ಮನುಷ್ಯರಿಗೆ ಡೇಂಜರ್ ಮತ್ತಷ್ಟು ಡೇಂಜರ್; ಈ ಬಾರಿ ಬೌ ಬೌ ಕೊರೊನಾ ವೈರಸ್

June 02, 2021
Wednesday, June 2, 2021

ಮನುಷ್ಯರಿಗೆ ಡೇಂಜರ್ ಮತ್ತಷ್ಟು ಡೇಂಜರ್; ಈ ಬಾರಿ ಬೌ ಬೌ ಕೊರೊನಾ ವೈರಸ್

File Type: News                                                     

File Language :- Kannada

Which Department :- Education

State :- karnataka

Published Date :- 02/06/2021

File Format :-pdf

File Size :- 887kb

Number Of Pages :- 01

Scanned Copy :- Yes

Copy Text :- No

Enable :- Yes

Quality :- High

File Size Reduced :- No

Password Protected :- No

Passworod Encrypted:- No

Image File Available :- Yes

File Vieow Available :- Yes

Download Link Available :- Yes

Cost :- No

Personal Use Only



ವಿಶ್ವದಾದ್ಯಂತ ಕೋವಿಡ್​-19 ಸಾಂಕ್ರಾಮಿಕ ಜನರ ಜೀವ ಹಿಂಡುತ್ತಿದೆ. ಇದರ ಬೆನ್ನಲ್ಲೇ ಕೊರೊನಾ ರೂಪಾಂತರಿ ತಳಿಗಳಿಂದ ಎರಡು, ಮೂರನೇ ಸೋಂಕಿನ ಅಲೆ ವ್ಯಾಪಿಸಿ ಜಗತ್ತನ್ನ ಮತ್ತಷ್ಟು ತಲ್ಲಣಗೊಳಿಸಿತು. ನಂತರ ಬ್ಲ್ಯಾಕ್​ ಫಂಗಸ್​, ವೈಟ್ ಫಂಗಸ್​, ಯೆಲ್ಲೋ ಫಂಗಸ್​ ಆತಂಕ. ಇದೀಗ ಮಲೇಷ್ಯಾದಲ್ಲಿ ಹೊಸ ಬಗೆಯ ಕೊರೊನಾವೈರಸ್​ ಕಾಣಿಸಿಕೊಂಡಿದೆ ಅಂತ ವರದಿಯಾಗಿದೆ.

ವಿಜ್ಞಾನಿಗಳು ಪತ್ತೆಹಚ್ಚಿರೋ ಈ ಹೊಸ ಕೊರೊನಾವೈರಸ್​​ ನಾಯಿಗಳಲ್ಲಿ ಹುಟ್ಟಿಕೊಂಡಿದ್ದು, ಹಲವಾರು ವರ್ಷಗಳ ಹಿಂದೆ ಮಲೇಷ್ಯಾದಲ್ಲಿ ಬೆರಳೆಣಿಕೆಯಷ್ಟು ಜನರಿಗೆ ಈ ಸೋಂಕು ತಗುಲಿರುವಂತೆ ಕಾಣುತ್ತಿದೆ ಎನ್ನಲಾಗಿದೆ. ಈ ವಿಚಾರ ದೃಢಪಟ್ಟರೆ, ಸಾರ್ಸ್​ ಹಾಗೂ ಕೋವಿಡ್​-19 ಬೆನ್ನಲ್ಲೇ ಪ್ರಾಣಿಗಳಿಂದ ಮಾನವನಿಗೆ ಹರಡಿದ ಎಂಟನೇ ವೈರಸ್​ ಇದಾಗಲಿದೆ. ಅದ್ರಲ್ಲೂ ನಾಯಿಯಿಂದ ಮನುಷ್ಯನಿಗೆ ಹರಡಿದ ಮೊದಲ ವೈರಸ್​ ಆಗಲಿದೆ.

ಹೊಸ ಸಾಧನದ ಮೂಲಕ ನಾಯಿಗಳ ಕೊರೊನಾವೈರಸ್​ ಪತ್ತೆ
ಕೊರೊನಾ ಸಾಂಕ್ರಾಮಿಕ ಸ್ಫೋಟಗೊಂಡು ವಿಶ್ವದಾದ್ಯಂತ ಹಬ್ಬಿದ ಬೆನ್ನಲ್ಲೇ ನಾಯಿಗಳ ಕೊರೊನಾವೈರಸ್​​ ವಿಚಾರ ಬೆಳಕಿಗೆ ಬಂದಿದೆ. ಈವರೆಗೆ ಅಸ್ತಿತ್ವದಲ್ಲಿದ್ರೂ ಪತ್ತೆಯಾಗದೇ ಉಳಿದಿರೋ ಯಾವುದಾದ್ರೂ ವೈರಸ್​ ಇದೆಯಾ ಎಂಬ ಬಗ್ಗೆ ಸಂಶೋಧಕರು ಕುತೂಹಲ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಸಾಂಕ್ರಾಮಿಕರೋಗ ತಜ್ಞರಾದ ಡಾ. ಗ್ರೆಗೋರಿ ಗ್ರೇ ಎಂಬವರು ತಮ್ಮ ಲ್ಯಾಬ್​ನಲ್ಲಿ ಪದವಿ ವಿದ್ಯಾರ್ಥಿಯೊಬ್ಬರಿಗೆ, ಕೊರೊನಾ ಪರೀಕ್ಷೆಗಿಂತ ಹೆಚ್ಚು ಶಕ್ತಿಯುತವಾದ ಪರೀಕ್ಷಾ ಸಾಧನವನ್ನು ರಚಿಸುವ ಕೆಲಸ ನೀಡಿದ್ರು. ಅಂದ್ಹಾಗೆ ಗ್ರೆಗೋರಿ, ರೆಸ್ಪಿರೇಷರಿ ವೈರಸ್‌ಗಳ ಸಂಬಂಧ 20 ವರ್ಷಗಳ ಅನುಭವ ಹೊಂದಿರುವ ತಜ್ಞ.

