ಪಿಯುಸಿ ವಿದ್ಯಾರ್ಥಿಗಳಿಗೆ ಮತ್ತೊಂದು ಬಿಗ್ ರಿಲೀಫ್

June 08, 2021
Tuesday, June 8, 2021

ಪಿಯುಸಿ ವಿದ್ಯಾರ್ಥಿಗಳಿಗೆ ಮತ್ತೊಂದು ಬಿಗ್ ರಿಲೀಫ್

File Type: News                                                     

File Language :- Kannada

Which Department :- Education

State :- karnataka

Published Date :- 08/06/2021

File Format :-pdf

File Size :- 887kb

Number Of Pages :- 01

Scanned Copy :- Yes

Copy Text :- No

Enable :- Yes

Quality :- High

File Size Reduced :- No

Password Protected :- No

Passworod Encrypted:- No

Image File Available :- Yes

File Vieow Available :- Yes

Download Link Available :- Yes

Cost :- No

Personal Use Only

ಬೆಂಗಳೂರು,ಜೂ08 - ವೈದ್ಯಕೀಯ ,ಇಂಜಿನಿಯರಿಂಗ್, ದಂತ ವೈದ್ಯಕೀಯ ಸೇರಿದಂತೆ ಮತ್ತಿತರ ವೃತ್ತಿಪರ ಕೋಸ್೯ಗಳಿಗೆ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸದೆ, ಕೇವಲ ಸಾಮಾನ್ಯ ಪ್ರವೇಶ ಪರೀಕ್ಷೆ ( ಸಿಇಟಿ) ಅಂಕಗಳನ್ನು ಪರಿಗಣಿಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ.

ಸರ್ಕಾರದ ಈ ತೀರ್ಮಾನದಿಂದಾಗಿ ಪಿಯುಸಿ ವಿದ್ಯಾರ್ಥಿಗಳಿಗೆ ಮತ್ತೊಂದು ಬಿಗ್ ರಿಲೀಫ್ ಸಿಕ್ಕಂತಾಗಿದೆ.ಈಗಾಗಲೇ ಪರೀಕ್ಷೆಯನ್ನು ರದ್ದುಪಡಿಸಲಾಗಿತ್ತು. ವಿಕಾಸಸೌಧದಲ್ಲಿ ಇಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ ನಾರಾಯಣ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ನಿಗದಿಯಂತೆ ಆಗಸ್ಟ್ 28 ಮತ್ತು 29 ರಂದು ಸಿಇಟಿ ಪರೀಕ್ಷೆ ನಡೆಯಲಿದ್ದು,ಸಿಇಟಿ ಅಂಕಗಳನ್ನು ಮಾನದಂಡವಾಗಿಟ್ಟುಕೊಂಡು ವೃತ್ತಿಪರ ಕೋರ್ಸ್ ಗಳ ಸೀಟು ಹಂಚಿಕೆ ‌ನಿರ್ಧಾರ ಮಾಡಲಾಗಿದೆ ಎಂದು ಅಶ್ವಥ್ ನಾರಾಯಣ ಅವರು ಸುದ್ದಿಗಾರರಿಗೆ ತಿಳಿಸಿದರು.

ಸೀಟು ಹಂಚಿಕೆಗೆ ಈ ವರ್ಷ ಪಿಯುಸಿಯ ಶೇ.50 ಅಂಕ ಪರಿಗಣಿಸದೇ ಇರಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಿಇಟಿ ಪರೀಕ್ಷೆ ಬರೆಯಲು ಇದ್ದ ಅರ್ಹತೆ ಅಂಕಗಳ ಮಾನದಂಡ ಬದಲಾವಣೆಗೂ ನಿರ್ಧಾರ ಮಾಡಲಾಗಿದೆ. ಈ ವರ್ಷ ಗ್ರೇಡ್ ಆಧಾರದಲ್ಲಿ ಪಿಯುಸಿ ಫಲಿತಾಂಶ ನೀಡುತ್ತಿರುವ ಕನಿಷ್ಠ ಅಂಕಗಳ ಮಾನದಂಡ ನಿಯಮ ಸಡಿಲಿಕೆ ಮಾಡಲಾಗಿದ್ದು ವಿಜ್ಞಾನ ವಿಭಾಗದ ಎಲ್ಲಾ ವಿದ್ಯಾರ್ಥಿಗಳಿಗೂ ಸಿಇಟಿ ಬರೆಯಲು ಅವಕಾಶ ನೀಡಲಾಗಿದೆ ಎಂದರು.

ಪಿಯುಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಸಿಇಟಿ ಬರೆಯಲು ಕನಿಷ್ಠ ಶೇ.40-45 ಅಂಕ ಕಡ್ಡಾಯವಾಗಿ ಪಡೆಯಬೇಕಿತ್ತು. ಈ ಅಂಕಗಳನ್ನು ಪಡೆಯದೇ ಇದ್ದಲ್ಲಿ ಸಿಇಟಿ ಬರೆಯಲು ಅರ್ಹತೆ ಪಡೆಯುತ್ತಿರಲಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಓಬಿಸಿ, ಸಾಮಾನ್ಯ ವಿದ್ಯಾರ್ಥಿಗಳಿಗೆ ಕನಿಷ್ಠ ಅಂಕ ನಿಯಮ ನಿಗದಿ ಮಾಡಲಾಗಿತ್ತು ಎಂದರು.

ಶಿಕ್ಷಣ ಸಚಿವ ಸುರೇಶ್ ಕುಮಾರ್ ನೀಡಿದ್ದ ಸಲಹೆ ಬಗ್ಗೆ ಸಮಾಲೋಚನೆ ಮಾಡಲಾಗಿದೆ.ಎಲ್ಲಾ ವಿಜ್ಞಾನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು ಎಂದು ಸ್ಪಷ್ಟಪಡಿಸಿದರು. ಸಿಇಟಿಯಲ್ಲಿ ನೀಟ್ ತರಹ ಮಿನಿಮಮ್ ಮಾರ್ಕ್ಸ್ ಪರಿಗಣಿಸಬಹುದಾ ಎಂದು ನಿರ್ಧಾರ ಮಾಡುತ್ತೇವೆ. ‌ಸ್ಕ್ರೀನಿಂಗ್ ವಿಧಾನ ಪಾಲಿಸುವುದಕ್ಕೆ ಚರ್ಚೆ ಮಾಡುತ್ತಿದ್ದೇವೆ ಎಂದರು.

ನೀಟ್ ಮಾದರಿಯಲ್ಲಿ ಎಂಜಿನಿಯರಿಂಗ್ ಸೀಟು ಹಂಚಿಕೆಗೆ ಮಾನದಂಡ ಮಾಡಬೇಕಾ ಅನ್ನೋ ಬಗ್ಗೆ ಚರ್ಚೆ ಆಗುತ್ತಿದೆ.ಮುಂದೆ ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ಪ್ರತಿ ವಿಷಯಕ್ಕೂ 6೦ ಅಂಕಗಳನ್ನು ನೀಡಲಾಗುವುದು.ಜೂನ್ 15 ರಿಂದ ಸಿಇಟಿಗೆ ನೊಂದಣಿ ಮಾಡಲು ಅವಕಾಶ ನೀಡಲಾಗುವುದು.ಈ ವರ್ಷ 6.5 ಲಕ್ಷ ಪಿಯುಸಿ ವಿದ್ಯಾರ್ಥಿಗಳಿಗೆ ಸೀಟು ಬೇಕು.ಇದಕ್ಕೆ ಅಗತ್ಯ ಸೀಟು ಹೆಚ್ಚಳ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

೧೦೦% ಪಿಯುಸಿಯಲ್ಲಿ ಉತ್ತೀರ್ಣರಾದರೆ 6.5 ಲಕ್ಷ ಪಿಯುಸಿಯಿಂದ ಡಿಗ್ರಿಗೆ ಬರುತ್ತಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗುವುದರಿಂದ ಕೋರ್ಸ್ ಹೇಗೆ ಹೆಚ್ಚಿಸಬೇಕು ಹೇಗೆ ಇಲಾಖೆ ತಯಾರಾಗಬೇಕು ಎಂತಲೂ ಯೋಚನೆ ಮಾಡ್ತಿದ್ದೇವೆ ಎಂದು ಅಶ್ವಥ್ ನಾರಾಯಣ ಮಾಹಿತಿ ನೀಡಿದರು.

