ಹಲಸಿನ ಬೀಜಗಳನ್ನು ಬಿಸಾಡಬೇಡಿ

June 13, 2021
Sunday, June 13, 2021


 ಸಾಮಾನ್ಯವಾಗಿ ಬಹಳಷ್ಟು ಮಂದಿ ಹಲಸಿನ ತೊಳೆಗಳನ್ನು ತಿಂದ ನಂತರ ಬೀಜಗಳನ್ನು ಬಿಸಾಡುತ್ತಾರೆ. ಆದರೆ ಹಲಸಿನ ಬೀಜಗಳಲ್ಲಿ ವಿಪುಲವಾಗಿ ಪೋಷಕಾಂಶಗಳಿರುತ್ತವೆ.

100 ಗ್ರಾಂಗಳ ಹಲಸಿನ ಬೀಜಗಳಲ್ಲಿ 184 ಕ್ಯಾಲೋರಿಗಳ ಶಕ್ತಿ, 7 ಗ್ರಾಂಗಳ ಪ್ರೊಟೀನ್, 38 ಗ್ರಾಂಗಳ ಕಾರ್ಬೋಹೈಡ್ರೇಟ್ಸ್, 1.5 ಗ್ರಾಂಗಳಷ್ಟು ಪೀಚು, ಕೊಬ್ಬಿನ ಪದಾರ್ಥಗಳು ಇರುತ್ತವೆ.

ಅವುಗಳಲ್ಲಿ ಪೀಚು ಹೆಚ್ಚು ಇರುವುದರಿಂದ ಸ್ಥೂಲಕಾಯ ಬರದಂತೆ ನಿವಾರಿಸುತ್ತವೆ. ಜೀರ್ಣಕ್ರಿಯೆ ಉತ್ತಮವಾಗಿ ಆಗುವಂತೆ ಮಾಡುತ್ತವೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಹೃದ್ರೋಗಗಳನ್ನು ನಿಯಂತ್ರಿಸುತ್ತವೆ. ಜೀರ್ಣಾಶಯವನ್ನು ಪರಿಶುಭ್ರವಾಗಿಡುತ್ತದೆ. ಆ ಮೂಲಕ ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ.

ಇವುಗಳಲ್ಲಿರುವ ಥಯಾಮಿನ್, ರೈಬೋಫ್ಲೇವಿನ್ ಒಳ್ಳೆಯ ಶಕ್ತಿ ವರ್ಧಕವಾಗಿ ಕೆಲಸ ಮಾಡುವುದರೊಂದಿಗೆ ಚರ್ಮ, ಕಣ್ಣು, ಕೂದಲಿನ ಆರೋಗ್ಯವನ್ನು ಸಂರಕ್ಷಿಸುತ್ತವೆ.

ಇವುಗಳಲ್ಲಿ ಜಿಂಕ್, ಐರನ್, ಕ್ಯಾಲ್ಸಿಯಂ, ಕಾಪರ್, ಪೊಟ್ಯಾಷಿಯಂ, ಮ್ಯಾಂಗನೀಸ್ ನಂತಹ ಖನಿಜಗಳು ಹೆಚ್ಚು.

ಹಲಸಿನ ಬೀಜದಲ್ಲಿನ ಪಾಲಿಫಿನಾಲ್, ಫ್ಲವೊನೋಯ್ಡ್ಸ್ ನಂತಹ ವೃಕ್ಷ ರಸಾಯನಗಳು ಕ್ಯಾನ್ಸರನ್ನು ದೂರ ಮಾಡುತ್ತದೆ.

Thanks for reading ಹಲಸಿನ ಬೀಜಗಳನ್ನು ಬಿಸಾಡಬೇಡಿ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಹಲಸಿನ ಬೀಜಗಳನ್ನು ಬಿಸಾಡಬೇಡಿ

Post a Comment