ಅದರಂತೆ ಇತರೆ ಕೊರೊನಾವೈರಸ್​​ಗಳ ಬಗ್ಗೆ ಸಾಕ್ಷಿ ಹುಡುಕಬಲ್ಲ ಸಾಧನವೊಂದನ್ನ ಸಿದ್ಧಪಡಿಸಲಾಯ್ತು. ಕಳೆದ ವರ್ಷ ಒಂದು ಬ್ಯಾಚ್ ಮಾದರಿಗಳನ್ನು ಪರೀಕ್ಷಿಸುವಾಗ ನಾಯಿಗಳಿಗೆ ಸಂಭಾವ್ಯ ಲಿಂಕ್ ಹೊಂದಿರಬಹುದಾದ ಈ ಹೊಸ ಕೊರೊನಾವೈರಸ್​ ಬೆಳಕಿಗೆ ಬಂದಿದೆಯಂತೆ.

2017 ಮತ್ತು 2018ರಲ್ಲಿ ಮಲೇಷ್ಯಾದ ಸಾರವೆಕ್ ಆಸ್ಪತ್ರೆಯಲ್ಲಿ, ಕೆಲ ರೋಗಿಗಳು ನ್ಯುಮೋನಿಯಾಕ್ಕೆ ಹೋಲುವ ರೋಗಲಕ್ಷಣಗಳನ್ನು ಹೊಂದಿದ್ದರು. ಈ ರೋಗಿಗಳಲ್ಲಿ ಬಹುತೇಕರು ಮಕ್ಕಳಾಗಿದ್ದು, ಅವರ ಸ್ಯಾಂಪಲ್ಸ್​ ಸಂಗ್ರಹಿಸಿ ಹೊಸ ಪರೀಕ್ಷಾ ಸಾಧನ ಬಳಸಿಕೊಂಡು ಟೆಸ್ಟ್​ ಮಾಡಲಾಯ್ತು. ಈ ವೇಳೆ 301 ಮಾದರಿಗಳ ಪೈಕಿ ಎಂಟರಲ್ಲಿ, ರೋಗಿಯ ಅಪ್ಪರ್​ ರೆಸ್ಪಿರೇಟರಿ ಟ್ರ್ಯಾಕ್ಟ್​​​​​, ನಾಯಿಯ ಕೊರೊನಾವೈರಸ್​ನಿಂದ ಸೋಂಕಿಗೀಡಾಗಿದ್ದನ್ನ ತಿಳಿಸಿತ್ತಂತೆ.

ನಾಯಿಯ ಕೊರೊನಾ ವೈರಸ್​​ ಬಗ್ಗೆ ಖಚಿತಪಡಿಸಿದ ಅಮೆರಿಕಾದ ತಜ್ಞೆ
ತಮ್ಮ ಈ ಪತ್ತೆ ಕಾರ್ಯದಲ್ಲಿ ಯಾವುದಾದ್ರೂ ಸಂಭಾವ್ಯ ಸಮಸ್ಯೆ ಇರಬಹುದಾ ಅನ್ನೋದನ್ನ ಖಚಿತಪಡಿಸಿಕೊಳ್ಳಲು ತಂಡವು ಮುಂದಾಯ್ತು. ಈ ಹಿನ್ನೆಲೆ ತಮ್ಮ ಟೆಸ್ಟ್​ ವರದಿಯನ್ನ ಪರಿಶೀಲಿಸಲು ಓಹಾಯೋ ಸ್ಟೇಟ್ ಯೂನಿವರ್ಸಿಟಿಯಲ್ಲಿ ಪ್ರಾಣಿಗಳ ಕೊರೊನಾವೈರಸ್‌ಗಳ ವಿಶ್ವತ ಜ್ಞರಾದ ವೈರಾಲಜಿಸ್ಟ್ ಅನಸ್ತಾಸಿಯಾ ವ್ಲಾಸೊವಾ ಅವರಿಗೆ ಕಳಿಸಿತ್ತು. ನಾಯಿಯ ಕೊರೊನಾವೈರಸ್‌ಗಳು ಜನರಿಗೆ ಹರಡುತ್ತವೆ ಎಂದು ಭಾವಿಸಿರಲಿಲ್ಲ. ಇದು ಹಿಂದೆಂದೂ ವರದಿಯಾಗಿಲ್ಲ ಎಂದು ಅನಸ್ತಾಸಿಯಾ ಹೇಳಿದ್ದರು. ಆದ್ರೆ ಜೀನೋಮ್​​ ಡೀಕೋಡಿಂಗ್​​ ಮಾಡಿದಾಗ, ಬಹುತೇಕ ಜೀನೋಮ್ ನಾಯಿಯ ಕೊರೊನಾವೈರಸ್​ ಆಗಿತ್ತು ಎಂದು ಅವರು ಹೇಳಿದ್ದು, ಗ್ರೆಗೋರಿ ಅವರು ಪತ್ತೆಹಚ್ಚಿದ್ದ ಅಂಶವನ್ನ ಆಕೆ ಒಪ್ಪಿದ್ದಾರೆ ಎಂದು ವರದಿಯಾಗಿದೆ.

