ಫೇಸ್​ಬುಕ್​ನಲ್ಲಿ ಯುವತಿ ಹೆಸರಲ್ಲಿ ಅಶ್ಲೀಲ ಚಾಟಿಂಗ್: ಸಿಕ್ಕಿಬಿದ್ದ ಯುವಕನಿಗೆ ಮಹಿಳೆಯಿಂದ ಥಳಿತ​

June 21, 2021
Monday, June 21, 2021

 


ಕೊಡಗು: ಯುವತಿಯ ಹೆಸರಿನಲ್ಲಿ ಫೇಸ್​ಬುಕ್​ನಲ್ಲಿ ಮಹಿಳೆಯೊಂದಿಗೆ ಅಶ್ಲೀಲವಾಗಿ ಮೆಸೇಜ್​ ಮಾಡು ಯುವಕನನ್ನು ಉಪಾಯವಾಗಿ ಕರೆಸಿಕೊಂಡು ಥಳಿಸಿ, ಪೊಲೀಸರ ವಶಕ್ಕೆ ನೀಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಮಡಿಕೇರಿ ಸಮೀಪದ ಹಾಕತ್ತೂರಿನ ಅಶ್ರಪ್ ಎಂಬ ಯುವಕ ಕಳೆದ 15 ದಿನಗಳಿಂದ ಯುವತಿಯ ಹೆಸರಲ್ಲಿ ಮಹಿಳೆಯೊಂದಿಗೆ ಅಶ್ಲೀಲವಾಗಿ ಚಾಟಿಂಗ್​ ಮಾಡುತ್ತಿದ್ದ. ತನ್ನ ಹೆಸರು ಅರುಣಾ ಎಂದು ಹೇಳಿಕೊಂಡಿದ್ದ ಉಪಾಯವಾಗಿ ಆತನನ್ನು ಮಡಿಕೇರಿಗೆ ಕರೆಸಿಕೊಳ್ಳಲಾಗಿತ್ತು.

ಬಸ್​ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಆತನಿಗೆ ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ. ಸಿಕ್ಕಿಬಿದ್ದಾಗ ನನ್ನೊಟ್ಟಿಗೆ ಮತ್ತಿಬ್ಬರು ಇದ್ದಾರೆ ಎಂದು ಆರೋಪಿ ಮಾಹಿತಿ ನೀಡಿದ್ದು, ಇವನ ಹಿಂದೆ ದೊಡ್ಡ ಜಾಲ ಇರುವ ಶಂಕೆ ವ್ಯಕ್ತವಾಗಿದೆ.

ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿರುವ ಮಡಿಕೇರಿ ಪೊಲಿಸರು ಪ್ರಕರಣದಲ್ಲಿ ಇನ್ನು ಯಾರಾದರೂ ಭಾಗಿಯಾಗಿದ್ದಾರಾ ಎಂಬ ಆಯಾಮದಲ್ಲಿ ತನಿಖೆ ಕೈಗೊಂಡಿದ್ದಾರೆ.

ವಿಡಿಯೋ ನೋಡಿ:ಕ್ಲಿಕ್ ಮಾಡಿ

Thanks for reading ಫೇಸ್​ಬುಕ್​ನಲ್ಲಿ ಯುವತಿ ಹೆಸರಲ್ಲಿ ಅಶ್ಲೀಲ ಚಾಟಿಂಗ್: ಸಿಕ್ಕಿಬಿದ್ದ ಯುವಕನಿಗೆ ಮಹಿಳೆಯಿಂದ ಥಳಿತ​ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಫೇಸ್​ಬುಕ್​ನಲ್ಲಿ ಯುವತಿ ಹೆಸರಲ್ಲಿ ಅಶ್ಲೀಲ ಚಾಟಿಂಗ್: ಸಿಕ್ಕಿಬಿದ್ದ ಯುವಕನಿಗೆ ಮಹಿಳೆಯಿಂದ ಥಳಿತ​

Post a Comment