕ್ ಹತ್ತುತ್ತಾಳೆ. ಎರಡೂ ಕೈಗೆ ಎರಡು ಕವರ್​ ಜೋತು ಹಾಕಿಕೊಂಡು, ಬ್ಯಾಲೆನ್ಸ್​ ಮಾಡುತ್ತ ಗೇರ್​ ಬೈಕ್​ ಹೊಡೆಯುವ ಆಕೆ ನೀರಿನಲ್ಲಿಯೇ ಗಾಡಿ ಓಡಿಸುತ್ತಾಳೆ.

ಎಲ್ಲಿಯೂ ಬ್ಯಾಲೆನ್ಸ್ ತಪ್ಪದೆ ಪಾತ್ರೆಗಳನ್ನು ನೀಟಾಗಿ ತೆಗೆದುಕೊಂಡು ಹೋಗುವ ವಿಡಿಯೋ ಅದಾಗಿದೆ.

ಮಹಿಳೆಯ ವಿಡಿಯೋವನ್ನು ನೋಡಿರುವ ನೆಟ್ಟಿಗರು ಆಕೆಯನ್ನು ಸೂಪರ್ ವುಮೆನ್, ವಂಡರ್​ ವುಮೆನ್ ಎಂದು ಕರೆಯಲಾರಂಭಿಸಿದ್ದಾರೆ. ಹೆಣ್ಣಿನ ಕೈನಲ್ಲಿ ಆಗದ ಕೆಲಸ ಯಾವುದೂ ಇಲ್ಲ ಎಂದು ಶಹಬ್ಬಾಸ್​ ಹೇಳತೊಡಗಿದ್ದಾರೆ.

ವೀಡಿಯೋ ನೋಡಿ:ಕ್ಲಿಕ್ ಮಾಡಿ

Thanks for reading ತಲೆ ಮೇಲೆ ಪಾತ್ರೆ ಹೊತ್ತು ನೀರಿನಲ್ಲೇ ಬೈಕ್ ಓಡಿಸಿದ ಮಹಿಳೆ! ಜೈ ಎನ್ನುತ್ತಿದ್ದಾರೆ ನೆಟ್ಟಿಗರು | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ತಲೆ ಮೇಲೆ ಪಾತ್ರೆ ಹೊತ್ತು ನೀರಿನಲ್ಲೇ ಬೈಕ್ ಓಡಿಸಿದ ಮಹಿಳೆ! ಜೈ ಎನ್ನುತ್ತಿದ್ದಾರೆ ನೆಟ್ಟಿಗರು

Post a Comment