ಈ ಸೋಂಕಿಗೀಡಾಗಿದ್ದವರೆಲ್ಲಾ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. ಪ್ರಸ್ತುತ ಸಂದರ್ಭದಲ್ಲಿ ನಾಯಿಯ ಕೊರೊನಾವೈರಸ್,​ ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಹುದು ಎಂಬುದನ್ನ ಸೂಚಿಸುವ ಯಾವುದೇ ಪುರಾವೆ ಇಲ್ಲ ಎನ್ನಲಾಗಿದೆ. ಸದ್ಯಕ್ಕೆ ಈ ವೈರಸ್‌ನಿಂದ ಮತ್ತೊಂದು ಸಾಂಕ್ರಾಮಿಕ ರೋಗವನ್ನು ನಿರೀಕ್ಷಿಸಬಹುದು ಅನ್ನೋದಕ್ಕೆ ಯಾವುದೇ ಕಾರಣಗಳು ಕಾಣ್ತಿಲ್ಲ. ಆದರೆ ಇದರಿಂದ ಮುಂದೆಂದೂ ತೊಂದರೆ ಆಗೋದೇ ಇಲ್ಲ ಅಂತ ನಾನು ಹೇಳಲಾರೆ ಎಂದು ಅನಸ್ತಾಸಿಯಾ ಅಭಿಪ್ರಾಯಪಟ್ಟಿದ್ದಾರೆ.

ಈ ವೈರಸ್​​ ಎಷ್ಟು ಕಾಮನ್​ ಆಗಿದೆ? ಇದು ನಾಯಿಗಳಿಂದ ಮನುಷ್ಯರಿಗೆ ಅಥವಾ ಮನುಷ್ಯರಿಂದ ಮನುಷ್ಯರಿಗೆ ಪರಿಣಾಮಕಾರಿಯಾಗಿ ಹರಡಬಹುದಾ ಅನ್ನೋದು ಈಗ ಯಾರಿಗೂ ಗೊತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾದುದು ಏನಂದ್ರೆ ಈ ಕೊರೊನಾವೈರಸ್‌ಗಳು ನಮಗೆ ತಿಳಿದಿರುವುದಕ್ಕಿಂತ ಹೆಚ್ಚಾಗಿ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತವೆ. ಹೆಚ್ಚಿನ ಆಸ್ಪತ್ರೆಗಳಲ್ಲಿ ರೋಗನಿರ್ಣಯ ಪರೀಕ್ಷೆಗಳು, ಈಗಾಗಲೇ ನಮಗೆ ತಿಳಿದಿರುವ ಮಾನವ ಕೊರೊನಾವೈರಸ್​​ಗಳನ್ನ ಮಾತ್ರ ಪತ್ತೆಹಚ್ಚುವುದರಿಂದ ನಾವು ಹೊಸ ವೈರಸ್​​ಗಳ ಬಗ್ಗೆ ತಿಳಿಯದೇ ಹೋಗುತ್ತಿದ್ದೇವೆ ಎಂದು ಗ್ರೆಗೋರಿ ಹೇಳಿದ್ದಾರೆ.

ಅಂದ್ಹಾಗೆ ಗ್ರೆಗೋರಿ ಅವರ ಈ ಸಂಶೋಧನೆಯನ್ನ ಕ್ಲೀನಿಕಲ್ ಇನ್​ಫೆಕ್ಷಿಯಸ್​ ಡಿಸೀಸಸ್​ ಅನ್ನೋ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.



Thanks for reading ಮನುಷ್ಯರಿಗೆ ಡೇಂಜರ್ ಮತ್ತಷ್ಟು ಡೇಂಜರ್; ಈ ಬಾರಿ ಬೌ ಬೌ ಕೊರೊನಾ ವೈರಸ್ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಮನುಷ್ಯರಿಗೆ ಡೇಂಜರ್ ಮತ್ತಷ್ಟು ಡೇಂಜರ್; ಈ ಬಾರಿ ಬೌ ಬೌ ಕೊರೊನಾ ವೈರಸ್

Post a Comment