ಗಂಗೆಯಲ್ಲಿ ತೇಲಿಬಂದ ಶಿಶುವೀಗ ನಮ್ಮ ಮಗು ಎಂದ ಸರ್ಕಾರ: ಅಂಬಿಗನಿಗೂ ಖುಲಾಯಿಸಿತು ಅದೃಷ್ಟ

June 17, 2021
Thursday, June 17, 2021


 ಲಖನೌ: ಉತ್ತರ ಪ್ರದೇಶದ ಘಾಜಿಪುರದ ಗಂಗಾ ನದಿಯಲ್ಲಿ ಎರಡು ದಿನಗಳ ಹಿಂದೆ ಬುಟ್ಟಿಯೊಂದರಲ್ಲಿ ತೇಲಿಬಂದ ಹೆಣ್ಣುಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಂಡಿದೆ.


22 ದಿನಗಳ ಹೆಣ್ಣು ಮಗುವೊಂದು ಮರದ ಪೆಟ್ಟಿಗೆಯಲ್ಲಿ ಸಿಕ್ಕಿತ್ತು. ಅಂಬಿಗನೊಬ್ಬ ಅದನ್ನು ಕಾಪಾಡಿದ್ದ. ಈ ಮಗುವನ್ನು ಸಾಕುವುದಾಗಿ ಕೆಲವರು ಮುಂದೆ ಬಂದಿದ್ದರು. ಆದರೆ ಇದೀಗ ಈ ವಿಷಯವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಮಗುವಿನ ಸಂಪೂರ್ಣ ಜವಾಬ್ದಾರಿಯನ್ನ ಸರ್ಕಾರವೇ ನೋಡಿಕೊಳ್ಳಲಿದೆ ಎಂದು ಹೇಳಿದ್ದಾರೆ.

ಮರದ ಪೆಟ್ಟಿಗೆಯಲ್ಲಿ ಈ ಮಗು ತೇಲಿಬಂದಿತ್ತು. ದಾದ್ರಿ ಘಾಟ್​ನಲ್ಲಿ ಮಗುವಿನ ಅಳು ಶಬ್ದ ಕೇಳಿದ ಅಂಬಿಗ ಎಲ್ಲೆಡೆ ನೋಡಿದಾಗ ಮರದ ಪೆಟ್ಟಿಗೆಯೊಂದು ಕಂಡು ಬಂದಿತ್ತು. ಈ ಪೆಟ್ಟಿಗೆಯಲ್ಲಿ ದೇವಿಯ ಫೋಟೊ ಹಾಗೂ ಮಗುವಿನ ಜಾತಕವನ್ನೂ ಇಡಲಾಗಿತ್ತು ಎನ್ನಲಾಗಿದೆ.
ಮಗುವನ್ನ ಆಶಾ ಜ್ಯೋತಿ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಆರೋಗ್ಯ ತಪಾಸಣೆ ಬಳಿಕ ಗಂಗಾ ಎಂದು ನಾಮಕರಣ ಮಾಡಲಾಗಿದೆ.

ಮಗುವನ್ನು ಕಾಪಾಡಿದ ಅಂಬಿಗನಿಗೂ ಗೌರವಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅವರಿಗೆ ಮನೆ ಸೌಕರ್ಯವನ್ನ ಒದಗಿಸಲಿದೆ. ಜತೆಗೆ ಅವರಿಗೆ ಯೋಗ್ಯವಾದ ಯೋಜನೆ ಮೂಲಕವೂ ಅನುದಾನವನ್ನ ನೀಡುವ ಎಲ್ಲಾ ವ್ಯವಸ್ಥೆ ಮಾಡಲಾಗುತ್ತೆ ಎಂದು ಯೋಗಿ ಆದಿತ್ಯನಾಥ ಹೇಳಿದ್ದಾರೆ.

Thanks for reading ಗಂಗೆಯಲ್ಲಿ ತೇಲಿಬಂದ ಶಿಶುವೀಗ ನಮ್ಮ ಮಗು ಎಂದ ಸರ್ಕಾರ: ಅಂಬಿಗನಿಗೂ ಖುಲಾಯಿಸಿತು ಅದೃಷ್ಟ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಗಂಗೆಯಲ್ಲಿ ತೇಲಿಬಂದ ಶಿಶುವೀಗ ನಮ್ಮ ಮಗು ಎಂದ ಸರ್ಕಾರ: ಅಂಬಿಗನಿಗೂ ಖುಲಾಯಿಸಿತು ಅದೃಷ್ಟ

Post a Comment