ಮನೆಯಲ್ಲಿ ಆಟವಾಡುವಾಗ ಇಲಿ ಪಾಷಾಣ ತಿಂದು ಹೆಣ್ಣು ಮಗು ದುರಂತ ಸಾವು

June 20, 2021
Sunday, June 20, 2021

 


ಮಂಗಳೂರು: ಮಕ್ಕಳಿರುವ ಮನೆಯಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಏನಾಗಬಹುದು ಎಂಬುದಕ್ಕೆ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ಕೆಮ್ಮಾರ ಎಂಬಲ್ಲಿ ನಡೆದ ಘಟನೆ ತಾಜಾ ಉದಾಹರಣೆಯಾಗಿದೆ.

ಇಲಿ ಪಾಷಾಣವನ್ನು ತಿಂದು ಮಗುವೊಂದು ದಾರುಣ ಸಾವಿಗೀಡಾಗಿದೆ. ಎರಡುವರೆ ವರ್ಷದ ಶ್ರೇಯಾ ಮೃತಪಟ್ಟ ಮಗು. ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ಕೆಮ್ಮಾರ ಎಂಬಲ್ಲಿ ಘಟನೆ ನಡೆದಿದೆ. ಆಟವಾಡುತ್ತಾ ಮನೆಯಲ್ಲಿದ್ದ ಇಲಿ ಪಾಷಾಣಾವನ್ನು ಮಗು ತಿಂದಿತ್ತು.

ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಗು ಕೊನೆಯುಸಿರೆಳೆದಿದೆ. ಶ್ರೇಯಾ, ನಿವೃತ್ತ ಸೈನಿಕ ಸೈಜು ಹಾಗೂ ದೀಪ್ತಿ ದಂಪತಿಯ ಪುತ್ರಿ. ಘಟನೆ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thanks for reading ಮನೆಯಲ್ಲಿ ಆಟವಾಡುವಾಗ ಇಲಿ ಪಾಷಾಣ ತಿಂದು ಹೆಣ್ಣು ಮಗು ದುರಂತ ಸಾವು | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಮನೆಯಲ್ಲಿ ಆಟವಾಡುವಾಗ ಇಲಿ ಪಾಷಾಣ ತಿಂದು ಹೆಣ್ಣು ಮಗು ದುರಂತ ಸಾವು

Post a Comment