ಬಾಳೆದಿಂಡಿನ ಸೇವನೆಯಿಂದ ಹೊಟ್ಟೆಯ ಕಲ್ಮಶ ದೂರ

June 09, 2021
Wednesday, June 9, 2021

 


ಬಾಳೆಕಾಯಿ, ಹಣ್ಣು, ಹೂವಿನಷ್ಟೇ ಪ್ರಯೋಜನ ಕೊಡುವ ಇನ್ನೊಂದು ವಸ್ತು ಎಂದರೆ ಬಾಳೆದಿಂಡು. ಗೊನೆ ಕೊಯ್ದ ಬಳಿಕ ಬಾಳೆದಿಂಡನ್ನು ಕತ್ತರಿಸಿ ಎಸೆಯುವ ಬದಲು ಅದನ್ನು ಸೀಳಿ ಒಳಭಾಗದ ಎಳೆಯ ದಿಂಡನ್ನು ತೆಗೆದಿಡಿ. ಇದರಿಂದ ಪಲ್ಯ, ಜ್ಯೂಸ್, ಬಜ್ಜಿ ಮತ್ತಿತರ ತಿನಿಸುಗಳನ್ನು ತಯಾರಿಸಬಹುದು.

ಇದರ ಸೇವನೆಯಿಂದ ದೇಹಕ್ಕೆ ಹಲವು ಪ್ರಯೋಜನಗಳಿವೆ. ಬಾಳೆದಿಂಡಿನ ಪಲ್ಯ ಸೇವನೆ ಮಾಡುವುದರಿಂದ ಗೊತ್ತಿಲ್ಲದೆ ನಮ್ಮ ಹೊಟ್ಟೆಯೊಳಗೆ ಸೇರಿದ ಕೂದಲು ಮೊದಲಾದ ಕಸಗಳು ಹೊರಹೋಗುತ್ತವೆ. ಹಾಗಾಗಿ ದೇಹದ ಕಲ್ಮಶ ಹೊರಹಾಕಲು ಇದನ್ನು ಸೇವಿಸುವುದು ಕಡ್ಡಾಯ.

ಮಲಬದ್ಧತೆ ಸಮಸ್ಯೆಯನ್ನು ಇದು ದೂರ ಮಾಡುತ್ತದೆ. ನಾರಿನಂಶ ಹೇರಳವಾಗಿರುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ಹೊಟ್ಟೆ ಉಬ್ಬರಿಸುವುದು, ಗ್ಯಾಸ್ಟ್ರಿಕ್ ನಂಥ ಸಮಸ್ಯೆಗಳು ದೂರವಾಗುತ್ತವೆ.

ಬಾಳೆದಿಂಡಿನಿಂದ ತಯಾರಿಸಿದ ಜ್ಯೂಸ್ ಅಥವಾ ಬಾಳೆದಿಂಡಿನ ರಸ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಕೂಡಾ ಕರಗುತ್ತದೆ. ಮೂತ್ರಪಿಂಡದಲ್ಲಾಗುವ ಸಮಸ್ಯೆಗಳಿಗೆ ಬಾಳೆ ದಿಂಡಿನಲ್ಲಿರುವ ಪೊಟ್ಯಾಶಿಯಂ ಅತ್ಯುತ್ತಮ ಔಷಧ. ರಕ್ತಹೀನತೆಯನ್ನು ದೂರಮಾಡಿ, ಕಬ್ಬಿಣಾಂಶವನ್ನು ಹೆಚ್ಚಿಸುತ್ತದೆ.

Thanks for reading ಬಾಳೆದಿಂಡಿನ ಸೇವನೆಯಿಂದ ಹೊಟ್ಟೆಯ ಕಲ್ಮಶ ದೂರ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಬಾಳೆದಿಂಡಿನ ಸೇವನೆಯಿಂದ ಹೊಟ್ಟೆಯ ಕಲ್ಮಶ ದೂರ

Post a Comment