ವಾಟ್ಸ್ಯಾಪ್‌ನಲ್ಲಿ ಮೆಸೇಜ್‌ ಸಿಕ್ರೇಟ್‌ ಕಾಪಾಡುವ ಹೊಸ ಫೀಚರ್‌ ಬಗ್ಗೆ ಇಲ್ಲಿದೆ ಮಾಹಿತಿ

ವಾಟ್ಸ್ಯಾಪ್‌ನಲ್ಲಿ ಮೆಸೇಜ್‌ ಸಿಕ್ರೇಟ್‌ ಕಾಪಾಡುವ ಹೊಸ ಫೀಚರ್‌ ಬಗ್ಗೆ ಇಲ್ಲಿದೆ ಮಾಹಿತಿ 

File Type: News                                                     

File Language :- Kannada

Which Department :- Education

State :- karnataka

Published Date :- 05/06/2021

File Format :-pdf

File Size :- 887kb

Number Of Pages :- 01

Scanned Copy :- Yes

Copy Text :- No

Enable :- Yes

Quality :- High

File Size Reduced :- No

Password Protected :- No

Passworod Encrypted:- No

Image File Available :- Yes

File Vieow Available :- Yes

Download Link Available :- Yes

Cost :- No

Personal Use Only



ವಾಟ್ಸ್ಯಾಪ್‌ನಲ್ಲಿ ಸೀಕ್ರೆಟ್‌ ಮೆಸೆಜ್‌ಗೆ ಸಹಾಯಕವಾಗುವಂತಹ ಒಂದು ಹೊಸ ಫೀಚರ್‌ನ್ನು ಅಳವಡಿಸಲಾಗಿದ್ದು , ಮೆಸೆಜ್‌ ಕಳುಹಿಸಿದ ಕೆಲವು ಸಮಯದಲ್ಲಿ ಅಳಿಸಿ ಹೋಗುವ ಸೌಲಭ್ಯವನ್ನು ನೀಡುತ್ತದೆ. ಈ ಮೂಲಕ ಸೀಕ್ರೆಟ್‌ ಚಾಟ್‌ ಮಾಡಲು ಸಹಾಯವಾಗಿದೆ. ಈ ಫೀಚರ್‌ ಹೇಗೆ ಕೆಲಸ ಮಾಡುತ್ತದೆ ಮತ್ತು ಇದನ್ನು ಬಳಸುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಈ ಮೊದಲು ವಾಟ್ಸ್ಯಾಪ್‌ನಲ್ಲಿ ಕಳುಹಿಸಿದ ಮೆಸೆಜ್‌ನ್ನು ಡಿಲಿಟ್‌ ಮಾಡುವ ಫೀಚರ್‌ನನ್ನು ಪರಿಚಯಿಸಲಾಗಿತ್ತು. ಇದರ ಜೊತೆಗೆ  ವ್ಯಕ್ತಿ ಅಥವಾ ಗ್ರೂಪ್‌ನಲ್ಲಿ ಕಳುಹಿಸಿದ ಮೆಸೆಜ್‌ನ್ನು 7ದಿನಗಳ ನಂತರವೂ ಡಿಲಿಟ್ ಮಾಡಬಹುದಾದ ಸೌಲಭ್ಯವನ್ನೂ ವಾಟ್ಸ್ಯಾಪ್‌ ಕಳೆದ ವರ್ಷದ ಕೊನೆಯಲ್ಲಿ ಪರಿಚಯಿಸಿತ್ತು ಆದರೆ ಈ ಬಗ್ಗೆ ಹಲವರಿಗೆ ಸೂಕ್ತ ಮಾಹಿತಿ ಇಲ್ಲ. ಸಾಮಾನ್ಯವಾಗಿ ಕಳುಹಿಸಿದ ಮೆಸೆಜ್‌ ಡಿಲಿಟ್‌ ಮಾಡಲು "ಡಿಲಿಟ್‌ ಫಾರ್‌ ಆಲ್‌" ಆಯ್ಕೆಯನ್ನ ಬಳಸುತ್ತಾರೆ, ಆದರೆ ಈ ಆಯ್ಕೆ ಮೆಸೆಜ್‌ ಕಳುಹಿಸಿದ ನಿಶ್ಚಿತ ಸಮಯದೊಳಗೆ ಮಾತ್ರ ಬಳಕೆಗೆ ಲಭ್ಯವಿರುತ್ತದೆ.

ನೀವು ಕಳುಹಿಸಿದ ಮೆಸೆಜ್‌ 7ದಿನಗಳ ನಂತರ ಅಳಿಸಿ ಹೋಗಬೇಕು ಎಂದು ಬಯಸುವುದಾದರೆ 'Disappearing messages" ಆಯ್ಕೆ ಸಹಾಯಕವಾಗಿದೆ.

ಈ ಆಯ್ಕೆಯನ್ನು ಪಡೆಯಲು ನಿಮ್ಮ ಫೋನ್‌ನಲ್ಲಿ ವಾಟ್ಸ್ಯಾಪ್‌ ಹೊಸ ವರ್ಷನ್‌ 2.21.206.15 ಇನ್‌ಸ್ಟಾಲ್‌ ಆಗಿರಬೇಕು. 'Disappearing messages" ಆಯ್ಕೆ ಸಕ್ರೀಯಗೊಳಿಸಲು, ನಿಮಗೆ ಬೇಕಾದ ವ್ಯಕ್ತಿ ಅಥವಾ ಗ್ರೂಪ್‌ ಚಾಟ್‌ ತೆರೆಯಿರಿ> ಅಲ್ಲಿ ಕಾಂಟ್ಯಾಕ್‌ ಮಾಹಿತಿ ತೆರೆಯಿರಿ>  'Disappearing messages" ಈ ಆಯ್ಕೆಯನ್ನು ಸಕ್ರೀಯಗೊಳಿಸಿ. ಈ ಮೂಲಕ ನೀವು ಕಳುಹಿಸಿದ ಮೆಸೆಜ್‌ನ್ನು 7ದಿನಗಳ ನಂತರ ಅಳಿಸಿಹಾಕಲಾಗುತ್ತದೆ. ಯಾವ ಸಂಪರ್ಕ ಸಂಖ್ಯೆಗೆ ಈ ಫೀಚರ್‌ ಬೇಕು ಎಂಬುದರ ಆಯ್ಕೆ ಬಳಕೆದಾರದ್ದಾಗಿರುತ್ತದೆ. ಆದರೆ ಗ್ರೂಪ್‌ ಚಾಟ್‌ನಲ್ಲಿ ಈ ಸೌಲಭ್ಯ ಗ್ರೂಪ್‌ ಅಡ್ಮಿನ್‌ಗೆ ಮಾತ್ರ ಲಭ್ಯವಿರುತ್ತದೆ.

ಇದನ್ನು ಹೊರತುಪಡಿಸಿ ವಾಟ್ಸ್ಯಾಪ್‌ ಫಿಂಗರ್‌ಪ್ರಿಂಟ್‌ ಲಾಕ್‌ ಸೌಲಭ್ಯ ಕೂಡ ನೀಡಿದ್ದು ಇದು ಕೂಡ ನಿಮ್ಮ ಮೆಸೆಜ್‌ ಸಿಕ್ರೇಟ್‌ ಕಾಯ್ದುಕೊಳ್ಳಲು ನೆರವಾಗಿದೆ.



Comments