ಸದ್ಯಕ್ಕೆ ಶಾಲೆ ಆರಂಭ ಮಾಡುವುದು ಬೇಡ : ಪ್ರತಾಪ್ ಸಿಂಹ

June 22, 2021
Tuesday, June 22, 2021

 


ಸದ್ಯಕ್ಕೆ ಶಾಲೆ ಆರಂಭ ಮಾಡುವುದು ಬೇಡ : ಪ್ರತಾಪ್ ಸಿಂಹ

ಮಡಿಕೇರಿ ; ಕೊರೊನಾ ಸೋಂಕು ಹಿನ್ನೆಲ್ಲೆ ಸದ್ಯಕ್ಕೆ ರಾಜ್ಯದಲ್ಲಿ ಶಾಲೆ ಆರಂಭಿಸೋದು ಬೇಡ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ.

ಶಾಲೆ ಪ್ರಾರಂಭ ಸದ್ಯಕ್ಕಿಲ್ಲ, ಮೊದಲ ಹಂತದಲ್ಲಿ ಕಾಲೇಜು ಪ್ರಾರಂಭಕ್ಕೆ ಚಿಂತನೆ – ಸಿ ಎಂ ಯಡಿಯೂರಪ್ಪ

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಶಾಲಾ-ಕಾಲೇಜು ಆರಂಭಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, ಮೈಸೂರಿನಲ್ಲಿ ಈಗಾಗಲೇ 500 ಮಕ್ಕಳಿಗೆ ಕೋವಿಡ್ ಪಾಸಿಟಿವ್ ಆಗಿದೆ.

ಆದರೆ ಮಕ್ಕಳ ಪ್ರಾಣಕ್ಕೆ ತೊಂದರೆ ಅಗಿಲ್ಲ. ಕಳೆದ ತಿಂಗಳು ಮೂವರು ಮಕ್ಕಳು ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಹೊರತು ಕೋವಿಡ್ ನಿಂದ ಯಾವುದೇ ಸಮಸ್ಯೆ ಆಗಿಲ್ಲ.

ಆದರೂ 3ನೇ ಅಲೆ ದೃಷ್ಟಿಯಲ್ಲಿಟ್ಟುಕೊಂಡು ಸದ್ಯ ಶಾಲೆಗಳನ್ನು ಅರಂಭ ಮಾಡುವುದು ಬೇಡ ಎಂದಿದ್ದಾರೆ.

ಅಲ್ಲದೆ ಮೊದಲು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಿ ನಂತರ ಶಾಲೆಗಳನ್ನು ಅರಂಭ ಮಾಡುವುದು ಉತ್ತಮ. ಪೋಷಕರಿಂದ ಮಕ್ಕಳಿಗೂ ಸೋಂಕು ಹರಡುತ್ತಿದೆ.

ಹೀಗಿರುವಾಗ ವ್ಯಾಕ್ಸಿನ್ ಆಗದ ಹೊರತು ಶಾಲೆ ಆರಂಭ ಬೇಡ. 18 ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳಿಗೂ ಮೊದಲು ವ್ಯಾಕ್ಸಿನ್ ಆಗಲಿ.

ವ್ಯಾಕ್ಸಿನ್ ವಿತರಣೆ ಬಳಿಕ ಶಾಲೆ ಆರಂಭಿಸುವುದು ಒಳಿತು. ಒಂದು ವೇಳೆ ವ್ಯಾಕ್ಸಿನ್ ಕೊಡದೆ ಶಾಲೆ ಅರಂಭ ಮಾಡಿದರೆ ಸಮಸ್ಯೆಯಾಗಲಿದೆ ಎಂದು ಎಚ್ಚರಿಸಿದ್ದಾರೆ.

Thanks for reading ಸದ್ಯಕ್ಕೆ ಶಾಲೆ ಆರಂಭ ಮಾಡುವುದು ಬೇಡ : ಪ್ರತಾಪ್ ಸಿಂಹ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಸದ್ಯಕ್ಕೆ ಶಾಲೆ ಆರಂಭ ಮಾಡುವುದು ಬೇಡ : ಪ್ರತಾಪ್ ಸಿಂಹ

Post a Comment