ವೈರಲ್ ವಿಡಿಯೋ: ತನ್ನ ಮರಿಗಳಿಗೆ ಆಟವಾಡಲು ಗೊಂಬೆ ತಂದು ಕೊಟ್ಟ ತಾಯಿ ನಾಯಿ!

June 13, 2021
Sunday, June 13, 2021

 


ಬೆಂಗಳೂರು: ಮನುಷ್ಯನ ಸಾಕು ಪ್ರಾಣಿಗಳಲ್ಲೇ ಅತ್ಯಂತ ಹೆಚ್ಚಿನ ಮನ್ನಣೆ ಪಡೆದಿರುವುದೆಂದರೆ ಅದು ನಾಯಿ. ನಾಯಿ ನಂಬಿಕೆಗೆ, ಪ್ರೀತಿ, ವಿಶ್ವಾಸಕ್ಕೆ ಮತ್ತೊಂದು ಹೆಸರು.

ಅನೇಕ ಜನ ತಮ್ಮ ಮನೆಗಳಲ್ಲಿ ತಮ್ಮ ಇಷ್ಟದ ನಾಯಿಗಳನ್ನು ಮನೆಯಲ್ಲಿ ಸಾಕುವುದು ಇತ್ತೀಚಿನ ಟ್ರೆಂಡ್ ಅಲ್ಲ. ಅದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇಂತಹ ಮುದ್ದಾದ ನಾಯಿಗಳು ಮನೆಯವರೊಂದಿಗೆ ತುಂಟಾಟ ಮಾಡುತ್ತಾ ಆತ್ಮೀಯರಾಗುತ್ತವೆ.

ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಿದರೆ ನಾಯಿಗಳ ಬಗ್ಗೆ ಅದೇಷ್ಟೊ ವಿಡಿಯೋಗಳು ನಮಗೆ ಸಿಗುತ್ತವೆ. ಅವುಗಳ ತುಂಟಾಟ, ಜಗಳ, ಮರಿಗಳೊಂದಿಗೆ ಆಟ, ಸಾಹಸದಂತಹ ಅನೇಕ ವಿಡಿಯೋಗಳು ನೋಡಲು ಸಿಗುತ್ತವೆ. ಆದರೆ ಇಲ್ಲೊಂದು ನಾಯಿ ಕಳೆದ ಒಂದು ವಾರದಿಂದ ಇಂಟರನೆಟ್‌ನಲ್ಲಿ ವೈರಲ್ ಆಗಿದೆ.

ಲ್ಯಾಬ್ರಡಾರ್ ತಳಿಯ ಹೆಣ್ಣು ನಾಯಿಯೊಂದು ತನ್ನ 9 ಮುದ್ದಾದ ಮರಿಗಳೊಂದಿಗೆ ಆಟವಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಆಟ ಆಡುವುದು ಸಹಜ, ಅದರಲ್ಲಿ ಏನು ವಿಶೇಷ ಎಂದು ಕೇಳುತ್ತಿರಾ? ತಾಯಿ ನಾಯಿ 'ದಿಟಾ' ಬರೀ ಆಟ ಆಡುತ್ತಿಲ್ಲ. ಮರಿಗಳಿಗೋಸ್ಕರ ಗೊಂಬೆಯೊಂದನ್ನು ತಂದು ಕೊಟ್ಟಿದೆ. ಆ ಗೊಂಬೆ ಜೊತೆ ಆಟ ಆಡಿ ಎಂದು ತಾಯಿ ನಾಯಿ ಸೂಚ್ಯವಾಗಿ ಹೇಳುತ್ತಿದೆ. ಆದರೆ ನಾಯಿಮರಿಗಳಿಗೆ ಇದ್ಯಾವುದರ ಪರಿವೇ ಇಲ್ಲವೆಂಬಂತೆ ಸಖತ್‌ ಆಗಿ ನಿದ್ದೆ ಮಾಡುತ್ತಿವೆ.

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ thelabslife ಎನ್ನುವರು ಮೇ 23 ರಂದು ಹಂಚಿಕೊಂಡಿದ್ದಾರೆ. ವಿಡಿಯೋಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ತಾಯಿ ನಾಯಿ ತನ್ನ ಒಂಬತ್ತು ಮರಿಗಳಿಗೋಸ್ಕರ ಆಟವಾಡಲು ಗೊಂಬೆ ತಂದು ಕೊಟ್ಟಿರುವುದಕ್ಕೆ ನೆಟ್ಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ, ಈ ಘಟನೆ ಎಲ್ಲಿ ನಡೆದಿದೆ ಎಂದು ತಿಳಿದು ಬಂದಿಲ್ಲ.

ಇನ್ನು ಈ ವೈರಲ್ ವಿಡಿಯೋಕ್ಕೆ ಅನೇಕರು ಪ್ರತಿಕ್ರಿಯಿಸಿದ್ದು, 'ವ್ಹಾವ್ ಎಷ್ಟೊಂದು ಕ್ಯೂಟ್' ಎಂದು ಉದ್ಘಾರ ತೆಗೆದಿದ್ದಾರೆ. ಇನ್ನೂ ಕೆಲವರು 'ವಾಟ್ ಅ ಸ್ವೀಟ್ ಮಾಮಿ...!' ಎಂದು ಕಾಮೆಂಟ್ ಮಾಡಿದ್ದಾರೆ.

ಈ ವಿಡಿಯೋ 5 ಸಾವಿರಕ್ಕೂ ಹೆಚ್ಚು ಲೈಕ್ಸ್‌ಗಳನ್ನು ಪಡೆದಿದ್ದು, 50 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದೆ.


ವಿಡಿಯೋ ನೋಡಿ:- ಕ್ಲಿಕ್ ಮಾಡಿ


Thanks for reading ವೈರಲ್ ವಿಡಿಯೋ: ತನ್ನ ಮರಿಗಳಿಗೆ ಆಟವಾಡಲು ಗೊಂಬೆ ತಂದು ಕೊಟ್ಟ ತಾಯಿ ನಾಯಿ! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ವೈರಲ್ ವಿಡಿಯೋ: ತನ್ನ ಮರಿಗಳಿಗೆ ಆಟವಾಡಲು ಗೊಂಬೆ ತಂದು ಕೊಟ್ಟ ತಾಯಿ ನಾಯಿ!

Post a Comment