ಬೈಕ್​ ಮೇಲಿದ್ದ ಹೆಲ್ಮೆಟ್​ ನುಂಗಿದ ಆನೆ! ಪಾಪ ಹಸಿವಾಗಿತ್ತೇನೋ. ಸಖತ್​ ವೈರಲ್​ ಆಗ್ತಿದೆ ಈ ವಿಡಿಯೋ

June 10, 2021
Thursday, June 10, 2021

 ಅಸ್ಸಾಂ: ಇಲ್ಲೊಂದು ಆನೆ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್​ ಬಳಿ ಬಂದು ಅಲ್ಲಿದ್ದ ಹೆಲ್ಮೆಟ್​ ಅನ್ನು ನುಂಗಿ ತನಗೇನೂ ಗೊತ್ತಿಲ್ಲವೆಂಬಂತೆ ಹೋಗಿದ್ದು, ಈ ವಿಡಿಯೋ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.


ಅಸ್ಸಾಂನ ಗುವಾಹಟಿಯ ಸತ್‌ಗಾಂವ್ ಸೇನಾ ಶಿಬಿರದ ಬಳಿ ಈ ಘಟನೆ ಸಂಭವಿಸಿದೆ. ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಬೈಕ್‌ ನಿಲ್ಲಿಸಿ ಬೈಕ್​ನ ಮಿರರ್​ ಬಳಿ ಹೆಲ್ಮೆಟ್​ ಇಟ್ಟಿದ್ದರು. ಆ ಮಾರ್ಗವಾಗಿ ಸಂಚರಿಸುತ್ತಾ ಬಂದ ಆನೆಯೊಂದು ಬೈಕ್​ ಬಳಿ ಬಂದು ಅಲ್ಲಿದ್ದ ಹೆಲ್ಮೆಟ್​ ಅನ್ನು ಸೊಂಡಿಲಿಂದ ತೆಗೆದುಕೊಂಡು ನುಂಗಿಬಿಟ್ಟಿದೆ. ಆ ಮೇಲೆ ತನಗೇನೂ ಗೊತ್ತಿಲ್ಲ ಎಂಬಂತೆ ಮುಂದೆ ಸಾಗಿದೆ.

ಬೈಕ್​ ಸಮೀಪದಲ್ಲೇ ಇದ್ದವರು ಆನೆ ಹೆಲ್ಮೆಟ್​ ಅನ್ನು ಕಾಲಿನಡಿ ಹಾಕಿ ತುಳಿಯುತ್ತೆ ಎಂದುಕೊಂಡಿದ್ದರಂತೆ.

ಆದ್ರೆ ಅಲ್ಲಿ ಆಗಿದ್ದೇ ಬೇರೆ. ಸದ್ಯ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, 'ಪಾಪ ಆನೆಗೆ ಹಸಿವಾಗಿತ್ತೇನೋ..' ಎಂದು ನೆಟ್ಟಿಗರು ಕಮೆಂಟ್​ ಕೊಡುತ್ತಿದ್ದಾರೆ.

ವಿಡಿಯೋ ವೀಕ್ಷಿಸಿ:- ಕ್ಲಿಕ್ ಮಾಡಿ

Thanks for reading ಬೈಕ್​ ಮೇಲಿದ್ದ ಹೆಲ್ಮೆಟ್​ ನುಂಗಿದ ಆನೆ! ಪಾಪ ಹಸಿವಾಗಿತ್ತೇನೋ. ಸಖತ್​ ವೈರಲ್​ ಆಗ್ತಿದೆ ಈ ವಿಡಿಯೋ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಬೈಕ್​ ಮೇಲಿದ್ದ ಹೆಲ್ಮೆಟ್​ ನುಂಗಿದ ಆನೆ! ಪಾಪ ಹಸಿವಾಗಿತ್ತೇನೋ. ಸಖತ್​ ವೈರಲ್​ ಆಗ್ತಿದೆ ಈ ವಿಡಿಯೋ

Post a Comment