ಅಪ್ಪಿತಪ್ಪಿ ಗೂಗಲ್​ನಲ್ಲಿ ಈ ಪದಗಳನ್ನು ಸರ್ಚ್​ ಮಾಡ್ಬೇಡಿ, ಇಲ್ಲದಿದ್ರೆ ಅಪಾಯ ಬೆನ್ನತ್ತಿ ಬರಲಿದೆ!

June 19, 2021
Saturday, June 19, 2021

 


ನವದೆಹಲಿ: ಗೂಗಲ್​ ಬಗ್ಗೆ ಯಾರಿಗೂ ಪರಿಚಯ ಮಾಡಿ ಕೊಡಲೇ ಬೇಕಿಲ್ಲ. ಏಕೆಂದರೆ ಇಂದು ಗೂಗಲ್​ ಪ್ರತಿಯೊಬ್ಬರ ಕೈಬೆರಳನ್ನು ತಲುಪಿದೆ. ಜನರು ಕೇಳುವ ಯಾವುದೇ ಪ್ರಶ್ನೆಗೆ ಗೂಗಲ್​ ಬಳಿ ಉತ್ತರ ಇದ್ದೇ ಇರುತ್ತದೆ.

ಆದರೆ, ಗೂಗಲ್​ ನೀಡುವ ಎಲ್ಲ ಮಾಹಿತಿಯು ಕೂಡ ನಿಜವಾಗಿರುವುದಿಲ್ಲ. ಏಕೆಂದರೆ, ಸೈಬರ್​ ಖದೀಮರು ಜನರಿಗೆ ವಂಚನೆ ಮಾಡಲೆಂದೇ ಬ್ಯಾಂಕ್​ ವಿಳಾಸ, ಬ್ರ್ಯಾಂಡ್​ ಕಂಪನಿಗಳ ಕಸ್ಟಮರ್​ ಕೇರ್​ ನಂಬರ್ ಸೇರಿದಂತೆ ಅನೇಕ ಮಾಹಿತಿಗಳನ್ನು ಅಪ್​ಲೋಡ್​ ಮಾಡಿರುತ್ತಾರೆ. ಅಪ್ಪಿತಪ್ಪಿ ಈ ಮಾಹಿತಿಗಳನ್ನು ನಂಬಿ ತಮ್ಮ ಸಮಸ್ಯಗಳನ್ನು ಬಗೆಹರಿಸಿಕೊಳ್ಳಲು ಮುಂದಾದರೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಸಾವಿಗೂ ದೂಡಬಹುದು.​

ಇಂದು ಇಂಟರ್ನೆಟ್​ ಎಷ್ಟೇ ಮುಂದುವರಿದಿರಬಹುದು, ಅಷ್ಟೇ ಪ್ರಮಾಣದಲ್ಲಿ ಸೈಬರ್​ ಕ್ರೈಂ ತಲೆಎತ್ತಿದ್ದು, ಜನರಿಗೆ ತಲೆನೋವಾಗಿ ಪರಿಣಮಿಸಿದೆ.

ಇಂತಹ ಪ್ರಕರಣಗಳಲ್ಲಿ ದೂರು ನೀಡಿದರು ಅಪರಾಧದ ಮೂಲ ಪತ್ತೆಹಚ್ಚುವುದು ಕಷ್ಟವಾಗಿದ್ದು, ಸೈಬರ್​ ಕ್ರೈಂ ದಿನ ಕಳೆದಂತೆ ತನ್ನ ಕದಂಬಬಾಹುವನ್ನು ವಿಸ್ತರಿಸುತ್ತಿದೆ. ಹೀಗಾಗಿ ಗೂಗಲ್​ನಲ್ಲಿ ಸರ್ಚ್​ ಮಾಡುವಾಗ ಇಂತಹ ಸೈಬರ್​ ವಂಚಕರಿಂದ ಪಾರಾಗಲು ಕೆಲವೊಂದು ಮುಂಜಾಗ್ರತ ಕ್ರಮಗಳು ಈ ಕೆಳಕಂಡಂತಿದೆ.

