ಪ್ರಿಯಕರನೊಂದಿಗೆ ಮಗಳು ಜೂಟ್ : ಮನನೊಂದ ಹೆತ್ತವರ ಆತ್ಮಹತ್ಯೆ

June 02, 2021
Wednesday, June 2, 2021

ಪ್ರಿಯಕರನೊಂದಿಗೆ ಮಗಳು ಜೂಟ್ : ಮನನೊಂದ ಹೆತ್ತವರ ಆತ್ಮಹತ್ಯೆ

File Type: News                                                     

File Language :- Kannada

Which Department :- Education

State :- karnataka

Published Date :- 02/06/2021

File Format :-pdf

File Size :- 887kb

Number Of Pages :- 01

Scanned Copy :- Yes

Copy Text :- No

Enable :- Yes

Quality :- High

File Size Reduced :- No

Password Protected :- No

Passworod Encrypted:- No

Image File Available :- Yes

File Vieow Available :- Yes

Download Link Available :- Yes

Cost :- No

Personal Use Only



ರಾಮನಗರ: ತಮ್ಮ ವಿರೋಧದ ನಡುವೆಯೂ ಮಗಳು ಯುವಕನನ್ನು ಮದುವೆಯಾದ ಕಾರಣಕ್ಕೆ ಮನನೊಂದು ಪೋಷಕರು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ತೆಂಕ್ಕನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಎಚ್.ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್ (50) ಮತ್ತು ಶೈಲಜಾ(42) ಮೃತ ದಂಪತಿ. ಇವರ ಪುತ್ರಿ ಶಿಲ್ಪಾ ಮತ್ತು ಇದೇ ಗ್ರಾಮದ ಪುನೀತ್ ಎಂಬುವವರು ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರೂ ಒಂದೇ ಸಮುದಾಯದವರು. ಭಾನುವಾರ(ಮೇ 30) ಮನೆ ಬಿಟ್ಟು ಓಡಿಹೋಗಿದ್ದ ) ಪ್ರೇಮಿಗಳಿಬ್ಬರೂ ಸೋಮವಾರ ಮದುವೆ ಮಾಡಿಕೊಂಡಿದ್ದರು.

ಮಗಳು ಓಡಿಹೋಗಿ ಮದುವೆ ಮಾಡಿಕೊಂಡ ವಿಷಯ ಕೇಳಿ ರಮೇಶ್ ಮತ್ತು ಶೈಲಜಾ ದಂಪತಿ ತಮ್ಮ ತೋಟದಲ್ಲಿ ಮಾವಿನ ಮರಕ್ಕೆ ನೇಣುಬಿಗಿದುಕೊಂಡಿದ್ದಾರೆ.ಗ್ರಾಮದಲ್ಲಿ ಒಳ್ಳೆಯ ಹೆಸರು ಗಳಿಸಿದ್ದ ರಮೇಶ್ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು.

ಮಗಳು ತಪ್ಪು ಮಾಡಿದ್ದಾಳೆ, ನನ್ನ ಮರ್ಯಾದೆಯೇ ಹೋಯಿತು, ಇನ್ನು ಮುಂದೆ ಯಾರಿಗೆ ನ್ಯಾಯ ಹೇಳಲಿ? ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಗ್ರಾಮದಲ್ಲಿ ಕೇಳಿ ಬರುತ್ತಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಎಂ.ಕೆ.ದೊಡ್ಡಿ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಶವಾಗಾರಕ್ಕೆ ರವಾನಿಸಿದ್ದಾರೆ. ಯಾರೂ ದೂರು ಕೊಡದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.


Thanks for reading ಪ್ರಿಯಕರನೊಂದಿಗೆ ಮಗಳು ಜೂಟ್ : ಮನನೊಂದ ಹೆತ್ತವರ ಆತ್ಮಹತ್ಯೆ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಪ್ರಿಯಕರನೊಂದಿಗೆ ಮಗಳು ಜೂಟ್ : ಮನನೊಂದ ಹೆತ್ತವರ ಆತ್ಮಹತ್ಯೆ

Post a Comment