'ದ್ವಿತೀಯ PU ವಿದ್ಯಾರ್ಥಿ'ಗಳಿಗೆ ಬಹುಮುಖ್ಯ ಮಾಹಿತಿ : ನಾಳೆಯಿಂದ 'ಸಿಇಟಿ-2021 ಪರೀಕ್ಷೆ'ಗೆ ಅರ್ಜಿ ಸಲ್ಲಿಕೆ ಆರಂಭ

June 15, 2021
Tuesday, June 15, 2021

 


ಬೆಂಗಳೂರು : ರಾಜ್ಯ ಸರ್ಕಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಪಡಿಸಿದೆ. ಆದ್ರೇ ಹಿಂದಿನ ತರಗತಿಯ ಫಲಿತಾಂಶದ ಆಧಾರದ ಮೇಲೆ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲಿದೆ. ಇದರ ಮಧ್ಯೆ ವೃತ್ತಿಪರ ಕೋರ್ಸ್ ಗಳ ಆಯ್ಕೆಗಾಗಿ ನಡೆಸುವಂತ ಸಾಮಾನ್ಯ ಪ್ರವೇಶ ಪರೀಕ್ಷೆ -2021ಗೆ ನಾಳೆಯಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವಂತ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ಸರ್ಕಾರದ ಆದೇಶದಂತೆ ಇಂಜಿನಿಯರಿಂಗ್, ತಂತ್ರಜ್ಞಾನ, ಯೋಗ ಮತ್ತು ನ್ಯಾಚುರೋಪತಿ, ಬಿ-ಫಾರ್ಮ, 2ನೇ ವರ್ಷದ ಬಿ-ಫಾರ್ಮ್ ಮತ್ತು ಫಾರ್ಮ್-ಡಿ, ಕೃಷಿ ವಿಜ್ಞಾನ ಕೋರ್ಸುಗಳು ಹಾಗೂ ವೆಟರಿನರಿ ಕೋರ್ಸುಗಳ ಪ್ರವೇಶಕ್ಕಾಗಿ ದಿನಾಂಕ 28-08-2021 ಮತ್ತು 29-08-2021 ರಂದು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-2021 ನಡೆಯಲಿದೆ.

11 ಜಿಲ್ಲೆಯಲ್ಲಿ ಅನ್‌ಲಾಕ್‌ ಬಳಿಕ ಶಿಕ್ಷಕರು ಶಾಲೆಗೆ : ಪಾಠಗಳು ಆರಂಭ ಯಾವಾಗಿಂದ..?

ಇಂತಹ ಪರೀಕ್ಷೆಗೆ ಆನ್ ಲೈನ್ ಮೂಲಕ, ಅರ್ಜಿ ಸಲ್ಲಿಸಲು ಅರ್ಹ ಕರ್ನಾಟಕ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ನಾಳೆಯಿಂದ ಅರ್ಜಿ ಸಲ್ಲಿಕೆ ಆರಂಭಗೊಳ್ಳುತ್ತಿದ್ದು, ಆನ್ ಲೈನ್ ಮೂಲಕ http://kea.kar.nic.in ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ದಿನಾಂಕ 15-06-2021 ರ ಮಧ್ಯಾಹ್ನ 12 ರಿಂದ ಅರ್ಜಿ ಸಲ್ಲಿಕೆ ಆರಂಭಗೊಳ್ಳಲಿದ್ದು, ಆನ್ ಲೈನ್ ಮೂಲಕ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ 13-07-2021 ಆಗಿರುತ್ತದೆ. ಅರ್ಜಿ ಸಲ್ಲಿಸಿದಂತ ವಿದ್ಯಾರ್ಥಿಗಳು ಮಾಹಿತಿಗಳನ್ನು ಅವಶ್ಯವಿದ್ದಲ್ಲಿ ತಿದ್ದುಪಡಿ ಮಾಡಿಕೊಳ್ಳಲು(ಶುಲ್ಕ ಪಾವತಿ ಮಾಡುವವರಿಗೆ ಮಾತ್ರ) ದಿನಾಂಕ 19-07-2021 ರ ಬೆಳಿಗ್ಗೆ 11 ರಿಂದ 22-07-2021ರ ಸಂಜೆ 5.30ರವರೆಗೆ ಅವಕಾಶ ನೀಡಲಾಗಿದೆ.

ದಿನಾಂಕ 15-06-2021ರ ನಾಳೆಯಿಂದ ಅರ್ಜಿ ಸಲ್ಲಿಕೆ ಆರಂಭಗೊಂಡು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 10-07-2021ರ ಸಂಜೆ 5.30 ಆಗಿರುತ್ತದೆ. ಹೀಗೆ ಅರ್ಜಿ ಸಲ್ಲಿಸಿದಂತ ವಿದ್ಯಾರ್ಥಿಗಳು ಸಿಇಟಿ-2021ಕ್ಕೆ ಪ್ರವೇಶ ಪತ್ರಗಳನ್ನು ದಿನಾಂಕ 13-08-2021ರ ಬೆಳಿಗ್ಗೆ 11 ರಿಂದ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ವೈದ್ಯಕೀಯ, ದಂತ ವೈದ್ಯಕೀಯ, ಆರ್ಯುವೇದ, ಯುನಾನಿ, ಹೋಮಿಯೋಪತಿ ಸೀಟುಗಳ ಪ್ರವೇಶಕ್ಕಾಗಿ, ಅಭ್ಯರ್ಥಿಗಳು (NEET) -2021ರಲ್ಲಿ ಅರ್ಹತೆಯನ್ನ ಪಡೆದಿರಬೇಕು. ಆರ್ಕಿಟೆಕ್ಚರ್ ಸೀಟುಗಳ ಪ್ರವೇಶಕ್ಕಾಗಿ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ರವರು ನಡೆಸುವ NATA-2021ರಲ್ಲಿ ಅಥವಾ 2021ರ JEE Paper-2 ಪರೀಕ್ಷೆಯಲ್ಲಿ ಕಡ್ಡಾಯವಾಗಿ ಅರ್ಹತೆಯನ್ನು ಪಡೆದಿರಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ ಸೈಟ್ http://kea.kar.nic.in ಗೆ ಭೇಟಿ ನೀಡಲು ಸೂಚಿಸಿದೆ.
Thanks for reading 'ದ್ವಿತೀಯ PU ವಿದ್ಯಾರ್ಥಿ'ಗಳಿಗೆ ಬಹುಮುಖ್ಯ ಮಾಹಿತಿ : ನಾಳೆಯಿಂದ 'ಸಿಇಟಿ-2021 ಪರೀಕ್ಷೆ'ಗೆ ಅರ್ಜಿ ಸಲ್ಲಿಕೆ ಆರಂಭ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on 'ದ್ವಿತೀಯ PU ವಿದ್ಯಾರ್ಥಿ'ಗಳಿಗೆ ಬಹುಮುಖ್ಯ ಮಾಹಿತಿ : ನಾಳೆಯಿಂದ 'ಸಿಇಟಿ-2021 ಪರೀಕ್ಷೆ'ಗೆ ಅರ್ಜಿ ಸಲ್ಲಿಕೆ ಆರಂಭ

Post a Comment