ಹಸಿವು ತಾಳದೇ ಚಾಮರಾಜನಗರದಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

June 02, 2021
Wednesday, June 2, 2021

ಹಸಿವು ತಾಳದೇ ಚಾಮರಾಜನಗರದಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

File Type: News                                                     

File Language :- Kannada

Which Department :- Education

State :- karnataka

Published Date :- 03/06/2021

File Format :-pdf

File Size :- 887kb

Number Of Pages :- 01

Scanned Copy :- Yes

Copy Text :- No

Enable :- Yes

Quality :- High

File Size Reduced :- No

Password Protected :- No

Passworod Encrypted:- No

Image File Available :- Yes

File Vieow Available :- Yes

Download Link Available :- Yes

Cost :- No

Personal Use Onlyಚಾಮರಾಜನಗರ: ಒಂದೇ ಕುಟುಂಬದ ನಾಲ್ವರು ನೇಣಿಗೆ ಶರಣಾದ ಘಟನೆ ಚಾಮರಾಜನಗರ ತಾಲ್ಲೂಕಿನ ಎಚ್.ಮೂಕಹಳ್ಳಿಯಲ್ಲಿ ನಡೆದಿದೆ.

ಎಚ್.ಮೂಕಹಳ್ಳಿಯ ಗ್ರಾಮದ ಮಹದೇವಪ್ಪ (46), ಅವರ ಪತ್ನಿ ಮಂಗಳಮ್ಮ (40) ವರ್ಷ, ಮಕ್ಕಳಾದ ಜ್ಯೋತಿ (14) ವರ್ಷ ಹಾಗೂ ಶ್ರುತಿ (12) ಮೃತಪಟ್ಟವರು. ಆರ್ಥಿಕ ಸಂಕಷ್ಟ, ಹಸಿವು ತಾಳದೇ ಈ ಕುಟುಂಬವು ಆತ್ಮಹತ್ಯೆಗೆ ಶರಣಾಗಿದೆ ಎನ್ನಲಾಗಿದೆ.

ಕೂಲಿ‌ ಕಾರ್ಮಿಕರಾಗಿದ್ದ ಮಹಾದೇವಪ್ಪ ಅವರಿಗೆ 20 ದಿನಗಳ ಹಿಂದೆ ಕೋವಿಡ್ ದೃಢಪಟ್ಟು, ಚೇತರಿಸಿಕೊಂಡಿದ್ದರು. ಕೋವಿಡ್ ಹಾಗೂ ಲಾಕ್‌ಡೌನ್ ಕಾರಣದಿಂದ ಕುಟುಂಬ ಆರ್ಥಿಕ ಸಂಕಷ್ಟವನ್ನೂ ಎದುರಿಸುತ್ತಿತ್ತು ಎಂದು ತಿಳಿದು ಬಂದಿದೆ.

ಮಹಾದೇವಪ್ಪ ಮಳೆ ಆಶ್ರಿತ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದರು. ನಂಜನಗೂಡು ತಾಲ್ಲೂಕಿನಲ್ಲಿರುವ ಹಿರಿಯ ಮಗಳೊಂದಿಗೆ ಮಂಗಳವಾರ ಮಾತನಾಡಿದ್ದರು.

ಆದರೆ ಬುಧವಾರ ಬೆಳಿಗ್ಗೆ ಗ್ರಾಮದವರೊಬ್ಬರು ಕೂಲಿ ಕೆಲಸಕ್ಕೆ ಕರೆಯಲು ಹೋದಾಗ ಬಾಗಿಲು ತೆರೆದಿರಲಿಲ್ಲ. ಮನೆಯಿಂದ ಯಾವುದೇ ಸದ್ದು ಕೇಳದೇ ಇದ್ದಾಗ ಮನೆಯ ಮೇಲೆ ಹತ್ತಿ ಹೆಂಚು ಸರಿಸಿ ನೋಡಿದಾಗ ನಾಲ್ವರೂ ನೇಣು ಹಾಕಿಕೊಂಡಿದ್ದು ಬೆಳಕಿಗೆ ಬಂದಿದೆ.

ಈ ಸಂಬಂಧ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Thanks for reading ಹಸಿವು ತಾಳದೇ ಚಾಮರಾಜನಗರದಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಹಸಿವು ತಾಳದೇ ಚಾಮರಾಜನಗರದಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

Post a Comment