BIG NEWS : ರಾಜ್ಯದ ಶಾಲೆಗಳಲ್ಲಿ ಜೂನ್.15ರಿಂದ 'ದಾಖಲಾತಿ' ಪ್ರಾರಂಭ,ಸಾರ್ವಜನಿಕ ಶಿಕ್ಷಣ ಇಲಾಖೆ'ಯಿಂದ ಆದೇಶ

June 04, 2021
Friday, June 4, 2021

BIG NEWS : ರಾಜ್ಯದ ಶಾಲೆಗಳಲ್ಲಿ ಜೂನ್.15ರಿಂದ 'ದಾಖಲಾತಿ' ಪ್ರಾರಂಭ,ಸಾರ್ವಜನಿಕ ಶಿಕ್ಷಣ ಇಲಾಖೆ'ಯಿಂದ ಆದೇಶ

File Type: News                                                     

File Language :- Kannada

Which Department :- Education

State :- karnataka

Published Date :- 05/06/2021

File Format :-pdf

File Size :- 887kb

Number Of Pages :- 03

Scanned Copy :- Yes

Copy Text :- No

Enable :- Yes

Quality :- High

File Size Reduced :- No

Password Protected :- No

Passworod Encrypted:- No

Image File Available :- Yes

File Vieow Available :- Yes

Download Link Available :- Yes

Cost :- No

Personal Use Only



ಬೆಂಗಳೂರು : ರಾಜ್ಯದ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ 2021-22ನೇ ಶೈಕ್ಷಣಿಕ ಸಾಲಿಗೆ ದಾಖಲಾತಿ ಮತ್ತು ಶುಲ್ಕ ಪಡೆಯುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿ ಹೊರಡಿಸಿದೆ. ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಖಾಸಗಿ ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಪ್ರತಿ ಶೈಕ್ಷಣಿಕ ವರ್ಷದ ಹೊಸ ದಾಖಲಾತಿ ಪ್ರಕ್ರಿಯೆಯು ಈಗ ಪ್ರಾರಂಭವಾಗುತ್ತಿತ್ತು. ಆದ್ರೇ ಕೋವಿಡ್-19 ಮುಂದುವರೆದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಶಾಲಾ-ಕಾಲೇಜುಗಳಲ್ಲಿ ನಿಗದಿತ ಸಮಯಕ್ಕೆ ಪ್ರಾರಂಭಿಸಲು ಸಾಧ್ಯವಾಗಿರುವುದಿಲ್ಲ.

ಭೌತಿಕವಾಗಿ ಶಾಲೆಗಳ ಪುನರಾರಂಭದ ಕುರಿತು ಅನಿಶ್ಚಿತತೆ ಇರುವುದರಿಂದ, ಮಕ್ಕಳನ್ನು ಪರ್ಯಾಯ ಮಾರ್ಗವಾಗಿ ಸಂಪರ್ಕಿಸಿ, ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಾಗಿರುತ್ತದೆ.

ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳನ್ನು ಪರ್ಯಾಯ ಮಾರ್ಗಗಳ ಮೂಲಕ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಸದೇ ಇದ್ದಲ್ಲಿ ಅವರು ಕಲಿಕೆಯಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವ ಸಂಭವವಿದ್ದು, ಶಾಲೆಯಿಂದ ಹೊರಗುಳಿಯುವ ಸಾಧ್ಯತೆ ಇರುತ್ತದೆ. ಇಂತಹ ಕೆಲವು ಮಕ್ಕಳು ಬಾಲ ಕಾರ್ಮಿಕತೆ, ಬಾಲ್ಯವಿವಾಹ ಅಥವಾ ದುಶ್ಚಟಗಳಿಗೆ ಗುರಿಯಾಗುವ ಸಂಭವವಿರುತ್ತದೆ. ಆದುದರಿಂದ ಎಲ್ಲಾ ಮಕ್ಕಳನ್ನು ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಸಿ, ಅವರಿಗೆ ಮನೋಸ್ಥೈರ್ಯವನ್ನು ಹೆಚ್ಚಿಸುವ ಹಾಗೂ ನಿರಂತಹ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಅತ್ಯವಶ್ಯಕವಾಗಿದೆ.

