ಹಸಿವು ತಾಳದೇ ಕೂದಲನ್ನು ತಿನ್ನುತ್ತಿದ್ದ ಬಾಲಕಿ: ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರಿಗೆ ಕಾದಿತ್ತು ಅಚ್ಚರಿ!

June 13, 2021
Sunday, June 13, 2021

 


ಹೈದರಾಬಾದ್: ಸುಮಾರು 16 ವರ್ಷದ ಬಾಲಕಿಯೊಬ್ಬಳು ವಿಚಿತ್ರ ಕಾಯಿಲೆಗೆ ತುತ್ತಾಗಿ ಕೂದಲನ್ನು ತಿನ್ನುವ ಹವ್ಯಾಸ ಬೆಳೆಸಿಕೊಂಡಿರುವ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ.

'ರಾಪುಂಜೆಲ್ ಸಿಂಡ್ರೋಮ್' ಎಂಬ ಅಪರೂಪದ ಕಾಯಿಲೆಯಿಂದ ಶಂಶಾಬಾದ್‌ ಎಂಬ ಬಾಲಕಿ ಬಳಲುತ್ತಿದ್ದಳು. ಇದಕ್ಕೆ ಕಾರಣ ಹಸಿವಿನಿಂದ ತನ್ನ ಕೂದಲನ್ನೇ ಈಕೆ ಐದು ತಿಂಗಳಿನಿಂದ ಸೇವಿಸುತ್ತಾ ಬಂದಿದ್ದಾಳೆ. ನಂತರ ಸಮಸ್ಯೆ ವಿಪರೀತಕ್ಕೆ ಹೋದಾಗ ಆಸ್ಪತ್ರೆಗೆ ಸೇರಿಸಲಾಗಿದೆ.ಈಕೆಯ ಶಸ್ತ್ರಚಿಕಿತ್ಸೆ ಮಾಡಿದಾಗ ವೈದ್ಯರೇ ಗಾಬರಿಯಾಗಿದ್ದಾರೆ.

ಏಕೆಂದರೆ ಸುಮಾರು ಎರಡು ಕೆಜಿಯಷ್ಟು ಕೂದಲು ಹೊಟ್ಟೆಯ ಒಳಗೆ ಶೇಖರಣೆಯಾಗಿತ್ತು. ತೆಲಂಗಾಣದ ಉಸ್ಮಾನಿಯಾ ಜನರಲ್ ಆಸ್ಪತ್ರೆ ವೈದ್ಯರು ಕೊನೆಗೂ ಕೂದಲು ತೆಗೆದು ಈಕೆಯ ಪ್ರಾಣ ಕಾಪಾಡಿದ್ದಾರೆ.

150 ಸೆಂ.ಮೀ ಉದ್ದ ಬೆಳೆದಿದ್ದ ಸುಮಾರು 2 ಕೆಜಿ ಕೂದಲನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿದೆ. ವಾಂತಿ ಮತ್ತು ಹೊಟ್ಟೆ ನೋವಿನಿಂದಾಗಿ ಒಂದು ತಿಂಗಳ ಹಿಂದೆ 17 ವರ್ಷದ ಹುಡುಗಿ ಪೂಜಿತಾ ಮಂಡಲ್ ಆಸ್ಪತ್ರೆಗೆ ದಾಖಲಾಗಿದ್ದಳು. ತನ್ನ ಸ್ವಂತ ಕೂದಲನ್ನು ಹುಡುಗಿ ತಿನ್ನುತ್ತಿದ್ದಳು ಎಂದು ಆಕೆಯ ಸಹೋದರಿ ತಿಳಿಸಿದ ಬಳಿಕ ಆಕೆಗೆ ಚಿಕಿತ್ಸೆ ಪ್ರಾರಂಭಿಸಿದ್ದೆವು ಎಂದು ಉಸ್ಮಾನಿಯ ಆಸ್ಪತ್ರೆಯ ಅಧೀಕ್ಷಕ ಡಾ.ನಾಗೇಂದರ್ ಬಿ. ಹೇಳಿದ್ದಾರೆ.

Thanks for reading ಹಸಿವು ತಾಳದೇ ಕೂದಲನ್ನು ತಿನ್ನುತ್ತಿದ್ದ ಬಾಲಕಿ: ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರಿಗೆ ಕಾದಿತ್ತು ಅಚ್ಚರಿ! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಹಸಿವು ತಾಳದೇ ಕೂದಲನ್ನು ತಿನ್ನುತ್ತಿದ್ದ ಬಾಲಕಿ: ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರಿಗೆ ಕಾದಿತ್ತು ಅಚ್ಚರಿ!

Post a Comment