ನರ್ಸ್ ಎಡವಟ್ಟು : ಐದು ನಿಮಿಷಗಳಲ್ಲಿ ಎರಡು ಲಸಿಕೆ ಡೋಸ್ ಗಳನ್ನು ಪಡೆದ ಮಹಿಳೆ

June 19, 2021
Saturday, June 19, 2021

 


ಪಾಟ್ನಾ: ವಿಲಕ್ಷಣ ಘಟನೆಯೊಂದರಲ್ಲಿ ಬಿಹಾರ ಗ್ರಾಮದ ಮಹಿಳೆಯೊಬ್ಬರಿಗೆ ಐದು ನಿಮಿಷಗಳ ಅಂತರದಲ್ಲಿ ಕೋವಿಡ್ -19 ಲಸಿಕೆಯ ಎರಡು ಡೋಸ್ ಗಳನ್ನು ಚುಚ್ಚಲಾಗಿದೆ. ಆಘಾತಕಾರಿ ಸಂಗತಿಯೆಂದರೆ ಎರಡೂ ಡೋಸ್ ಗಳು ಬೇರೆ ಬೇರೆ ಕಂಪೆನಿಗೆ ಸೇರಿದ್ದವು. ಮೊದಲ ಡೋಸ್ ಕೋವಿಶೀಲ್ಡ್ ಲಸಿಕೆ ಆಗಿದ್ದರೆ, ಎರಡನೇ ಡೋಸ್ ಕೋವಾಕ್ಸಿನ್ ಲಸಿಕೆಯಾಗಿತ್ತು.

ರೈತ ಕುಟುಂಬದಿಂದ ಬಂದಿರುವ 60ರ ವಯಸ್ಸಿನ ಅನಕ್ಷರಸ್ಥ ಮಹಿಳೆ ನರ್ಸ್ ಗಳ ಎಡವಟ್ಟಿಗೆ ಬಲಿಪಶುವಾಗಿದ್ದಾರೆ.

ಪಾಟ್ನಾ ಗ್ರಾಮೀಣ ಪ್ರದೇಶದ ಸುನೀಲಾ ದೇವಿ ತನ್ನ ಮನೆಗೆ ಹೋಗಿ ಪುತ್ರರಿಗೆ ತಿಳಿಸಿದಾಗ ವಿಷಯ ಹೊರಗೆ ಬಂದಿತು. ಆಕೆಯ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಗಲಾಟೆ ಮಾಡಿದರು. ಘಟನೆಯ ಕುರಿತು ಪ್ರತಿಕ್ರಿಯಿಸಲು ರಾಜ್ಯ ಅಥವಾ ಪ್ರದೇಶದ ಆರೋಗ್ಯ ಇಲಾಖೆಯ ಅಧಿಕಾರಿಗಳು ಮುಂದೆ ಬರಲಿಲ್ಲ.

ಲಸಿಕೆ ನೀಡುವ ಜವಾಬ್ದಾರಿವಹಿಸಿಕೊಂಡಿದ್ದ ಇಬ್ಬರು ದಾದಿಯರ ವಿರುದ್ಧ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಜೂನ್ 16 ರಂದು ಈ ಘಟನೆ ನಡೆದಿದೆ. ಜೂನ್ 19 ರವರೆಗೆ ಸುನಿಲಾ ಅವರನ್ನು ವೀಕ್ಷಣೆಗೆ ಒಳಪಡಿಸಲು ಬ್ಲಾಕ್‌ನ ವೈದ್ಯರು ನಿರ್ಧರಿಸಿದ್ದಾರೆ. ಲಸಿಕೆಗಳನ್ನು ನೀಡಿದ ನಂತರ ಮಹಿಳೆಗೆ ನಿಶ್ಶಕ್ತಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಬೆಲಾರ್ಚಕ್ ಮಿಡಲ್ ಸ್ಕೂಲ್ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಮೊದಲ ಡೋಸ್ ತೆಗೆದುಕೊಂಡ ನಂತರ ಮಹಿಳೆಯನ್ನು ಕೋಣೆಯಲ್ಲಿ ಕಾಯುವಂತೆ ಕೇಳಲಾಯಿತು. ರೈತ ರವೀಂದ್ರ ಮಹತೋ ಅವರ ಪತ್ನಿ ಸುನಿಲಾ ಸ್ವಲ್ಪ ಸಮಯ ಕಾದರು ಹಾಗೂ ನಂತರ ಕೋವಾಕ್ಸಿನ್ ಲಸಿಕೆ ನೀಡುವ ಮತ್ತೊಂದು ಸರತಿ ಸಾಲಿನಲ್ಲಿ ಸೇರಿಕೊಂಡರು.

'ನನಗೆ ಎಲ್ಲಿಗೆ ಹೋಗಬೇಕೆಂದು ಗೊತ್ತಾಗಲಿಲ್ಲ. ಯಾರೋ ಬಂದು ಮತ್ತೊಂದು ಡೋಸ್ ನೀಡಿದರು. ಐದು ನಿಮಿಷಗಳ ಹಿಂದೆ ಇನ್ನೊಬ್ಬ ನರ್ಸ್ ನನಗೆ ಇಂಜೆಕ್ಷನ್ ನೀಡಿದ್ದಾರೆ ಎಂದು ನಾನು ಹೇಳಿದಾಗ, ಈ ನರ್ಸ್ ಕೇಳಲಿಲ್ಲ, 'ಎಂದು ಸುಮಿಲಾ ಹೇಳಿದರು. ಎರಡೂ ಡೋಸ್ ಗಳನ್ನು ಒಂದೇ ತೋಳಿಗೆ ನೀಡಲಾಗಿತ್ತು.

Thanks for reading ನರ್ಸ್ ಎಡವಟ್ಟು : ಐದು ನಿಮಿಷಗಳಲ್ಲಿ ಎರಡು ಲಸಿಕೆ ಡೋಸ್ ಗಳನ್ನು ಪಡೆದ ಮಹಿಳೆ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ನರ್ಸ್ ಎಡವಟ್ಟು : ಐದು ನಿಮಿಷಗಳಲ್ಲಿ ಎರಡು ಲಸಿಕೆ ಡೋಸ್ ಗಳನ್ನು ಪಡೆದ ಮಹಿಳೆ

Post a Comment