ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ತಮಿಳುನಾಡಿನ ಮಾಜಿ ಸಚಿವ ಬೆಂಗಳೂರಿನಲ್ಲಿ ಅರೆಸ್ಟ್

June 20, 2021
Sunday, June 20, 2021

 


ಬೆಂಗಳೂರು: ಬೆಂಗಳೂರಿನಲ್ಲಿ ತಮಿಳುನಾಡಿನ ಮಾಜಿ ಸಚಿವನ ಬಂಧನವಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ, AIADMK ನಾಯಕ ಮಣಿಕಂಠನ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಳೆದ ಐದು ವರ್ಷಗಳಿಂದ ನಾನು ಲಿವ್ ಇನ್ ಸಂಬಂಧದಲ್ಲಿದ್ದೆ, ನನ್ನನ್ನು ಮದುವೆಯಾಗುವುದಾಗಿ ನಂಬಿಸಿ, ನಿರಂತರ ಅತ್ಯಾಚಾರ ಮಾಡಿದ್ದಾರೆ.

ಇದರ ಫಲವಾಗಿ ಮೂರು ಬಾರಿ ಗರ್ಭಧರಿಸಿದ್ದೆ, ಬಲವಂತವಾಗಿ ಗರ್ಭಪಾತ ಮಾಡಿಸಿ ಈಗ ಮೋಸ ಮಾಡಿದ್ದಾರೆ ಎಂದು ಮಲೇಷ್ಯಾ ಮೂಲದ ಮಹಿಳೆ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು. ಪೊಲೀಸರು ತನಿಖೆ ನಡೆಸುತ್ತಿದ್ದಂತೆಯೇ ತಮ್ಮನ್ನು ಪೊಲೀಸರು ಬಂಧಿಸದಂತೆ ಕೋರಿ ಮಣಿಕಂದನ್‌ ನಿರೀಕ್ಷಣಾ ಜಾಮೀನು ಕೋರಿದ್ದರು. ಆದರೆ ಮದ್ರಾಸ್‌ ಹೈಕೋರ್ಟ್‌ ಅರ್ಜಿಯನ್ನು ವಜಾ ಮಾಡಿತ್ತು.

ಈ ಹಿನ್ನೆಲೆಯಲ್ಲಿ ತಮ್ಮನ್ನು ಪೊಲೀಸರು ಬಂಧಿಸಬಹುದು ಎಂದು ಮಣಿಕಂಠನ್ ಎಸ್ಕೇಪ್‌ ಆಗಿದ್ದರು.

ಇದೀಗ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಆರೋಪಿ ಮಣಿಕಂದನ್​ ಮಲೇಷ್ಯಾ ಮೂಲದ ನಟಿ ಮೇಲೆ ಅತ್ಯಾಚಾರ ಎಸಗಿದ್ದರು ಎಂಬ ಆರೋಪ ಕೇಳಿ ಬಂದಿದೆ.. ಎಐಎಡಿಎಂಕೆ ಸರ್ಕಾರದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವರಾಗಿದ್ದ ಮಣಿಕಂದನ್ ಅವರಿಗೆ ದಕ್ಷಿಣ ಏಷ್ಯಾದ ಪ್ರವಾಸಿ ರಾಯಭಾರಿಯಾಗಿದ್ದ ಯುವತಿಯ ಪರಿಚಯ 2017ರಲ್ಲಿ ಆಗಿತ್ತು. ಅವರಿಗೆ ಮಲೇಷ್ಯಾದಲ್ಲಿ ಹೂಡಿಕೆ ಸಂಬಂಧ ಮಾತುಕತೆ ಮಾಡಲು ಮಣಿಕಂಠನ್ ಕರೆಸಿಕೊಂಡಿದ್ದರು.

ಇದಾಗಲೇ ವಿವಾಹವಾಗಿದ್ದರೂ, ಯುವತಿ ಜತೆ ಲಿವ್ ಇನ್ ಸಂಬಂಧದಲ್ಲಿದ್ದರು. ಮದುವೆಯಾಗುವಂತೆ ಹೇಳಿದರೆ ಬೆದರಿಕೆ ಹಾಕುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ. ಇವರು ಬೆಂಗಳೂರಿನಲ್ಲಿ ಜೆ.ಡಿ.ಎಸ್ ಮುಖಂಡ ತಮ್ಮನಾಯಕನಳ್ಳಿ ಶ್ರೀನಿವಾಸ್ ಅವರಿಗೆ ಸೇರಿದ ವಿಲ್ಲಾದಲ್ಲಿ ಅಡಗಿ ಕುಳಿತಿರುವುದು ತಿಳಿದ ಚೆನ್ನೈದ ಸಿಐಡಿ ಪೊಲೀಸರು, ನಿನ್ನೆ ರಾತ್ರಿಯೇ ಬೆಂಗಳೂರಿಗೆ ಬಂದಿದ್ದು, ಅರೆಸ್ಟ್‌ ಮಾಡಿದ್ದಾರೆ.

Thanks for reading ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ತಮಿಳುನಾಡಿನ ಮಾಜಿ ಸಚಿವ ಬೆಂಗಳೂರಿನಲ್ಲಿ ಅರೆಸ್ಟ್ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ತಮಿಳುನಾಡಿನ ಮಾಜಿ ಸಚಿವ ಬೆಂಗಳೂರಿನಲ್ಲಿ ಅರೆಸ್ಟ್

Post a Comment