ಕೋಲಾರ; ಶಾಲಾ ಆವರಣದಲ್ಲಿ ಮದ್ಯ ಸೇವನೆ, ಜೂಜಾಟ

June 16, 2021
Wednesday, June 16, 2021

 


ಕೋಲಾರ, ಜೂನ್ 16; ಕೋವಿಡ್ ಕಾರಣದಿಂದಾಗಿ ಶಾಲೆಗಳು ಬಂದ್ ಆಗಿವೆ. ಶಾಲೆಯ ಆವರಣದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಾಸ್ತೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಕಂಡುಬಂದಿದೆ.

ಗ್ರಾಮದ ಕೆಲವು ಜನರು ಶಾಲೆಯ ಆವರಣದಲ್ಲಿ ಬೆಟ್ಟಿಂಗ್ ಆಡುವುದು. ಮದ್ಯ ಸೇವಿಸುವುದು, ಧೂಮಪಾನ ಮಾಡುವುದು ನಿರಂತರವಾಗಿ ನಡೆಯುತ್ತಿದೆ. ಹುಣಸೆ ಬೀಜಗಳಿಂದ ಆಡುವ ಒಂಟಿ ಜೋಡಿ ಆಟದಲ್ಲಿಯೂ ತೊಡಗಿರುವ ವಿಡಿಯೋ ವೈರಲ್ ಆಗಿದದೆ.

ಶ್ರೀನಿವಾಸಪುರ ತಾಲೂಕಿನಲ್ಲಿ ಜೂಜಾಟ, ಕೋಳಿಪಂದ್ಯಾಟಗಳು ಮಿತಿಮೀರಿವೆ.

ಇಲ್ಲಿನ ಪೊಲೀಸರ ಕುಮ್ಮಕ್ಕಿನಿಂದಲೇ ಧಂದೆಕೋರರು ರಾಜಾರೋಷವಾಗಿ ಆಟ ಆಡಿಸುತ್ತಿದ್ದಾರೆ ಎಂದು ಸಹ ಜನರು ಆರೋಪಿಸುತ್ತಿದ್ದಾರೆ.

"ಗ್ರಾಮಗಳಲ್ಲಿ ಜನರು ಜೂಜಾಟ ಆಡುವ ವೇಳೆ ಬಂಧಿಸುವ ಪೊಲೀಸರು ಲಕ್ಷಾಂತರ ರೂಪಾಯಿ ಹಣವನ್ನು ಬೆಟ್ಟಿಂಗ್‌ಗೆ ಇಟ್ಟು ಜೂಜಾಟದ ಅಡ್ಡಗಳಿಗೆ ರಕ್ಷಣೆ ನೀಡುತ್ತಿದ್ದಾರೆ" ಎಂದು ಮಾಜಿ ಸ್ಪೀಕರ್, ಸ್ಥಳೀಯ ಶಾಸಕ ರಮೇಶ್ ಕುಮಾರ್ ಕೆಲವು ದಿನಗಳ ಹಿಂದೆ ಆರೋಪಿಸಿದ್ದರು.

ಇದೀಗ ಶಾಲಾ ಆವರಣದಲ್ಲೂ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದ್ದರೂ ಘಟನೆಗೆ ತಮಗೆ ಸಂಬಂಧವೇ ಇಲ್ಲ ಎಂದು ಪೊಲೀಸರು ಕೈಕಟ್ಟಿ ಕುಳಿತಿದ್ದಾರೆ. ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಮತ್ತು ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ.

ಹಿರಿಯ ಅಧಿಕಾರಿಗಳು ಸಹ ಇದಕ್ಕೆ ಬೇಷರತ್ ಆಗಿ ಬೆಂಬಲಿಸಿದ್ದಾರೆ. ಶ್ರೀನಿವಾಸಪುರದಲ್ಲಿ ಜೂಜಾಟ, ಕೋಳಿಪಂದ್ಯಗಳ ಜೊತೆಗೆ ಪೊಲೀಸರು ರಸ್ತೆಗಳಲ್ಲಿ ವಾಹನ ಅಡ್ಡಗಟ್ಟಿ ಹಣ ವಸೂಲಿ ಮಾಡುವ ಪ್ರಕರಣ ಹೆಚ್ಚುತ್ತಿವೆ.

Thanks for reading ಕೋಲಾರ; ಶಾಲಾ ಆವರಣದಲ್ಲಿ ಮದ್ಯ ಸೇವನೆ, ಜೂಜಾಟ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಕೋಲಾರ; ಶಾಲಾ ಆವರಣದಲ್ಲಿ ಮದ್ಯ ಸೇವನೆ, ಜೂಜಾಟ

Post a Comment