ನವದೆಹಲಿ : ಗಟ್ಟಿ ಮೊಸರು (Curd), ಸೌತೆಕಾಯಿ ಮತ್ತು ಈರಳ್ಳಿ ಹಚ್ಚಿ ಮಾಡಿದ ರಾಯಿತ ದೇಹಾರೋಗ್ಯಕ್ಕೆ ಸಾಕಷ್ಟು ಹಿತಕಾರಿ (health benefits of raita). ಮೊಸರಿನಲ್ಲಿ ವಿಟಮಿನ್ ಬಿ ೫, ವಿಟಮಿನ್ ಬಿ ೧೨, ಪೊಟ್ಯಾಶಿಯಂ, ಅಯೋಡಿನ್, ಜಿಂಕ್, ಪಾಸ್ಪರಸ್ ಮುಂತಾದ ಹಲವು ಪೋಷಕಾಂಶಗಳಿರುತ್ತವೆ. ಇವು ಹಲವು ರೋಗಗಳಿಂದ ನಮ್ಮನ್ನು ಕಾಪಾಡುತ್ತವೆ. ಈರುಳ್ಳಿಯಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಅಲ್ಲದೆ ಪಾಲಿಕ್ ಆಸಿಡ್, ಕ್ಯಾಲ್ಸಿಯಂ, ಮೆಗ್ನೇಶಿಯಂ, ಕಬ್ಬಿಣದಾಂಶ ಮತ್ತು ಫೈಬರ್ ಮೊದಲಾದ ಪೋಷಕಾಂಶಗಳು ಬೇಕಾದಷ್ಟಿರುತ್ತದೆ. ಇವೆರಡೂ ಆಹಾರಗಳು ಒಟ್ಟು ಸೇರಿದಾಗ ಸಿಗುವ ಪೌಷ್ಟಿಕಾಂಶಗಳೂ ಎರಡು ಪಟ್ಟು ಹೆಚ್ಚಾಗುತ್ತದೆ. ಇವತ್ತು ರಾಯಿತ ತಿಂದರೆ ಆಗುವ ಲಾಭದ ಬಗ್ಗೆ ಹೇಳುತ್ತೇವೆ.
ಮೊಸರು ಬಜ್ಜಿ ತಿಂದರೆ ಆಗುವ ಲಾಭ.
೧. ದೇಹ ಹೈಡ್ರೇಟ್ ಆಗಿರುತ್ತದೆ.
ದೇಹದಲ್ಲಿ ಯಾವುದೇ ಕಾರಣಕ್ಕೂ ನೀರಿನ (water) ಅಂಶ ಕಡಿಮೆ ಆಗದಂತೆ ನೋಡಿಕೊಳ್ಳುತ್ತದೆ ರಾಯಿತ. ಹಾಗಾಗಿ ರಾಯಿತ ತಿಂದರೆ ಡಿಹೈಡ್ರೇಶನ್ ಆಗುವುದಿಲ್ಲ
೨. ಇಮ್ಯೂನಿಟಿ:
ವಿಟಮಿನ್ ಸಿ, ಇದರ ಅತ್ಯುತ್ತಮ ಮೂಲ ಮೊಸರು (Curd). ಈರುಳ್ಳಿಯಲ್ಲೂ ವಿಟಮಿನ್ ಸಿ ಸಿಗುತ್ತದೆ. ಮೊಸರು ಮತ್ತು ಈರುಳ್ಳಿಯಲ್ಲಿ (Onion) ಸಿಗುವ ವಿಟಮಿನ್ ಸಿ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸುತ್ತದೆ.
೩. ಜೀರ್ಣಕ್ರಿಯೆ :
ಗ್ಯಾಸ್, ಅಜೀರ್ಣ, ಮಲಬದ್ದತೆ (Constipation) ಮುಂತಾದ ಸಮಸ್ಯೆ ಇದ್ದರೆ ರಾಯಿತ ನಿಮಗೆ ತುಂಬಾ ಲಾಭದಾಯಕ. ಮೊಸರಿನಲ್ಲಿ ಫೈಬರ್ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ. ಹಾಗಾಗಿ, ಮೊಸರು ತಿಂದರೆ ಜೀರ್ಣ ಕ್ರಿಯೆ (Curd for digestion) ಸರಾಗವಾಗಿ ನಡೆಯುತ್ತದೆ.
೪. ದೇಹಕ್ಕೆ ಶಕ್ತಿ
ಈರುಳ್ಳಿ ಮತ್ತು ಮೊಸರು ಹೊಂದಿರುವ ರಾಯಿತ ತಿಂದರೆ ದೇಹಕ್ಕೆ ಸಾಕಷ್ಟು ಶಕ್ತಿ ಸಿಗುತ್ತದೆ. ಈರುಳ್ಳಿ ಮತ್ತು ಮೊಸರಿನಲ್ಲಿ ಸಾಕಷ್ಟು ಪ್ರೊಟೀನ್, ವಿಟಮಿನ್, ಮಿನರಲ್ಸ್ ಲಭ್ಯ ವಿರುತ್ತದೆ. ಇವು ವಿಕ್ನೆಸ್ ದೂರ ಮಾಡುತ್ತದೆ.
Comments
Post a Comment