  1. ಮೊದಲನೇಯದಾಗಿ ಯಾವುದೇ ಪರಿಸ್ಥಿತಿಯಲ್ಲೂ ಶಸ್ತ್ರಾಸ್ತ್ರ, ಆತ್ಮಹತ್ಯೆ, ಕೊಲೆ, ಮಕ್ಕಳ ಅಶ್ಲೀಲತೆಯನ್ನು ಗೂಗಲ್​ನಲ್ಲಿ ಸರ್ಚ್​ ಮಾಡಬೇಡಿ. ಏಕೆಂದರೆ ನಿಮ್ಮ ಐಪಿ ಅಡ್ರೆಸ್​ ಅನ್ನು ಪತ್ತೆಹಚ್ಚಿ, ನಿಮ್ಮ ಮೇಲೆ ಗೂಢಾಚಾರಿಕೆ ಮಾಡಬಹುದು.
  2. ಗೂಗಲ್​ನಲ್ಲಿ ಔಷಧಗಳನ್ನು ಹುಡುಕುವ ಬದಲು ನೇರವಾಗಿ ವೈದ್ಯರನ್ನು ಸಂಪರ್ಕಿಸುವುದು ಒಳಿತು.
  3. ಯಾವುದೇ ಕಂಪನಿಯ ಕಸ್ಟಮರ್​ ಕೇರ್​ ನಂಬರ್​ ಅನ್ನು ಗೂಗಲ್​ನಲ್ಲಿ ಹುಡುಕಾಡಬೇಡಿ. ಏಕೆಂದರೆ ಸೈಬರ್​ ವಂಚಕರ ಜಾಲಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿರುತ್ತದೆ. ಅದರ ಬದಲಾಗಿ ವೆಬ್​ಸೈಟ್​ಗಳನ್ನು ಹುಡುಕಿ ಮೊಬೈಲ್​ ನಂಬರ್​ ಪಡೆದುಕೊಳ್ಳಿ.
  4. ವೆಬ್​ಸೈಟ್​ ಯುಆರ್​ಎಲ್​ ಅನ್ನು ಗೂಗಲ್​ನಲ್ಲಿ ಸರ್ಚ್​ ಮಾಡಬೇಡಿ. ಅದರಲ್ಲೂ ಆನ್​ಲೈನ್​ ಬ್ಯಾಂಕಿಂಗ್​ ವೆಬ್​ಸೈಟ್​ ವಿಚಾರಕ್ಕೆ ಬಂದಾಗ ತುಂಬಾ ಎಚ್ಚರಿಕೆ ವಹಿಸಿರಿ.
  5. ಯಾವಾಗಲೂ ವೇರಿಫೈ ಮಾಡಿದ ಮೊಬೈಲ್​ ಅಪ್ಲಿಕೇಶನ್​ಗಳನ್ನು ಆಯಂಡ್ರಾಯ್ಡ್​ ಪ್ಲೇ ಸ್ಟೋರ್​, ಆಯಪಲ್​ ಪ್ಲೇ ಸ್ಟೋರ್​ ಅಥವಾ ಮೈಕ್ರೋಸಾಫ್ಟ್​ ಸ್ಟೋರ್​ನಲ್ಲಿ ಡೌನ್​ಲೋಡ್​ ಮಾಡಿಕೊಳ್ಳಿ.

ಇವುಗಳಲ್ಲದೆ, ಹಣಕಾಸು, ಷೇರು ಮಾರುಕಟ್ಟೆ ಮತ್ತು ಸರ್ಕಾರಿ ವೆಬ್‌ಸೈಟ್‌ಗಳಿಗೆ ಸಂಬಂಧಿಸಿದ ವಿವರಗಳ ನಿಖರವಾದ ಯುಆರ್​ಎಲ್​ಗಳನ್ನು ಹುಡುಕಬೇಕು.

Thanks for reading ಅಪ್ಪಿತಪ್ಪಿ ಗೂಗಲ್​ನಲ್ಲಿ ಈ ಪದಗಳನ್ನು ಸರ್ಚ್​ ಮಾಡ್ಬೇಡಿ, ಇಲ್ಲದಿದ್ರೆ ಅಪಾಯ ಬೆನ್ನತ್ತಿ ಬರಲಿದೆ! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಅಪ್ಪಿತಪ್ಪಿ ಗೂಗಲ್​ನಲ್ಲಿ ಈ ಪದಗಳನ್ನು ಸರ್ಚ್​ ಮಾಡ್ಬೇಡಿ, ಇಲ್ಲದಿದ್ರೆ ಅಪಾಯ ಬೆನ್ನತ್ತಿ ಬರಲಿದೆ!

Post a Comment