ವಿಜ್ಞಾನ ವಿದ್ಯಾರ್ಥಿಗಳು ಯಾವುದೇ ಕೋರ್ಸ್ ಪಡೆಯಲು ಸಿಇಟಿ ಮಾನದಂಡ ಮಾಡಬೇಕು ಎಂದು ಚಿಂತನೆ ಮಾಡಲಾಗುತ್ತಿದೆ.ಸಾಧ್ಯವಾದರೇ ಈ ವರ್ಷವೇ ಈ ನಿಯಮ ಜಾರಿ ಮಾಡುತ್ತೇವೆ ಎಂದು ವಿವರಿಸಿದರು.

ವಿಜ್ಞಾನ ವಿಭಾಗದವರಿಗೆಲ್ಲ ಯಾವುದೇ ಕೋರ್ಸ್ ಗೂ ಸಿಇಟಿ ಮೂಲಕವೇ ಪರಿಗಣಿಸುವ ಬಗ್ಗೆ ಚಿಂತನೆ ನಡಿಯುತ್ತಿದೆ.ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾದರೆ,ಖಾಸಗಿ , ಸರ್ಕಾರಿ ಕಾಲೇಜುಗಳ ಜೊತೆ ಚರ್ಚೆ ಮಾಡಲಾಗುವುದು.ಸೀಟು ಕೂಡ ಹೆಚ್ಚಳವಾಗಲಿದೆ ಎಂದರು.

ಈ‌ ವರ್ಷ ಪದವಿ ವಿದ್ಯಾರ್ಥಿಗಳಿಗೆ ಟ್ಯಾಬ್ ಕೊಡಲಾಗುವುದು: ಲಾಕ್ ಡೌನ್ ಮುಗಿದು ಕಾಲೇಜು ಪ್ರಾರಂಭ ಆದ ಕೂಡಲೇ ಟ್ಯಾಬ್ ಕೊಡುತ್ತೇವೆ.ಆನ್ ಲೈನ್ ಕ್ಲಾಸ್ ಗೂ ಹೆಚ್ಚು ಗಮನ ಹರಿಸಲಾಗುವುದು.ವಿದ್ಯಾರ್ಥಿಗಳಿಗೆ ಅಗತ್ಯ ಸಹಕಾರ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದರು. ಪಿಯುಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಸಿಇಟಿ ಬರೆಯಲು ಕನಿಷ್ಠ ಶೇ.40-45 ಅಂಕ ಕಡ್ಡಾಯವಾಗಿ ಪಡೆಯಬೇಕಿತ್ತು. ಈ ಅಂಕಗಳನ್ನು ಪಡೆಯದೇ ಇದ್ದಲ್ಲಿ ಸಿಇಟಿ ಬರೆಯಲು ಅರ್ಹತೆ ಪಡೆಯುತ್ತಿರಲಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಓಬಿಸಿ, ಸಾಮಾನ್ಯ ವಿದ್ಯಾರ್ಥಿಗಳಿಗೆ ಕನಿಷ್ಠ ಅಂಕ ನಿಯಮ ನಿಗದಿ ಮಾಡಲಾಗಿತ್ತು.

ಒಂದು ವೇಳೆ ಕೋವಿಡ್ ಪ್ರಕರಣಗಳು ಹೆಚ್ಚ್ಸದರೆ ಮಾತ್ರ ದಿನಾಂಕವನ್ನು ಮುಂದೂಡಲು ಇಲಾಖೆ ಮುಂದಾಗಿದೆ. ಮೊದಲನೇ ವರ್ಷದ/ ಮೊದಲನೇ ಸೆಮಿಸ್ಟರ್ ನ ಇಂಜಿನಿಯರಿಂಗ್, ತಂತ್ರಜ್ಞಾನ, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನದ ಕೋರ್ಸ್‍ಗಳು ಮತ್ತು ಬಿ-ಫಾರ್ಮಾ-ಡಿ ಕೋರ್ಸ್‍ಗಳ ಪ್ರವೇಶಕ್ಕಾಗಿ ಸಿಇಟಿ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಕಾಲೇಜು ಶಿಕ್ಷಣ ಆಯುಕ್ತ ಪ್ರದೀಪ್, ಕೆಇಎ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

Thanks for reading ಪಿಯುಸಿ ವಿದ್ಯಾರ್ಥಿಗಳಿಗೆ ಮತ್ತೊಂದು ಬಿಗ್ ರಿಲೀಫ್ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಪಿಯುಸಿ ವಿದ್ಯಾರ್ಥಿಗಳಿಗೆ ಮತ್ತೊಂದು ಬಿಗ್ ರಿಲೀಫ್

Post a Comment