ಲಾರಿ-ಓಮ್ನಿ ನಡುವೆ ಭೀಕರ ಅಪಘಾತ : ಇಬ್ಬರು ಅಡಿಕೆ ವ್ಯಾಪಾರಿಗಳು ಸಾವು

June 13, 2021
Sunday, June 13, 2021

 


ಚನ್ನಗಿರಿ: ಲಾರಿ-ಓಮ್ನಿ ಡಿಕ್ಕಿಯಾದ ಪರಿಣಾಮ ಓಮ್ನಿಯಲ್ಲಿದ ಇಬ್ಬರು ಸಾವನ್ನಪ್ಪಿ ಘಟನೆ ತಾಲೂಕಿನ ಬೀರೂರು ಸಮ್ಮಸಗಿ ರಾಜ್ಯ ಹೆದ್ದಾರಿ ಹೊನ್ನೆಭಾಗಿ ಗ್ರಾಮದ ಸಮೀಪದಲ್ಲಿ ನಡೆದಿದೆ.

ತಾಲೂಕಿನ ಅಗರಬನ್ನಿಹಟ್ಟಿ ಗ್ರಾಮದ ಯೂಸುಫ್ (45), ಹಾಗೂ ಚನ್ನಗಿರಿ ಪಟ್ಟಣದ ಜಬ್ಬಾರ್ (47) ಮೃತ ದುರ್ದೈವಿ ಗಳು..

ಅಡಿಕೆ ವ್ಯಾಪಾರಿಗಳಾಗಿದ್ದ ಇವರು ಭಾನುವಾರ ಮಧ್ಯಾಹ್ನವೇಳೆ ಚನ್ನಗಿರಿಯಿಂದ ಬೀರೂರು ಸಮ್ಮಸಗಿ ರಾಜ್ಯ ಹೆದ್ದಾರಿ ಮೂಲಕ ಅಜ್ಜಂಪುರಕ್ಕೆ ಹೋಗುವ ಮಾರ್ಗದಲ್ಲಿ ಹೊನ್ನೆಭಾಗಿ ಸಮೀಪದಲ್ಲಿ ಓಮ್ನಿಯು ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವ ವೇಳೆ ಎದುರಿಗೆ ಬಂದ ಲಾರಿಗೆ ರಭಸವಾಗಿ ಡಿಕ್ಕಿಯಾದ ಪರಿಣಾಮ ಓಮ್ನಿ ಯಲ್ಲಿದ ಓರ್ವ ಸ್ಥಳದಲ್ಲಿ ಮೃತಪಟ್ಟರೆ ಇನ್ನೋರ್ವ ಶಿವಮೊಗ್ಗದ ಮೆಗ್ಗನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ಧಾನೆ.

ಘಟನೆ ಕುರಿತು ಚನ್ನಗಿರಿ ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Thanks for reading ಲಾರಿ-ಓಮ್ನಿ ನಡುವೆ ಭೀಕರ ಅಪಘಾತ : ಇಬ್ಬರು ಅಡಿಕೆ ವ್ಯಾಪಾರಿಗಳು ಸಾವು | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಲಾರಿ-ಓಮ್ನಿ ನಡುವೆ ಭೀಕರ ಅಪಘಾತ : ಇಬ್ಬರು ಅಡಿಕೆ ವ್ಯಾಪಾರಿಗಳು ಸಾವು

Post a Comment