ಜುಲೈ 3ನೇ ವಾರದಲ್ಲಿ SSLC ಪರೀಕ್ಷೆ, ಜುಲೈ ಕೊನೆಯ ವಾರದಲ್ಲೇ ಫಲಿತಾಂಶ - ಸಚಿವ ಎಸ್ ಸುರೇಶ್ ಕುಮಾರ್ ಈ ಹಿನ್ನಲೆಯಲ್ಲಿ 2021-22ನೇ ಸಾಲಿನ ಶೈಕ್ಷಣಿಕ ವರ್ಷದ ವಾರ್ಷಿಕ ಯೋಜನೆಯಂತೆ ಜುಲೈ-01 ರಿಂದ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಯೋಜಿಸಿದ ಹಿನ್ನಲೆಯಲ್ಲಿ ಮಕ್ಕಳ ಶಾಲಾ ಪ್ರವೇಶ ದಾಖಲಾತಿ ಪ್ರಕ್ರಿಯೆಯನ್ನು ಕೆಳಕಂಡಂತೆ ಪ್ರಾರಂಭಿಸುವುದು.

ಶಾಲಾ ದಾಖಲಾತಿಗೆ ತರಗತಿವಾರು ಲಭ್ಯವಿರುವ ಸೀಟುಗಳ ಸಂಖ್ಯೆ, ಪ್ರವೇಶ ಪ್ರಕ್ರಿಯೆ ಪ್ರಕಟಣೆ, ತರಗತಿವಾರು ಪಾವತಿಸಬೇಕಾದ ಶುಲ್ಕದ ವಿವರಗಳನ್ನು ಒಳಗೊಂಡಂತೆ ಶಾಲಾ ಪ್ರವೇಶಕ್ಕೆ ಪೂರಕ ಮಾಹಿತಿಗಳನ್ನು ಸೂಚನಾ ಫಲಕದಲ್ಲಿ ಪ್ರಕಟಿಸಿ, ದಾಖಲಾತಿ ಪ್ರಕ್ರಿಯೆಯನ್ನು ಜೂನ್ 15ರಿಂದ ಪ್ರಾರಂಭಿಸಿ, ಆಗಸ್ಟ್ 31ರೊಳಗೆ ಮುಕ್ತಾಯಗೊಳಿಸುವುದು. ದಾಖಲಾತಿಗಾಗಿ ಶಾಲೆಯ ಆವರಣದಲ್ಲಿ ಮಕ್ಕಳು ಹಾಗೂ ಪೋಷಕರನ್ನು ಒಗ್ಗೂಡಿಸದಂತೆ ಕೋವಿಡ್-19ರ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ದಾಖಲಾತಿ ಮುಂದುವರೆಸುವುದು ಹಾಗೂ ಶಾಲೆಗಳಲ್ಲಿ ತರಗತಿಗಳನ್ನು ಭೌತಿಕವಾಗಿ ಮುಂದಿನ ಆದೇಶದವರೆಗೆ ಪ್ರಾರಂಭಿಸಬಾರದೆಂದು ಸೂಚಿಸಿದೆ.




Thanks for reading BIG NEWS : ರಾಜ್ಯದ ಶಾಲೆಗಳಲ್ಲಿ ಜೂನ್.15ರಿಂದ 'ದಾಖಲಾತಿ' ಪ್ರಾರಂಭ,ಸಾರ್ವಜನಿಕ ಶಿಕ್ಷಣ ಇಲಾಖೆ'ಯಿಂದ ಆದೇಶ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on BIG NEWS : ರಾಜ್ಯದ ಶಾಲೆಗಳಲ್ಲಿ ಜೂನ್.15ರಿಂದ 'ದಾಖಲಾತಿ' ಪ್ರಾರಂಭ,ಸಾರ್ವಜನಿಕ ಶಿಕ್ಷಣ ಇಲಾಖೆ'ಯಿಂದ ಆದೇಶ

Post a Comment