ಹೈದರಾಬಾದ್: ತಂದೆ-ತಾಯಿಯ ಎದುರೇ ತಂಗಿಗೆ ಬೆಂಕಿ ಹಚ್ಚಿದ ಅಣ್ಣ

June 16, 2021
Wednesday, June 16, 2021

 


ಹೈದರಾಬಾದ್: ಪ್ರೀತಿಸಿದವನನ್ನೇ ಮದುವೆಯಾಗುತ್ತೇನೆಂದು ಹೇಳಿದ ಹಿನ್ನೆಲೆ ತನ್ನ ತಂಗಿಗೆ ಅಣ್ಣ ಬೆಂಕಿ ಹಚ್ಚಿದ್ದಾನೆ. ಈ ಘಟನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ರಾಯಚೂಟಿ ಬಳಿಯ ಕೊತ್ತಪಲ್ಲಿ ಗ್ರಾಮದಲ್ಲಿ ನಡೆದಿದೆ. ಯುವತಿ ತಾಹಸೀನ್ ಎಂಬುವವಳು ಪ್ರೀತಿಸುತ್ತಿದ್ದ ಯುವಕನನ್ನು ಮದುವೆಯಾಗುತ್ತೇನೆ ಎಂದು ಮನೆಯಲ್ಲಿ ಹೇಳಿದ್ದಳು. ಮನೆಯಲ್ಲಿ ತಂದೆ ತಾಯಿಯ ಸಮ್ಮುಖದಲ್ಲಿಯೇ ಅಣ್ಣ ಮತ್ತು ತಂಗಿಗೆ ಗಲಾಟೆಯಾಗಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ತಹಸೀನ್ ಮೇಲೆ ಆಕೆಯ ಸ್ವಂತ ಅಣ್ಣ ತಾಜುದ್ದೀನ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಯುವತಿ ತಾಹಸೀನ್ ತೀವ್ರವಾಗಿ ಗಾಯವಾಗಿದ್ದು, ಚಿಕಿತ್ಸೆಗಾಗಿ ಕಡಪ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕರ್ನೂಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ರಾಯಚೋಟಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ತೊಟ್ಟಿಗೆ ಬಿದ್ದು 2 ತಿಂಗಳ ಬಾಣಂತಿ ಅನುಮಾನಾಸ್ಪದ ಸಾವು
ಹಾಸನ: ಅರಸೀಕೆರೆ ತಾಲೂಕಿನ ಮಾಲೇಕಲ್ ತಿರುಪತಿ ಗ್ರಾಮದಲ್ಲಿ ತೊಟ್ಟಿಗೆ ಬಿದ್ದು 2 ತಿಂಗಳ ಬಾಣಂತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. 19 ವರ್ಷದ ಭವ್ಯಾ ಮೃತಪಟ್ಟಿರುವ ಬಾಣಂತಿ. ಭವ್ಯಾ ಪೋಷಕರು, ಅಳಿಯ ಮತ್ತು ಮನೆಯವರ ವಿರುದ್ಧ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಒಂದು ವರ್ಷದ ಹಿಂದೆ ಜಗದೀಶ್ ಜತೆ ಭವ್ಯಾ ವಿವಾಹವಾಗಿತ್ತು.

ಮದುವೆಯಾದಾಗಿನಿಂದಲೂ ಪತಿ ಮತ್ತು ಮನೆಯವರು ಕಿರುಕುಳ ನೀಡುತ್ತಿದ್ದರೆಂಬ ಆರೋಪ ಕೇಳಿಬಂದಿದ್ದು, ಎರಡು ತಿಂಗಳ ಹಿಂದಷ್ಟೇ ಭವ್ಯಾ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಕೊವಿಡ್ ಹಿನ್ನೆಲೆ ಹೆರಿಗೆ ಬಳಿಕ ಭವ್ಯಾ ಗಂಡನ ಮನೆಯಲ್ಲಿದ್ದಳು. ಆದರೆ ಇದೀಗ ಸಾವನ್ನಪ್ಪಿದ್ದು, ಅನುಮಾನಕ್ಕೆ ಕಾರಣವಾಗಿದೆ.

Thanks for reading ಹೈದರಾಬಾದ್: ತಂದೆ-ತಾಯಿಯ ಎದುರೇ ತಂಗಿಗೆ ಬೆಂಕಿ ಹಚ್ಚಿದ ಅಣ್ಣ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಹೈದರಾಬಾದ್: ತಂದೆ-ತಾಯಿಯ ಎದುರೇ ತಂಗಿಗೆ ಬೆಂಕಿ ಹಚ್ಚಿದ ಅಣ್ಣ

Post a Comment