ಕರೊನಾ ಲಸಿಕೆ ಬೇಡ ಎಂದು ಮೊಂಡಾಟ! ಹೊಲದಲ್ಲೇ ಜನ್ರಿಗೆ ವ್ಯಾಕ್ಸಿನ್ ಹಾಕಿ ನಿಟ್ಟುಸಿರುಬಿಟ್ಟ ಆರೋಗ್ಯ ಸಿಬ್ಬಂದಿ

June 17, 2021
Thursday, June 17, 2021

 


ಬಳ್ಳಾರಿ: ಕರೊನಾ ವಾಕ್ಸಿನ್​ ಹಾಕಿಸಿಕೊಳ್ಳಲು ನಿತ್ಯ ಸಾವಿರಾರು ಮಂದಿ ಆಸ್ಪತ್ರೆ ಬಾಗಿಲ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಲಸಿಕೆ ಸಿಕ್ಕರೆ ಸಾಕಪ್ಪಾ.. ಎಂದು ಲೆಕ್ಕವಿಲ್ಲದಷ್ಟು ಮಂದಿ ಮನಸಲ್ಲೇ ದೇವರಿಗೆ ಪ್ರಾರ್ಥಿಸುತ್ತಿದ್ದಾರೆ. ಆದರೆ ಈ ಊರಲ್ಲಿ ವ್ಯಾಕ್ಸಿನ್​ ಹಾಕಲು ಮನೆ ಬಾಗಿಲಿಗೆ ಆರೋಗ್ಯ ಸಿಬ್ಬಂದಿ ಬರುತ್ತಿದ್ದಂತೆ ಹಲವರು ನೆಪ ಹೇಳಿ ತಪ್ಪಿಸಿಕೊಂಡಿದ್ದಾರೆ. ಆದರೂ ಅವರನ್ನ ಹುಡುಕಿ ಅವರಿರುವಲ್ಲೇ ಬೇಡ ಎಂದರೂ ಲಸಿಕೆ ಹಾಕಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಅರೆ, ಇದ್ಹೇನಿದು ಕರೊನಾ ಸಂಕಷ್ಟಕಾಲದಲ್ಲಿ ಲಕ್ಷಾಂತರ ಮಂದಿ ಲಸಿಕೆಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಅಂತಹದ್ದರಲ್ಲಿ ಆರೋಗ್ಯ ಸಿಬ್ಬಂದಿಯೇ ಬಂದು ಲಸಿಕೆ ಹಾಕ್ತಾರಾ? ಎಂಬ ಆಶ್ಚರ್ಯ ಮನದಲ್ಲಿ ಮೂಡುವುದು ಸಹಜ. ಹೌದು, ಇದು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದರೋಜಿ ಹಾಗೂ ಕರೆಕುಪ್ಪ ಗ್ರಾಮದ ನೈಜನೋಟ.

ಈ ಗ್ರಾಮದ ಬಹುತೇಕರು ವ್ಯಾಕ್ಸಿನ್​ ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಆರೋಗ್ಯ ಸಿಬ್ಬಂದಿಯೇ ವ್ಯಾಕ್ಸಿನ್ ಹಾಕಲು ಮನೆ ಬಾಗಿಲಿಗೆ ಹೋದರೂ ತಪ್ಪಿಸಿಕೊಂಡು ಹೊಲದತ್ತ ಹೋಗಿಬಿಡುತ್ತಿದ್ದರು.

ಕೊನೆಗೆ ಆರೊಗ್ಯ ಸಿಬ್ಬಂದಿ ಹೊಲಗಳಿಗೇ ಹೋಗಿ ಆ ಜನರನ್ನ ಹುಡುಕಿ ಅಲ್ಲೇ ವ್ಯಾಕ್ಸಿನ್ ಹಾಕಿದ್ದಾರೆ. ಕೆಲವರು ಲಸಿಕೆ ಬೇಡ ಎಂದು ಹಠ ಮಾಡಿದ್ದು, ಅವರ ಮನವೊಲಿಸಿ ವ್ಯಾಕ್ಸಿನ್ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

Thanks for reading ಕರೊನಾ ಲಸಿಕೆ ಬೇಡ ಎಂದು ಮೊಂಡಾಟ! ಹೊಲದಲ್ಲೇ ಜನ್ರಿಗೆ ವ್ಯಾಕ್ಸಿನ್ ಹಾಕಿ ನಿಟ್ಟುಸಿರುಬಿಟ್ಟ ಆರೋಗ್ಯ ಸಿಬ್ಬಂದಿ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಕರೊನಾ ಲಸಿಕೆ ಬೇಡ ಎಂದು ಮೊಂಡಾಟ! ಹೊಲದಲ್ಲೇ ಜನ್ರಿಗೆ ವ್ಯಾಕ್ಸಿನ್ ಹಾಕಿ ನಿಟ್ಟುಸಿರುಬಿಟ್ಟ ಆರೋಗ್ಯ ಸಿಬ್ಬಂದಿ

Post a Comment